ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ, ನೈಟಿ ಧರಿಸಿದ್ದಕ್ಕೆ ಪತಿ ಕೃಷ್ಣಾ ಪಾಟೀಲ್ ತನ್ನ ಪತ್ನಿ ಮಂಜುಳಾಗೆ ಬೆಂಕಿ ಹಚ್ಚಿದ್ದಾನೆ. ಸುಟ್ಟ ಗಾಯಗಳಿಂದ ಬಳಲುತ್ತಿರುವ ಮಂಜುಳಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಳೀಯರು ಅವರನ್ನು ರಕ್ಷಿಸಿದ್ದಾರೆ.
ಮನೆಯಲ್ಲಿ ಸೀರೆ ಬದಲು ನೈಟ್ ಧರಿಸುತ್ತಿದ್ದ ಪತ್ನಿಗೆ ಗಂಡ ಬೆಂಕಿ ಹಚ್ಚಿರುವ ಆಘಾತಕಾರಿ ಘಟನೆ ಬೆಳಗಾವಿ ಜಿಲ್ಲೆಯ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮದಲ್ಲಿ ನಡೆದಿದೆ.
25
ನೆರವಿಗೆ ಬಂದ ಸ್ಥಳೀಯರು
ಖಾನಾಪುರ ತಾಲೂಕಿನ ಹತ್ತರವಾಡ ಗ್ರಾಮದ ನಿವಾಸಿ ಕೃಷ್ಣಾ ಪಾಟೀಲ್ ಪತ್ನಿಗೆ ಬೆಂಕಿ ಹಚ್ಚಿದ ನೀಚ ಗಂಡ. ಸುಟ್ಟ ಗಾಯಗಳಿಂದ ಗಾಯಗೊಂಡಿರುವ ಮಂಜುಳಾ ಪಾಟೀಲ್ ಅವರನ್ನು ಸ್ಥಳೀಯರು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೆಳಗಾವಿ ಬ್ರಿಮ್ಸ್ ಆಸ್ಪತ್ರೆಯಲ್ಲಿ ಮಂಜುಳಾ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
35
ಕೂಲಿ ಕೆಲಸ ಮಾಡಿಕೊಂಡಿರುವ ಕೃಷ್ಣಾ ಪಾಟೀಲ್
ಕೂಲಿ ಕೆಲಸ ಮಾಡಿಕೊಂಡಿದ್ದ ಕೃಷ್ಣಾ ಪಾಟೀಲ್, ಕುಟುಂಬ ಸಮೇತನಾಗಿ ಹತ್ತರವಾಡ ಗ್ರಾಮದಲ್ಲಿ ವಾಸವಾಗಿದ್ದನು. ಕಳೆದ ಕೆಲವು ದಿನಗಳಿಂದ ಮಂಜುಳಾ ಮತ್ತು ಕೃಷ್ಣಾ ನಡುವೆ ನೈಟಿ ಧರಿಸುವ ವಿಚಾರಕ್ಕೆ ಜಗಳ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.
ಪತಿಯ ತೀವ್ರ ವಿರೋಧದ ನಡುವೆಯೂ ಮಂಜುಳಾ ನೈಟಿ ಧರಿಸಿದ್ದರು. ಇದರಿಂದ ಕೋಪಗೊಂಡ ಕೃಷ್ಣಾ ಪಾಟೀಲ್ ಪತ್ನಿಗೆ ಬೆಂಕಿ ಹಚ್ಚಿದ್ದಾನೆ. ಬೆಂಕಿ ತಾಗುತ್ತಿದ್ದಂತೆ ಮಂಜುಳಾ ಸಹಾಯಕ್ಕಾಗಿ ಜೋರಾಗಿ ಕೂಗಿದ್ದಾರೆ. ಮಂಜುಳಾ ಅವರ ಧ್ವನಿ ಕೇಳುತ್ತಿದ್ದಂತೆ ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ.
ಎಂಟು ವರ್ಷಗಳ ಹಿಂದೆ ಕೃಷ್ಣಾ ಹಾಗೂ ಮಂಜುಳಾ ಮದುವೆ ನಡೆದಿತ್ತು. ನಂತರ ಸ್ಥಳೀಯರೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ನಂದಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.