Bengaluru ಲಾಲ್‌ಬಾಗ್‌ನಲ್ಲಿ ಕಲ್ಲಂಗಡಿ, ದ್ರಾಕ್ಷಿ ಮೇಳಕ್ಕೆ ಚಾಲನೆ

Kannadaprabha News   | Asianet News
Published : Mar 04, 2022, 05:26 AM IST

ಬೆಂಗಳೂರು(ಮಾ.04): ರೈತರಿಗೆ(Farmers) ಹೆಚ್ಚಿನ ಅನುಕೂಲ ಕಲ್ಪಿಸಲು ಹಾಪ್‌ಕಾಮ್ಸ್‌ ಮಳಿಗೆಗಳನ್ನು ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ(Munirathna) ಹೇಳಿದ್ದಾರೆ.

PREV
15
Bengaluru ಲಾಲ್‌ಬಾಗ್‌ನಲ್ಲಿ ಕಲ್ಲಂಗಡಿ, ದ್ರಾಕ್ಷಿ ಮೇಳಕ್ಕೆ ಚಾಲನೆ

ಲಾಲ್‌ಬಾಗ್‌ನ ಹಾಪ್‌ಕಾಮ್ಸ್‌ನಲ್ಲಿ ಕರ್ನಾಟಕ ತೋಟಗಾರಿಕೆ ಇಲಾಖೆ(Karnataka Horticulture Department) ಆಯೋಜಿಸಿರುವ ದ್ರಾಕ್ಷಿ-ಕಲ್ಲಂಗಡಿ ಮೇಳ(Grape-Watermelon Fair) ಉದ್ಘಾಟಿಸಿ ಮಾತನಾಡಿದ ಅವರು, ಬೆಲೆ ಕುಸಿತವಾದಾಗ ರೈತರ ಉತ್ಪನ್ನಗಳನ್ನು ದಾಸ್ತಾನು ಮಾಡಲು ಅನುಕೂಲವಾಗುವಂತೆ 10 ಟನ್‌ ಸಾಮರ್ಥ್ಯದ ಎರಡು ಶೀತಲ ಸಂಗ್ರಹಗಾರ ಸ್ಥಾಪಿಸಲಾಗಿದೆ. ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ಸಚಿವರು ಹೇಳಿದರು.

25

ಇನ್ನೂ ಅನೇಕ ಕಡೆ ಶೀತಲ ಸಂಗ್ರಹಕಗಳನ್ನು ನಿರ್ಮಿಸಿ ರೈತರಿಗೆ ನೆರವು ನೀಡುವ ಉದ್ದೇಶ ಹೊಂದಿದ್ದು, ಬಜೆಟ್‌ನಲ್ಲಿ(Budget) ಅನುದಾನ ನೀಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದ್ದೇವೆ. ಹಾಪ್‌ಕಾಮ್ಸ್‌ ಸಂಸ್ಥೆ ರೈತರೊಂದಿಗೆ ನೇರ ಸಂಪರ್ಕ ಹೊಂದಿರುವುದರಿಂದ ಸಂಸ್ಥೆಯ ಅಭಿವೃದ್ಧಿಯು ರೈತರ ಮೇಲೆ ಸಕಾರಾತ್ಮಕ ಪ್ರಭಾವ ಬೀರಲಿದೆ ಎಂದು ತಿಳಿಸಿದ ಸಚಿವರು

35

ಈ ವರ್ಷವು ರೈತರಿಗೆ ಉತ್ತಮ ಮಾರುಕಟ್ಟೆಕಲ್ಪಿಸಲು ಮತ್ತು ಗ್ರಾಹಕರಿಗೆ ರೈತರಿಗೆ ರಿಯಾಯಿತಿ ದರದಲ್ಲಿ ದ್ರಾಕ್ಷಿ, ಕಲ್ಲಂಗಡಿ ಒದಗಿಸಲು ಮೇಳ ಆಯೋಜಿಸಲಾಗಿದೆ. ಸುಮಾರು 10 ಬಗೆಯ ದ್ರಾಕ್ಷಿ, 2 ತಳಿಯ ಕಲ್ಲಂಗಡಿ ಹಣ್ಣನ್ನು ಮಾರಾಟಕ್ಕೆ ಇಡಲಾಗಿದೆ ಎಂದು ಸಚಿವರು ಹೇಳಿದರು. ಹಾಪ್‌ಕಾಮ್ಸ್‌ ಅಧ್ಯಕ್ಷ ಎನ್‌. ದೇವರಾಜ್‌, ವ್ಯವಸ್ಥಾಪಕ ನಿರ್ದೇಶಕ ಉಮೇಶ್‌ ಶಂಕರ್‌ ಮಿರ್ಜಿ, ನಿರ್ದೇಶಕ ಶಿವಮಾದು ಮುಂತಾದವರು ಉಪಸ್ಥಿತರಿದ್ದರು.

45

ಮೇ ತಿಂಗಳ ಅಂತ್ಯದವರೆಗೆ ಮೇಳ ಇರಲಿದೆ. ಮಾ.10ರ ವರೆಗೆ ಗ್ರಾಹಕರಿಗೆ ಕೆ.ಜಿ. ಹಣ್ಣಿನ ದರದ ಮೇಲೆ ಶೇ.5ರಷ್ಟುರಿಯಾಯಿತಿ ಸಿಗಲಿದೆ. ಮೇಳದಲ್ಲಿ ಅಂದಾಜು 400ರಿಂದ 500 ಮೆಟ್ರಿಕ್‌ ಟನ್‌ ದ್ರಾಕ್ಷಿ ಹಾಗೂ 800ರಿಂದ 1000 ಮೆಟ್ರಿಕ್‌ ಟನ್‌ ಕಲ್ಲಂಗಡಿ ಹಣ್ಣಿನ ವಾಹಿವಾಟು ನಡೆಸುವ ಗುರಿಯನ್ನು ಹೊಂದಲಾಗಿದೆ.

55

ಕೃಷ್ಣ ಶರದ್‌, ಜಂಬೂ ಶರದ್‌, ಸೋನಾಕ, ನೀಲಿ, ಟಿ.ಜಿ., ಕೃಷ್ಣ ಶರದ್‌ ಸೂಪರ್‌, ಟಿ.ಎಸ್‌., ಸೂಪರ್‌ ಸೋನಾಕ, ಶರದ್‌, ಆಸ್ಪ್ರೇಲಿಯಾ ರೇಡ್‌ ಗ್ಲೋಬ್‌, ಇಂಡಿಯನ್‌ ರೇಡ್‌ ಗ್ಲೋಬ್‌ ದ್ರಾಕ್ಷಿ ಹಾಗೂ ಕಲ್ಲಂಗಡಿಯಲ್ಲಿ ಕಿರಣ್‌, ನಾಮಧಾರಿ, ಹಳದಿ ಬಣ್ಣ ಕಲ್ಲಂಗಡಿ, ಬೀಜ ರಹಿತ ಕಲ್ಲಂಗಡಿ ಸೇರಿದಂತೆ ಇತರೆ ತಳಿಯ ಕಲ್ಲಂಗಡಿಯ ಮಾರಾಟ ಹಾಗೂ ಪ್ರದರ್ಶನ ಮೇಳದಲ್ಲಿ ಇರಲಿದೆ.

Read more Photos on
click me!

Recommended Stories