ಚಿಕ್ಕಮಗಳೂರಿನಲ್ಲಿ ಕಳೆದೆರಡು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಗಾಳಿಯ ವೇಗ ಹೆಚ್ಚಿರುವುದರಿಂದ ಮರಗಳು ಧರೆಗುರುಳುತ್ತಿವೆ. ಮೂಡಿಗೇರೆಯ ಕೋಳೂರು ಗ್ರಾಮದಲ್ಲಿ ರೈತನ ಮನೆ ಮೇಲೆ ಬೃಹತ್ ಮರ ಬಿದ್ದು ಸಂಪೂರ್ಣ ಮನೆ ಜಖಂಗೊಂಡಿದೆ. ಅದೃಷ್ಟವಶಾತ್ Yಆವುದೇ ಸಾವು ನೋವು ಸಂಭವಿಸಿಲ್ಲ>
ಮಲೆನಾಡು ಚಿಕ್ಕಮಗಳೂರಲ್ಲಿ ಗಾಳಿ ಮಳೆ ಅಬ್ಬರಿಸುತ್ತಿದೆ ಇದರ ಪರಿಣಾಮವಾಗಿ ಬೃಹತ್ ಮರಗಳು ಧರೆಗುರುಳುತ್ತಿವೆ. ಕೆಲವು ಮನೆಗಳ ಮೇಲೆಯೇ ಬಿದ್ದು ಸಾವು ನೋವಿನ ಘಟನೆಗಳು ನಡೆದಿವೆ. ಶನಿವಾರವೂ ಕೂಡ ಅಬ್ಬರಿಸಿದ ಮಳೆರಾಯ ರಾತ್ರಿಯಿಡೀ ಮಳೆ ಜೊತೆ ಭೀಕರ ಬಿರುಗಾಳಿ ಆರ್ಭಟ ಮುಂದುವರಿದೆ.
25
ಮಲೆನಾಡಲ್ಲಿ ಭಾರೀ ಮಳೆ-ಗಾಳಿ: ಮನೆ ಮೇಲೆ ಬಿದ್ದ ಬೃಹತ್ ಮರ!
ಮಲೆನಾಡಲ್ಲಿ ಗಾಳಿ-ಮಳೆ ಅಬ್ಬರ ಜೋರಾಗಿದ್ದು, ಮರಗಳು ಭೀಕರ ಗಾಳಿಗೆ ನಿಲ್ಲಲಾಗದೆ ಧರೆಗುರುಳುತ್ತಿವೆ. ಮೂಡಿಗೆರೆ ತಾಲೂಕಿನ ಕೋಳೂರು ಗ್ರಾಮದಲ್ಲಿ ಅನಾಹುತಕಾರಿ ಘಟನೆ ನಡೆದು ಹೋಗಿದೆ.
35
ಮನೆಮೇಲೆ ಮುರಿದುಬಿದ್ದ ಮರ!
ಮೂಡಿಗೆರೆ ತಾಲೂಕಿನ ಕೋಳೂರು ಗ್ರಾಮದಲ್ಲಿ ನಿನ್ನೆ ರಾತ್ರಿಯಿಡೀ ಸುರಿದ ಮಳೆ, ಗಾಳಿಗೆ ಜನಜೀವನ ಅಸ್ತವ್ಯವಸ್ತಗೊಂಡಿತು. ಕೆಲವು ಮನೆಗಳಿಗೆ ನೀರು ನುಗ್ಗಿದರೆ ಇನ್ನು ಕೋಳೂರು ಗ್ರಾಮದ ಸಿದ್ಧಪ್ಪ ಎಂಬುವವರ ಮನೆಮೇಲೆಯೇ ಮರ ಉರುಳಿಬಿದ್ದಿದ್ದು ಚಿಕ್ಕ ಮನೆ ಸಂಪೂರ್ಣ ಮುರಿದುಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಹಾನಿ ಸಂಭವಿಸಿಲ್ಲ.
ಕಳೆದೆರಡು ದಿನಗಳಿಂದ ಮಲೆನಾಡ ಭಾಗದಲ್ಲಿ ಸಾಧಾರಣವಾಗಿದ್ದರೂ ನಿರಂತರ ಮಳೆಯಾಗುತ್ತಿದೆ ಶನಿವಾರ ರಾತ್ರಿಯಿಡೀ ಸುರಿದ ಮಳೆ. ಇದರೊಂದಿಗೆ ಭೀಕರ ಗಾಳಿಯಿಂದಾಗಿ ಮರಳ ಮುರಿದುಬಿಳುತ್ತಿವೆ. ಮಳೆಗಿಂತ ಗಾಳಿಯ ವೇಗ ಜೋರಾಗಿದ್ದು ನಾನಾ ಅವಾಂತರ ಸೃಷ್ಟಿಸಿಸಿದೆ.
55
ಚಿಕ್ಕಮಗಳೂರು ಮಳೆ: ಅವಾಂತರ
ಮನೆ ಮೇಲೆ ಮರ ಬಿದ್ದಿರುವ ಸುದ್ದಿ ತಿಳಿದು ಸ್ಥಳಕ್ಕೆ ಮೂಡಿಗೆರೆ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿ ಮನೆ ಪರಿಶೀಲಿಸಿದ್ದಾರೆ. ಇನ್ನು ಮಳೆಯಾಗುವ ಮುನ್ಸೂಚನೆಯಿಂದ ಬೆಟ್ಟ, ಇಳಿಜಾರಿನ ಪ್ರದೇಶ, ಮರಗಳ ಕೆಳಗೆ ಮನೆ ಮಾಡಿರುವ ನಾಗರಿಕರು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸಲಹೆ ನೀಡಿದ್ದಾರೆ.