Published : Feb 12, 2025, 10:33 AM ISTUpdated : Feb 12, 2025, 11:45 AM IST
Bengaluru News: ಬೆಂಗಳೂರಿನ ಕಸದ ತೊಟ್ಟಿಯಲ್ಲಿ 'ಮುಟ್ಟಿದ ಮೇಲೆ ಕೈ ತೊಳೆಯಿರಿ' ಎಂದು ಬರೆದ ಬ್ಯಾಗ್‌ಗಳು ಪತ್ತೆ. ಒಳಗೆ ಮಹಿಳೆಯ ಬಟ್ಟೆಗಳು, 'ದುಡ್ಡು ಮಾಡಲು ಮದುವೆಯಾದ ಮಹಿಳೆ' ಎಂಬ ಬರಹದ ಬ್ಯಾಗ್ ಕೂಡ ಪತ್ತೆ. ಅತುಲ್ ಸುಭಾಷ್ ಪ್ರಕರಣದ ನಂತರ ಇಂತಹ ಘಟನೆಗಳು ಹೆಚ್ಚುತ್ತಿವೆ ಎಂಬ ಶಂಕೆ.
ಬೆಂಗಳೂರು ನಗರದ ಕಸದ ತೊಟ್ಟಿಯಲ್ಲೊಂದು ವಿಚಿತ್ರ ಬ್ಯಾಗ್ ಪತ್ತೆಯಾಗಿದೆ. ಬ್ಯಾಗ್ ಮೇಲೆ ಮುಟ್ಟಿದ್ಮೇಲೆ ದಯವಿಟ್ಟು ಕೈ ತೊಳೆಯಿರಿ ಎಂದು ಬರೆಯಲಾಗಿದೆ. ಆರಂಭದಲ್ಲಿ ಈ ಬರಹ ಕಂಡು ಜನರು ಶಾಕ್ ಆಗಿದ್ದರು.
25
ಬೆಂಗಳೂರಿನ ಉತ್ತರಹಳ್ಳಿ, ಬನಂಶಂಕರಿಯಲ್ಲಿ ಈ ರೀತಿಯಲ್ಲಿ ಬರಹದ ಪ್ಲಾಸ್ಟಿಕ್ ಕವರ್ ಪತ್ತೆಯಾಗಿದೆ. ಈ ಪ್ಲಾಸ್ಟಿಕ್ ಕವರ್ ಮೇಲಿನ ಬರಹ ಕಂಡು ಸ್ಥಳೀಯ ನಿವಾಸಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಒಟ್ಟು ಮೂರು ಬ್ಯಾಗ್‌ಗಳ ಮೇಲೆ ಈ ರೀತಿಯ ಬರಹ ಬರೆಯಲಾಗಿದೆ.
35
ಇದು ಸುಳ್ಳು ಕೇಸ್ ಹಣ ಪಡೆದ, ಮಾಜಿ ಪತ್ನಿಯ ಹೊಲಸು ಬಟ್ಟೆ. ಮುಟ್ಟಿದ್ಮೇಲೆ ದಯವಿಟ್ಟು ಕೈ ತೊಳೆಯಿರಿ ಎಂದು ಗಂಡ ಬರೆದಿದ್ದಾನೆ. ಬ್ಯಾಗ್‌ನಲ್ಲಿ ಮಹಿಳೆಯ ಬಟ್ಟೆಗಳು ಸಿಕ್ಕಿವೆ. ಮತ್ತೊಂದು ಬ್ಯಾಗ್ ಮೇಲೆ ದುಡ್ಡು ಮಾಡಲು ಮದುವೆಯಾದ ಮಹಿಳೆಯ ಬಟ್ಟೆ ಎಂದು ಬರೆಯಲಾಗಿದೆ.
45
ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಪ್ರಕರಣದ ಬಳಿಕ ಹಲವರು ಪತ್ನಿಯರಿಂದ ತಮಗಾಗುತ್ತಿರುವ ನೋವುಗಳನ್ನು ಬಹಿರಂಗವಾಗಿ ಹೇಳಿಕೊಳ್ಳಲು ಆರಂಭಿಸಿದ್ದರು. ಬಹುಶಃ ಪತ್ನಿಯಿಂದ ಡಿವೋರ್ಸ್ ಪಡೆದ ನಂತರ ಪುರುಷರು ಮನೆಯಲ್ಲಿರೋ ಬಟ್ಟೆಗಳನ್ನು ಕಸದ ತೊಟ್ಟಿಗೆ ಎಸೆದಿರಬಹುದು ಎಂದು ಶಂಕಿಸಲಾಗಿದೆ.
55
ಏನಿದು ಅತುಲ್ ಸುಭಾಷ್ ಕೇಸ್?
ಪತ್ನಿ ಹಾಗೂ ಆಕೆಯ ಕುಟುಂಬದ ಸದಸ್ಯರು ಸುಳ್ಳು ಪ್ರಕರಣ ದಾಖಲಿಸಿ ತನಗೆ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ 2024 ಡಿ.9ರಂದು ಆಡಿಯೋ ಮಾಡಿದ್ದ ಸಾಫ್ಟ್‌ವೇರ್ ಎಂಜಿನಿಯರ್ ಅತುಲ್ ಸುಭಾಷ್ (34), ಸುದೀರ್ಘ ಡೆತ್ ನೋಟ್ ಬರೆದು ಮಾರತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.