ಕೊರೋನಾದಿಂದ ಮೃತಪಟ್ಟವರ ಉಚಿತ ಅಂತ್ಯಕ್ರಿಯೆ: ಗ್ರಾಪಂ ಸಿಬ್ಬಂದಿಯಿಂದ ಮಾನವೀಯ ಕಾರ್ಯ

First Published | May 26, 2021, 1:29 PM IST

ಬಾಗಲಕೋಟೆ(ಮೇ.26): ಮಹಾಮಾರಿ ಕೊರೋನಾನಿಂದ ಮೃತಪಟ್ಟವರ ಉಚಿತ ಅಂತ್ಯಕ್ರಿಯೆ ಮಾಡುವ ಮೂಲಕ ಜಿಲ್ಲೆಯ ಮುಧೋಳ ತಾಲೂಕಿನ ಶಿರೋಳ ಗ್ರಾಮ ಪಂಚಾಯತಿ ಸಿಬ್ಬಂದಿ ಮಾನವೀಯತೆ ಮೆರೆಯುತ್ತಿದ್ದಾರೆ. ಗ್ರಾಮ ಪಂಚಾಯತಿ ಸಿಬ್ಬಂದಿಗೆ ಕೆಲವು ಸ್ವಯಂ ಸೇವಕರೂ ಕೂಡ ಸಾಥ್ ಕೊಟ್ಟಿದ್ದಾರೆ. 
 

6 ಜನರ ತಂಡವೊಂದನ್ನು ಕಟ್ಟಿಕೊಂಡು ಉಚಿತ ಅಂತ್ಯಕ್ರಿಯೆ ನಡೆಸುತ್ತಿರುವ ಗ್ರಾಮ ಪಂಚಾಯತಿ ಸಿಬ್ಬಂದಿ
ಗ್ರಾಮ ಪಂಚಾಯತಿ ವಾಟರ್‌ಮನ್, ಗ್ರಾಮ ಸಹಾಯಕ, ಗ್ರಾಮ ಪಂಚಾಯತಿ ಸದಸ್ಯ ಸೇರಿದಂತೆ ಮೂವರು ಸ್ವಯಂ ಸೇವಕರೂ ಸೇರಿ ಮಾನವೀಯ ಕಾರ್ಯ ನಡೆಸುತ್ತಿರುವ ಈ ತಂಡ
Tap to resize

ಗ್ರಾಮದಲ್ಲಿ ಯಾರೇ ಕೋವಿಡ್‌ನಿಂದ ಮೃತಪಟ್ಟರೂ ಪಿಪಿಇ ಕಿಟ್ ಧರಿಸಿ ಅಂತ್ಯಕ್ರಿಯೆಗೆ ಸಜ್ಜಾಗುವ ತಂಡ
ಗ್ರಾಮ ಪಂಚಾಯತಿ ವಾಟರ್‌ಮನ್ ಲಕ್ಷ್ಮಣ ನಬಾಬ, ಗ್ರಾಮ ಸಹಾಯಕ ಖ್ವಾಜಾಮೀನ್ ವಾಲೀಕಾರ, ಗ್ರಾಮ ಪಂಚಾಯತಿ ಸದಸ್ಯ ಯಮನಪ್ಪ ತಳಗೇರಿ ಸೇರಿದಂತೆ ಸ್ವಯಂ ಸೇವಕರಾದ ದಸ್ತಗೀರಸಾಬ, ವಿಕಾಸ, ಮೈಬೂಸಾಬ್ ಎಂಬುವವರಿಂದ ಕಾರ್ಯನಿರ್ಹಹಿಸುತ್ತಿರುವ ತಂಡ
ಸರ್ಕಾರದ ಮಾರ್ಗಸೂಚಿಯಂತೆ ಕೋವಿಡ್ ನಿಯಮಾವಳಿಯನ್ವಯ ಅಂತ್ಯ ಸಂಸ್ಕಾರ
ಕೋವಿಡ್ ಸಮಯದಲ್ಲಿ ನಿಸ್ವಾರ್ಥ ಸೇವೆಗೆ ಗ್ರಾಮಸ್ಥರಿಂದ ಧನ್ಯವಾದ

Latest Videos

click me!