ಸೂರ್ಯನ ಸುತ್ತ ಬಣ್ಣದುಂಗುರ: ಆಕಾಶದತ್ತ ಬೆಂಗಳೂರಿಗರ ಕಣ್ಣು: ಪೋಟೋಸ್‌ ವೈರಲ್

First Published | May 24, 2021, 1:04 PM IST

ಕಳೆದ ಕೆಲ ದಿನಗಳಿಂದ ಜಿಟಿ ಜಿಟಿ ಮಳೆ ಕಂಡಿದ್ದ ಬೆಂಗಳೂರಿಗರು ಇದು ಅಪರೂಪದ ದೃಶ್ಯವನ್ನು ಕಣ್ತುಂಬಿಕೊಂಡಿದ್ದಾರೆ. ಹೌದು ಬೆಂಗಳೂರಿನಲ್ಲಿ ಇಂದು, ಸೋಮವಾರ ಸೂರ್ಯನ ಸುತ್ತ ಮೂಡಿದ್ದ ಉಂಗುರದಂತಹ ಕಾಮನಬಿಲ್ಲು ಗೋಚರಿಸಿದೆ. ಸದ್ಯ ಇದರ ಫೋಟೋಗಳು ವೈರಲ್ ಆಗಿವೆ.

ಬೆಂಗಳೂರಿನ ಹಲವೆಡೆ ಇಂದು ಜನರು ಆಕಾಶದತ್ತ ನೋಡಿ, ಸೂರ್ಯನ ಫೋಟೋ ತೆಗೆದು ಸೋಶಿಯಲ್ ಮೀಡಿಯಾಗೆ ಹಾಕಿ ಸಂಭ್ರಮಿಸುತ್ತಿದ್ದಾರೆ.
undefined
ಇದಕ್ಕೆ ಕಾರಣವೆಂದರೆ, ಸೂರ್ಯನ ಸುತ್ತ ವಿಶೇಷವಾಗಿ ಕಾಣಿಸಿಕೊಂಡಿರುವ ಹೊಳೆಯುವ ಉಂಗುರ.
undefined

Latest Videos


ಈ ವೃತ್ತಾಕಾರದ ಕಾಮನಬಿಲ್ಲಿಗೆ ಕಾರಣವೇನು ? ಇದು ಶುಭಸೂಚನೆಯೇ ? ಅಶುಭ ಸೂಚನೆಯೇ ? ಎಂಬ ಬಗ್ಗೆ ಚರ್ಚೆಗಳು ಆರಂಭವಾಗಿದೆ.
undefined
ಅಸಲಿಗೆ ಇದು ಸೂರ್ಯನ ಸುತ್ತ ಕಂಡು ಬರುವ ಅಪರೂಪದ 22° ಹ್ಯಾಲೋ. ಇದು ಇಂದು ಬೆಳಗ್ಗಿನಿಂದ ಗೋಚರವಾಗಿದ್ದು, ವೃತ್ತಾಕಾರದಲ್ಲಿ ಕಾಮನ ಬಿಲ್ಲು ಕೂಡ ಗಮನ ಸೆಳೆಯಿತು
undefined
ವೈಜ್ಞಾನಿಕವಾಗಿ ವಾತಾವರಣದಲ್ಲಿ ನೀರಿನ ಹನಿಗಳು ಜಾಸ್ತಿ ಇದ್ದರೆ ಬೆಳಕಿನ ಪ್ರತಿಫಲನ ಹಾಗೂ ವಕ್ರೀಭವನ ಆಗುವುದೇ ಕಾಮನಬಿಲ್ಲಿಗೆ ಕಾರಣವಾಗುತ್ತದೆಂದು ಹೇಳಲಾಗುತ್ತಿದೆ.
undefined
ಸೂರ್ಯನ ಪ್ರಭಾ ವಲಯದಿಂದ ಕಿರಣಗಳು ಮಳೆ ಮೋಡವನ್ನು ಭೇದಿಸಿಕೊಂಡು ಭೂಮಿಗೆ ಬರುವಾಗ ಏಳು ಬಣ್ಣಗಳ ವೃತ್ತಾಕಾರ ಮೂಡುತ್ತದೆ.
undefined
ಈ ಅಪರೂಪದ 22° ಹ್ಯಾಲೋ ವಿದ್ಯಮಾನ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
undefined
ಮೋಡಗಳಲ್ಲಿರುವ ಮಂಜುಗಡ್ಡೆ ಹರಳುಗಳು ಸೂರ್ಯನಿಗೆ 22 ಡಿಗ್ರಿ ಅಥವಾ ಹೆಚ್ಚಿನ ಕೋನದಲ್ಲಿ ವಕ್ರೀಭವನಕ್ಕೀಡಾಗುತ್ತವೆ ಮತ್ತು ಸೂರ್ಯನ ಸುತ್ತ ವೃತ್ತಾಕಾರವಾಗಿ ಹರಡಿಕೊಳ್ಳುತ್ತವೆ.
undefined
ಈ ಹರಳುಗಳ ಮೂಲಕ ಸೂರ್ಯನ ಬೆಳಕು ಹಾದುಹೋಗುವಾಗ, ಬಿಳಿಯ ಕಿರಣವು ಕಾಮನಬಿಲ್ಲಿನ ಏಳು ಬಣ್ಣಗಳಾಗಿ ಚದುರಿ, ಆಕರ್ಷಕ ಕಾಮನಬಿಲ್ಲು ಗೋಚರಿಸುತ್ತದೆ. ಇದು ತೀರಾ ಅಪರೂಪವೇನಲ್ಲ ಎನ್ನುತ್ತಾರೆ ಖಗೋಳಶಾಸ್ತ್ರಜ್ಞರು.
undefined
ಇದು ಸೂರ್ಯನ ಬೆಳಕು, ಮೋಡದಲ್ಲಿರುವ ಮಂಜುಗಡ್ಡೆಯ ಹರಳುಗಳೊಂದಿಗಿನ ಸಂವಹನದ ವೇಳೆ ಸಂಭವಿಸುವ ಬೆಳಕಿನ ಪ್ರತಿಫಲನಾತ್ಮಕ ಪ್ರಕ್ರಿಯೆ.
undefined
ಮಳೆಯ ವಾತಾವರಣವಿದ್ದಾಗ, ಭೂಮಿಯ ಮೇಲ್ಮೈಯಿಂದ 5ರಿಂದ 8 ಕಿ.ಮೀ. ಎತ್ತರದಲ್ಲಿರುವ ಹವಾಗೋಲದಲ್ಲಿ ಸಿರಸ್ ಅಥವಾ ಸಿರೋಸ್ಟ್ರೇಟಸ್ ಮೋಡಗಳು ರೂಪುಗೊಂಡಾಗ ಈ ದೃಶ್ಯ ವೈವಿಧ್ಯ ನಡೆಯುತ್ತದೆ.
undefined
ಕೆಲವರು ಇದು ಶುಭ ಅಶುಭ ಎಂಬ ರೀತಿಯಲ್ಲೂ ಚರ್ಚೆ ಮಾಡುತ್ತಿದ್ದಾರೆ.
undefined
ಕೊರೋನಾ ಸಂಕಷ್ಟ ಕಾಲದಲ್ಲೇ ಈ ವಿದ್ಯಾಮಾನ ನಡೆದಿರುವುದರಿಂದ ಜೋತಿಷ್ಯ ಶಾಸ್ತ್ರದಲ್ಲಿ ಇದರ ಉಲ್ಲೇಖಗಳೇನು ಎಂಬ ಬಗ್ಗೆಯೂ ಚರ್ಚೆಗಳು ನಡೆಯುತ್ತಿದೆ.
undefined
ಇದು ಸೂರ್ಯನ ಸುತ್ತಾ ಮಾತ್ರ ಕಾಣುವುದೇ?: ಇಲ್ಲ, ಸೂರ್ಯ, ಚಂದ್ರ ಎರಡರ ಸುತ್ತ ಈ ರೀತಿ ಉಂಗುರವನ್ನು ಕಾಣಬಹುದು. ಇದನ್ನು ಉಂಗುರ ಅನ್ನುವುದರ ಬದಲು halo ಎಂದು ಕರೆಯಲಾಗುತ್ತದೆ.
undefined
ಕಾಮನಬಿಲ್ಲುಗೂ ಉಂಗುರದ ಸೂರ್ಯನಿಗೂ ಏನು ವ್ಯತ್ಯಾಸ: ಕಾಮನಬಿಲ್ಲಿನಂತೆ ಕಾಣುವ ಈ ಉಂಗುರದಲ್ಲಿ ಕಾಮನಬಿಲ್ಲಿನಲ್ಲಿ ಕಾಣುವ ಎಲ್ಲಾ ಬಣ್ಣಗಳು ಕಾಣಿಸುವುದಿಲ್ಲ. ಉಂಗುರದ ಸೂರ್ಯನ ಸುತ್ತಾ ಹೆಚ್ಚೆಂದರೆ ಕೆಂಪು, ಹಳದಿ, ಬೂದು ಬಣ್ಣ ಕಾಣಿಸಿದರೆ ಹೆಚ್ಚು. ಇನ್ನು ಕಾಮನಬಿಲ್ಲು ಅರ್ಧ ಚಂದ್ರಾಕೃತಿಯಲ್ಲಿ ಮಾತ್ರ ಕಾಣಿಸುತ್ತದೆ. ಸೂರ್ಯನ ಸುತ್ತಲಿರುವ ಉಂಗುರದ ಒಳಭಾಗದಲ್ಲಿ ಕೆಂಪು ಮತ್ತು ಹೊರಭಾಗದಲ್ಲಿ ನೀಲಿ ಬಣ್ಣ ಕಾಣಿಸುತ್ತದೆ. ಪ್ರತಿಬಾರಿ ಮಂಜಿನ ಮೋಡಗಳು ಸೃಷ್ಟಿಯಾದಾಗ ಈ ಉಂಗುರಗಳು ಕಾಣಿಸುವುದಿಲ್ಲ, ಬಿಸಿಲು ಮಳೆ ಬಿದ್ದರೆ ಕಾಮನಬಿಲ್ಲು ನಿರೀಕ್ಷಿಸಬಹುದು.
undefined
click me!