ಬೆಂಗಳೂರು(ನ.04): ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅಧಿಕಾರ ಇರಲಿ ಅಥವಾ ಇಲ್ಲದಿರಲಿ ಸಹಾಯ ಮಾಡುವುದನ್ನು ಮಾತ್ರ ಬಿಟ್ಟಿಲ್ಲ. ಹೌದು, ಮಹಾಮಾರಿ ಕೊರೋನಾ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಯುವಕನೊಬ್ಬನಿಗೆ ಕುಮಾರಸ್ವಾಮಿ ಅವರು ದುಡಿಮೆಯ ದಾರಿಯನ್ನ ಮಾಡಿಕೊಟ್ಟಿದ್ದಾರೆ. ಬಡ ಯುವಕನಿಗೆ ಆಟೋ ಕೊಡಿಸುವ ಮೂಲಕ ಕುಮಾರಸ್ವಾಮಿ ಮಾನವೀಯತೆ ಮೆರೆದಿದ್ದಾರೆ.