ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿನ ಮಳೆಯಿಂದಾಗಿ, ರಾಜಾಪೂರ ಬ್ಯಾರೇಜ್‌ನಿಂದ ನೀರು ಬಿಡುಗಡೆಯಾಗಿದೆ. ಎರಡು ತಿಂಗಳಿಂದ ಬತ್ತಿ ಹೋಗಿದ್ದ ಕೃಷ್ಣಾ ನದಿಗೆ ಮತ್ತೆ ಜೀವಕಳೆ ಬಂದಿದ್ದು, ಬೆಳಗಾವಿ ಜಿಲ್ಲೆಯ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.
ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಮಳೆಯಾಗುತ್ತಿದ್ದು, ಕೃಷ್ಣಾ ನದಿಯ ಉಪನದಿಗಳು ತುಂಬುತ್ತಿರುವುದರಿಂದ ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜ್‌ನಿಂದ ಅಂದಾಜು 3500 ಕ್ಯುಸೆಕ್‌ನಷ್ಟು ನೀರು ಬಿಡುಗಡೆಯಾಗಿದೆ.
25
ಕೃಷ್ಣೆ
ಸದ್ಯ ಬಿಡುಗಡೆಗೊಂಡಿರುವ ನೀರು ಬೆಳಗಾವಿ ಜಿಲ್ಲೆಯ ನೀರಿನ ಬವಣೆಯನ್ನು ಕೊಂಚ ಮಟ್ಟಿಗೆ ತಗ್ಗಿಸಲು ನೆರವಾಗುವುದೇ ವಿನಃ ಬಾಗಲಕೋಟೆ ಜಿಲ್ಲೆಯವರೆಗೆ ತಲುಪುವುದು ಸಾಧ್ಯವಿಲ್ಲ ಎಂಬುವುದು ನೀರಾವರಿ ತಜ್ಞರೇ ಅಭಿಪ್ರಾಯ. ಮಹಾರಾಷ್ಟ್ರದಲ್ಲಿ ಮಳೆ ಪ್ರಮಾಣ ಹೆಚ್ಚಿದರೆ ಮಾತ್ರ ಕೃಷ್ಣೆ ಮೈದುಂಬಿಕೊಳ್ಳಲು ಸಾಧ್ಯ.
35
ಸೇತುವೆ ಕಾರ್ಯದಲ್ಲಿ ತೊಡಕಿಲ್ಲ
ಮಹಿಷವಾಡಗಿ ಸೇತುವೆಗೆ ಸಂಬಂಧಿಸಿದ ಪಿಲ್ಲರ್ ನಂ.7 ಮತ್ತು 8ರ ನದಿಯೊಳಗಿನ ಕಾರ್ಯ ಪೂರ್ಣಗೊಂಡಿದೆ. ಇನ್ನೆರಡು ದಿನಗಳಲ್ಲಿ 10 ಅಡಿಯಷ್ಟು ಮತ್ತೆ ಎತ್ತರಕ್ಕೆ ಪಿಲ್ಲರ್‌ಗಳು ನಿರ್ಮಾಣವಾದಲ್ಲಿ ನದಿಯೊಳಗೆ ನೀರಿದ್ದರೂ ಮುಂದಿನ ದಿನಗಳಲ್ಲಿ ಸೇತುವೆ ಕಾಮಗಾರಿ ಸರಾಗವಾಗಿ ನಡೆಯಲಿದೆ ಎಂದು ಶಾಸಕ ಸಿದ್ದು ಸವದಿ ಸ್ಪಷ್ಟಪಡಿಸಿದರು.
ಕಳೆದ ಎರಡು ತಿಂಗಳಿನಿಂದ ಕರ್ನಾಟಕ, ಆಂಧ್ರ ಹಾಗೂ ಮಹಾರಾಷ್ಟ್ರದ ಜೀವನದಿಯಾಗಿರುವ ಕೃಷ್ಣಾ ನದಿ ಸಂಪೂರ್ಣವಾಗಿ ಬತ್ತಿ ಹೋಗಿತ್ತು. ಖಾಲಿ ಖಾಲಿಯಾಗಿದ್ದ ಕೃಷ್ಣೆಗೆ ಒಮ್ಮೆಲೆ 7 ಸಾವಿರ ಕ್ಯೂಸೇಕ್ ನೀರು ಹರಿದು ಬಂದಿದ್ದು, ನದಿಗೆ ಮತ್ತೆ ಜೀವ ಕಳೆ ಬಂದಿದೆ. ಚಿಕ್ಕೋಡಿ ತಾಲೂಕಿನ ಕಲ್ಲೋಳ ಬಳಿ ನೀರು ಹರಿದು ಬರುತ್ತಿದ್ದು, ಮಹಾರಾಷ್ಟ್ರದಲ್ಲಿನ ಮಳೆಯಿಂದಾಗಿ ಬೃಹತ್ ನದಿ ಕೃಷ್ಣೆ ತನ್ನ ಹಳೆಯ ವೈಭವಕ್ಕೆ ಮರಳಿದೆ.
55
ಒಂದು ವಾರ ಮಳೆಯ ಮುನ್ಸೂಚನೆ
ನದಿಗೆ ನೀರು ಬರುತ್ತಿರುವುದನ್ನು ಕಂಡು ರೈತರ ಮೊಗದಲ್ಲಿ ಹರ್ಷ ಮೂಡಿದ್ದು, ಇದು ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ರೈತರಿಗೆ ಅತೀ ದೊಡ್ಡ ಅನುಕೂಲ ಮಾಡಿಕೊಡಲಿದೆ. ಇನ್ನು ಒಂದು ವಾರಗಳ ಕಾಲ ಮಳೆಯಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.