ಇನ್ಮುಂದೆ ವಿಜಯಪುರದಿಂದ ಆಲಮಟ್ಟಿ ರಾಕ್ ಗಾರ್ಡನ್, ವಾಟರ್‌ ಪಾರ್ಕ್‌ಗೆ ನೇರ ಬಸ್; ಸಮಯ ಹೀಗಿದೆ

Published : Apr 22, 2026, 09:44 AM IST

ವಿಜಯಪುರದಿಂದ ಪ್ರೇಕ್ಷಣೀಯ ಸ್ಥಳವಾದ ಆಲಮಟ್ಟಿ ಉದ್ಯಾನವನಕ್ಕೆ ನೂತನ ಬಸ್ ಸಾರಿಗೆಯನ್ನು ಆರಂಭಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಅವರು ಈ ಸೇವೆಗೆ ಚಾಲನೆ ನೀಡಿದ್ದು, ಈ ಬಸ್ ಪ್ರತಿದಿನ ಆರು ಬಾರಿ ವಿಜಯಪುರ ಮತ್ತು ಆಲಮಟ್ಟಿ ನಡುವೆ ಸಂಚರಿಸಲಿದೆ.

PREV
14
ವಿಜಯಪುರದಿಂದ ಆಲಮಟ್ಟಿ ಉದ್ಯಾನವನಕ್ಕೆ ನೇರ ಬಸ್

ವಿಜಯಪುರದಿಂದ ಆಲಮಟ್ಟಿ ಉದ್ಯಾನವನಕ್ಕೆ ಹೊಸದಾಗಿ ಆರಂಭಗೊಂಡ ನೂತನ ಸಾರಿಗೆ ಬಸ್ ಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ವಿಜಯಪುರ ವಿಭಾಗದಿಂದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಬಿ.ಪಾಟೀಲ್ ಇವರ ಸೂಚನೆಯಂತೆ ವಿಜಯಪುರದಿಂದ ಜಿಲ್ಲೆಯ ಪ್ರೇಕ್ಷಣೀಯ ಸ್ಥಳ ಆಲಮಟ್ಟಿ ಉದ್ಯಾನವನಕ್ಕೆ ನೂತನ ಸಾರಿಗೆಯನ್ನು ಆರಂಭಗೊಳಿಸಲಾಗಿದೆ.

24
ಬಸ್ ಸಮಯ

ಈ ಸಾರಿಗೆಯು ಪ್ರತಿದಿನ ಆರು ಸರತಿಯಲ್ಲಿ ವಿಜಯಪುರದಿಂದ ಆಲಮಟ್ಟಿ ಉದ್ಯಾನವನಕ್ಕೆ ಹೋಗಿ ಬರಲಿದೆ. ಮೊದಲನೇ ಪಾಳಿ ಬೆಳಗ್ಗೆ 10 ಗಂಟೆಗೆ ವೀರ ರಾಣಿ ಕಿತ್ತೂರ ಚೆನ್ನಮ್ಮ ಕೇಂದ್ರ ಬಸ್ ನಿಲ್ದಾಣದಿಂದ ಆರಂಭಗೊಳ್ಳಲಿದೆ. ಆಲಮಟ್ಟಿಯ ಉದ್ಯಾನವನದಿಂದ ಕೊನೆಯ ಬಸ್ ರಾತ್ರಿ 8.20ಕ್ಕೆ ಮರಳಿ ವಿಜಯಪುರಕ್ಕೆ ಬಸ್ ಆಗಮಿಸಲಿದೆ.

34
ಪ್ರೇಕ್ಷಣೀಯ ಸ್ಥಳ

ಬಸ್‌ಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಚಿವರಾದ ಎಂಬಿ ಪಾಟೀಲ್, ಪ್ರೇಕ್ಷಣೀಯ ಸ್ಥಳಗಳಿಗೆ ಹೊಸದಾಗಿ ತನ್ನ ಸಂಚಾರ ಆರಂಭಿಸಲಿರುವ ಈ ಬಸ್ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಇದನ್ನೂ ಓದಿ: ಆಲಮಟ್ಟಿ ಡ್ಯಾಂ ಬಗ್ಗೆ ಮಹಾರಾಷ್ಟ್ರದ ವಾದಕ್ಕೆ ಅರ್ಥವಿಲ್ಲ: ಸಚಿವ ಎಂ.ಬಿ.ಪಾಟೀಲ್‌

44
ಆಲಮಟ್ಟಿ

ಜಿಲ್ಲಾಧಿಕಾರಿ ಡಾ.ಆನಂದ.ಕೆ, ಜಿಪಂ ಸಿಇಒ ರಿಷಿ ಆನಂದ, ಕೆಕೆಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ವಿಜಯಪುರ ಮೂರನೇ ಘಟಕದ ವ್ಯವಸ್ಥಾಪಕ ಎಸ್.ಎಂ.ವಾಲೀಕಾರ, ಸಹಾಯಕ ಸಂಚಾರ ವ್ಯವಸ್ಥಾಪಕ ಜಾನಪ್ಪ ಹುಗ್ಗೆಣ್ಣನವರ, ಪ್ರವಾಸೋದ್ಯಮ ಇಲಾಖೆ ಅನೀಲಕುಮಾರ ಬಣಜಿಗೇರ, ಮುಖಂಡೆ ಮಹಾದೇವಿ ಗೋಕಾಕ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ಕೃಷ್ಣಾ ಯೋಜನೆ-3: ಆಲಮಟ್ಟಿ ಡ್ಯಾಂ 524 ಮೀ.ಗೆ ಎತ್ತರಿಸಲು ಸರ್ಕಾರ ನಿರ್ಧಾರ, ಎಕರೆಗೆ ₹40 ಲಕ್ಷ ಪರಿಹಾರ!

Read more Photos on
click me!

Recommended Stories