ಗದಗ ಜಿಲ್ಲೆಯ ರಾಚೂಟೇಶ್ವರ ಸ್ವಾಮೀಜಿಯವರು ಮಹದಾಯಿ ಯೋಜನೆ ಮತ್ತು ಲೋಕ ಕಲ್ಯಾಣಕ್ಕಾಗಿ 33 ದಿನಗಳ ಕಾಲ ಯೋಗಸಮಾಧಿಯಲ್ಲಿದ್ದರು. ಅನ್ನ, ನೀರು, ಗಾಳಿ, ಬೆಳಕಿಲ್ಲದೆ 775 ಗಂಟೆಗಳ ಕಠಿಣ ಅನುಷ್ಠಾನದ ನಂತರ, ಅವರು ಸಮಾಧಿಯಿಂದ ಯಶಸ್ವಿಯಾಗಿ ಹೊರಬಂದು ಭಕ್ತರಿಗೆ ದರ್ಶನ ನೀಡಿದ್ದಾರೆ.
ಮಹದಾಯಿ ಯೋಜನೆ ಜಾರಿ ಸೇರಿದಂತೆ ಜಗತ್ತಿನ ಕಲ್ಯಾಣಕ್ಕಾಗಿ ಜೂನ್ 3ರ ಮಧ್ಯರಾತ್ರಿ ಗದಗದ ಜಿಲ್ಲೆಯಲ್ಲಿರುವ ರಾಚೂಟೇಶ್ವರ ಸ್ವಾಮೀಜಿಯವರು ಸಮಾಧಿ ಸ್ಥಿತಿಗೆ ಹೋಗಿದ್ದರು. 33 ದಿನಗಳ ಬಳಿಕ ಸಮಾಧಿಯಿಂದ ಹೊರಗೆ ಬಂದು ಭಕ್ತರಿಗೆ ದರ್ಶನ ನೀಡಿದ್ದಾರೆ. ಅನ್ನ, ನೀರು, ಗಾಳಿ ಮತ್ತು ಬೆಳಕಿಲ್ಲದೆ ಸತತ 775 ಗಂಟೆಗಳ ಕಾಲ ಸ್ವಾಮೀಜಿಗಳು ಯೋಗಸಮಾಧಿಯಲ್ಲಿದ್ದರು ಎಂದು ಭಕ್ತರು ಹೇಳುತ್ತಿದ್ದಾರೆ.
24
ಕಠಿಣ ಅನುಷ್ಠಾನ
ಸಿಮೆಂಟ್‌ನಿಂದ ಸಂಪೂರ್ಣವಾಗಿ ಪ್ಯಾಕ್ ಮಾಡಲಾಗಿದ್ದ ಕಲ್ಲಿನ ಮಂಟಪದೊಳಗೆ ಸ್ವಾಮೀಜಿಯವರು 33 ದಿನಗಳ ಕಾಲ ಕಳೆದಿದ್ದಾರೆ. ಇಂದು ಆ 33 ದಿನಗಳ ಶಿವಯೋಗ ಸಮಾಧಿ ಅಂತ್ಯಗೊಂಡಿದ್ದು, ಸ್ವಾಮೀಜಿಯವರು ಸಮಾಧಿಯಿಂದ ಯಶಸ್ವಿಯಾಗಿ ಆಚೆ ಬಂದಿದ್ದಾರೆ. ಸಮಾಧಿಯಿಂದ ಹೊರಬಂದ ನಂತರ ಅಭ್ಯಂಗ (ಸ್ನಾನ) ಮುಗಿಸಿ, ಅಪಾರ ಭಕ್ತ ಸಮೂಹಕ್ಕೆ ರಾಚೂಟೇಶ್ವರ ಸ್ವಾಮೀಜಿಯವರು ದರ್ಶನ ನೀಡಿದರು.
34
ಭಕ್ತರ ಭಾವನೆ ಮತ್ತು ಹಿನ್ನೆಲೆ
ಮೊದಲು ನಮಗೆ ತುಂಬಾ ಆತಂಕ ಇತ್ತು. ಆದ್ರೀಗ ಸ್ವಾಮಿಗಳನ್ನು ಜೀವಂತವಾಗಿ ಮತ್ತು ಆರೋಗ್ಯವಾಗಿ ನೋಡಿ ತುಂಬಾ ಖುಷಿಯಾಗುತ್ತಿದೆ ಎಂದು ಗ್ರಾಮಸ್ಥರು ಭಾವುಕರಾಗಿ ನುಡಿದಿದ್ದಾರೆ. ಸ್ವಾಮೀಜಿಯವರು ಈ ಹಿಂದೆಯೂ ಶಿವಯೋಗ ಸಮಾಧಿ ಹಾಗೂ ಮೌನಾನುಷ್ಠಾನಗಳನ್ನು ಮಾಡಿದ್ದರಾದರೂ, ಇಷ್ಟು ಸುದೀರ್ಘವಾಗಿ (33 ದಿನಗಳ ಕಾಲ) ಸಮಾಧಿಯಾಗಿದ್ದು ಇದೇ ಮೊದಲ ಬಾರಿ.
ಈ ಯೋಗದ ಅಚ್ಚರಿಯನ್ನು ಕಣ್ತುಂಬಿಕೊಳ್ಳಲು ಮತ್ತು ಸ್ವಾಮಿಗಳ ದರ್ಶನ ಪಡೆಯಲು ತೆಲಂಗಾಣ ಸೇರಿದಂತೆ ನಾಡಿನ ವಿವಿಧ ಭಾಗಗಳಿಂದ ಸಾವಿರಾರು ಸಂಖ್ಯೆಯ ಭಕ್ತರು ಗದಗ ತಾಲೂಕಿನ ಅಂತೂರು ಬೆಂತೂರು ಗ್ರಾಮದ ಬೂದೀಶ್ವರ ಮಠದತ್ತ ಆಗಮಿಸುತ್ತಿದ್ದಾರೆ.