ರೀಲ್ಸ್ ಸ್ಟಾರ್ ಲಕ್ಷ್ಮೀ ಅಜ್ಜಿ ಇನ್ನಿಲ್ಲ; ಕಿವಿ ಕೇಳದಿದ್ದರೂ, ಕಣ್ಣು ಮಂಜಾಗಿದ್ದರೂ ನಟನೆ

Published : Mar 29, 2026, 09:56 AM IST

ರೀಲ್ಸ್ ಮೂಲಕ ರಾಜ್ಯಾದ್ಯಂತ ಜನಪ್ರಿಯರಾಗಿದ್ದ ಯಲ್ಲಾಪುರದ ಲಕ್ಷ್ಮೀ ನಾಯ್ಕ್ ಅಜ್ಜಿ (93) ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಡ್ರಾಮಾ ಜೂನಿಯರ್ ಖ್ಯಾತಿಯ ಮೊಮ್ಮಗ ಸೂರಜ್ ಜೊತೆ ಸೇರಿ, ಉತ್ತರ ಕನ್ನಡದ ಸ್ಥಳೀಯ ಭಾಷೆಯಲ್ಲಿಯೇ ರೀಲ್ಸ್ ಮಾಡುತ್ತಿದ್ದ ಅವರು ಅಪಾರ ಅಭಿಮಾನಿಗಳನ್ನು ಹೊಂದಿದ್ದರು.

PREV
14
ಲಕ್ಷ್ಮೀ ನಾಯ್ಕ್ ಅಜ್ಜಿ ನಿಧನ

ರೀಲ್ಸ್ ಮೂಲಕ ಎಲ್ಲರ ಗಮನ ಸೆಳೆದಿದ್ದ ಯಲ್ಲಾಪುರದ ಲಕ್ಷ್ಮೀ ನಾಯ್ಕ್ ಅಜ್ಜಿ ನಿಧನರಾಗಿದ್ದಾರೆ. ಡ್ರಾಮಾ ಜೂನಿಯರ್ ಖ್ಯಾತಿಯ ಸೂರಜ್ ಜೊತೆಯಲ್ಲಿ ಲಕ್ಷ್ಮೀ ನಾಯ್ಕ್ ರೀಲ್ಸ್ ಮಾಡುತ್ತಿದ್ದರು.

24
ಯಲ್ಲಾಪುರದ ನಿವಾಸಿ

ಲಕ್ಷ್ಮೀ ನಾಯ್ಕ್ ಅಜ್ಜಿ ಅವರು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿಯಲ್ಲಿ ನಿವಾಸಿಯಾಗಿದ್ದರು. ಕಳೆದ ಕೆಲವು ದಿನಗಳಿಂದ ಲಕ್ಷ್ಮೀ ನಾಯ್ಕ್ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ಲಕ್ಷ್ಮೀ ನಾಯ್ಕ್ ಅವರಿಗೆ 93 ವಯಸ್ಸು ಆಗಿತ್ತು.

34
ಮೊಮ್ಮಗ ಸೂರಜ್ ಜೊತೆ ನಟನೆ

ಮೊಮ್ಮಗ ಸೂರಜ್ ಹೇಳಿಕೊಟ್ಟಂತೆ ಲಕ್ಷ್ಮೀ ನಾಯ್ಕ್ ನಟನೆ ಮಾಡುತ್ತಿದ್ದರು. ಈ ಮೂಲಕ ರಾಜ್ಯಾದ್ಯಂತ ಲಕ್ಷ್ಮೀ ನಾಯ್ಕ್ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಲಕ್ಷ್ಮೀ ನಾಯ್ಕ್ ನಿಧನಕ್ಕೆ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: ಭಕ್ತರಿಗಾಗಿ ನಿದ್ದೆಯೂ ಮಾಡ್ತಿಲ್ಲ ಕೊಪ್ಪಳದ ವೆಂಕೊಬಾ ಕಾಕಾ; ಇವರೇ ಮಲ್ಲಯ್ಯ ಎಂದ ಜನ್ರು

44
ಅಭಿಮಾನಿಗಳಿಂದ ಸಂತಾಪ

ಕುಟುಂಬಸ್ಥರು, ಬಂಧುಬಳಗದಲ್ಲಿ ಸೂತಕದ ಛಾಯೆ ಆವರಿಸಿದೆ. ಉತ್ತರ ಕನ್ನಡದ ಯಲ್ಲಾಪುರದ ಸ್ಥಳೀಯ ಭಾಷೆಯಲ್ಲಿಯೇ ಸೂರಜ್ ಜೊತೆ ಲಕ್ಷ್ಮೀ ನಾಯ್ಕ್ ರೀಲ್ಸ್ ಮಾಡುತ್ತಿದ್ದರು. ಅಜ್ಜಿಯನ್ನು ಕಳೆದುಕೊಂಡು ಸೂರಜ್ ಆಘಾತಕ್ಕೊಳಗಾಗಿದ್ದು, ಕಣ್ಣೀರು ಹಾಕುತ್ತಿದ್ದಾರೆ.

ಇದನ್ನೂ ಓದಿ: ನಮ್ಮ ಮತ ಮಾರಾಟಕ್ಕಿಲ್ಲ: ಮನೆ ಮುಂದೆ ನಾಮಫಲಕ ಅಳವಡಿಸಿದ ಪಾಲಹಳ್ಳಿಯ ರುದ್ರಮ್ಮ ಅಜ್ಜಿ

Read more Photos on
click me!

Recommended Stories