ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಅವರು, 'ಹಾಸನ ಜಿಲ್ಲೆಯ ಸಕಲೇಶಪುರ, ಬೇಲೂರು ಸುತ್ತಮುತ್ತ ಜನರಿಗೆ ತೀವ್ರ ಉಪಟಳ ನೀಡುತ್ತಿದ್ದ ಆನೆಗಳನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಯಶಸ್ವಿಯಾಗಿದೆ. ಸಕಲೇಶಪುರ ಮತ್ತು ಬೇಲೂರು ಸುತ್ತಮುತ್ತ ಅನೇಕ ಗ್ರಾಮಗಳಿಗೆ ಭೀಕರ ಸಮಸ್ಯೆಯಾಗಿದ್ದ ಆನೆಗಳ ಉಪಟಳ ತಡೆಯಲು ಅರಣ್ಯ ಇಲಾಖೆ ಮಾರ್ಚ್ 16ರಿಂದ ಕಾರ್ಯಾಚರಣೆ ಆರಂಭಿಸಿತ್ತು. ಇಂದು, ಹೆಬ್ಬನಹಳ್ಳಿ ಗ್ರಾಮದ ಬಳಿ 3ನೇ ಆನೆಯನ್ನೂ ಯಶಸ್ವಿಯಾಗಿ ಸೆರೆ ಹಿಡಿಯಲಾಗಿದೆ.