ಆದರೆ, ಅದಾಗಲೇ ಈ ಜಾಗೆ ತಮ್ಮ ಹೆಸರಿಗೆ ವರ್ಗಾವಣೆಯಾಗಿದೆ ಎಂದು ಹನುಮಂತಗೌಡ ಹೇಳಿದ್ದಕ್ಕೆ ಆಡಳಿತ ಮಂಡಳಿಯವರು ಸುಮ್ಮನಾಗಿ, ತಮ್ಮ ಕಟ್ಟಡ ನಿರ್ಮಾಣವಾಗುವ ವರೆಗೆ ಅನುಕೂಲ ಮಾಡಿಕೊಡಿ ಎಂದು ಮನವಿ ಸಹ ಮಾಡಿದ್ದರು. ಇದೇ ವೇಳೆ ಈ ಜಾಗೆಯ ಬಗ್ಗೆ ನ್ಯಾಯಾಲಯಕ್ಕೂ ದಾಖಲೆಗಳನ್ನು ಸಲ್ಲಿಸಿದ್ದರು. ಅಷ್ಟರಲ್ಲಿಯೇ ರಾತ್ರೋರಾತ್ರಿ ಕಟ್ಟಡ ತೆರವುಗೊಳಿಸಿದ್ದು ವಿದ್ಯಾರ್ಥಿನಿಯರಿಗೆ ತರಗತಿ ಇಲ್ಲದೇ ತೀವ್ರ ಸಮಸ್ಯೆಯಾಗಿದೆ ಎಂದು ಭಾರತೀಯ ವಿದ್ಯಾ ಕೇಂದ್ರದ ಅಧ್ಯಕ್ಷ ಮಹೇಶ ಶೆಟ್ಟಿ ಮಾಹಿತಿ ನೀಡಿದರು.
ಇದೀಗ ಆಡಳಿತ ಮಂಡಳಿ ವತಿಯಿಂದ ಉಪನಗರ ಠಾಣೆ ಪೊಲೀಸರಿಗೆ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮಂಗಳವಾರ ದೂರು ಸಲ್ಲಿಸಿದ್ದು, ಈ ಬಗ್ಗೆ ಇನ್ನಷ್ಟೇ ವಿಚಾರಣೆ ನಡೆಯಬೇಕಿದೆ.