ರಾಯಚೂರು ನಗರ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಸೈಯದ್ ಯಾಸೀನ್ ನಿಧನ; ಇಂದು ಅಂತ್ಯಕ್ರಿಯೆ

Published : Jul 12, 2026, 11:27 AM IST

ರಾಯಚೂರು ನಗರ ಕ್ಷೇತ್ರದ ಕಾಂಗ್ರೆಸ್ ಮಾಜಿ ಶಾಸಕ ಸೈಯದ್ ಯಾಸೀನ್ (74) ಅವರು ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್ ಅವರ ಅಳಿಯರಾಗಿದ್ದ ಯಾಸೀನ್ ಅವರ ಅಂತ್ಯಕ್ರಿಯೆ ರಾಯಚೂರಿನಲ್ಲಿ ನಡೆಯಲಿದೆ.

PREV
15
ಮಾಜಿ ಶಾಸಕ ಸೈಯದ್ ಯಾಸೀನ್ ನಿಧನ

ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ನ ಮಾಜಿ ಶಾಸಕರಾದ ಸೈಯದ್ ಯಾಸೀನ್ ಅವರು ಇಂದು ಮುಂಜಾನೆ 8:45 ಕ್ಕೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಸೈಯದ್ ಯಾಸೀನ್ ಅವರಿಗೆ 74 ವರ್ಷ ವಯಸ್ಸು ಆಗಿತ್ತು.

25
ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್ ಅವರ ಅಳಿಯ

ಕಳೆದ ಕೆಲವು ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸೈಯದ್ ಯಾಸೀನ್ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತ ಮಾಜಿ ಶಾಸಕರು ಪತ್ನಿ ಹಾಗೂ ನಾಲ್ಕು ಜನ ಗಂಡು ಮಕ್ಕಳನ್ನು ಅಗಲಿದ್ದಾರೆ. ಇವರು ಕೇಂದ್ರದ ಮಾಜಿ ಸಚಿವ ಸಿ.ಕೆ. ಜಾಫರ್ ಷರೀಫ್ ಅವರ ಅಳಿಯನಾಗಿದ್ದರು.

35
ರಾಜಕೀಯ ಹಿನ್ನೆಲೆ

ರಾಯಚೂರು ಜಿಲ್ಲಾ ಕಾಂಗ್ರೆಸ್‌ನ ಪ್ರಭಾವಿ ರಾಜಕಾರಣಿಯಾಗಿದ್ದ ಸೈಯದ್ ಯಾಸೀನ್ ಅವರು ರಾಯಚೂರು ನಗರ ವಿಧಾನಸಭಾ ಕ್ಷೇತ್ರದಿಂದ ಒಟ್ಟು ಆರು ಬಾರಿ ಸ್ಪರ್ಧಿಸಿದ್ದರು. ಈ ಪೈಕಿ 1999 ಮತ್ತು 2008 ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು.

45
ಕೆಪಿಸಿಸಿಯಲ್ಲಿಯೂ ಕೆಲಸ

ಸೈಯದ್ ಯಾಸೀನ್ ಅವರು ತಮ್ಮ ರಾಜಕೀಯ ಜೀವನದಲ್ಲಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಮತ್ತು ಕೆಪಿಸಿಸಿಯ (KPCC) ಅಲ್ಪಸಂಖ್ಯಾತ ವಿಭಾಗದ ರಾಜ್ಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

55
ಅಂತ್ಯಕ್ರಿಯೆ

ಸದ್ಯ ಸೈಯದ್ ಯಾಸೀನ್ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ರಾಯಚೂರಿಗೆ ರವಾನಿಸಲಾಗುತ್ತಿದ್ದು, ಇಂದು ಸಂಜೆ ರಾಯಚೂರು ನಗರದ ಕಮಲಿವಾಲೆ ಬಾಬಾ ಕಬರಸ್ಥಾನದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

Read more Photos on
click me!

Recommended Stories