ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದಾಗಲೇ ಉಸಿರಾಟ! ವೈದ್ಯರ ಸಮಯ ಪ್ರಜ್ಞೆಯಿಂದ ಬದುಕಿದಳು ವೃದ್ಧೆ!

Published : Sep 23, 2026, 04:29 PM IST

ಸತ್ತಿದ್ದಾಳೆಂದು ಕುಟುಂಬಸ್ಥರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದ ವೇಳೆ ಮಹಿಳೆ ಪವಾಡ ಸದೃಶ್ಯವಾಗಿ ಬದುಕಿದ ಘಟನೆ ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲೂಕು ಗೊಡಚಿಕೊಂಡ ಗ್ರಾಮದಲ್ಲಿ ನಡೆದಿದೆ. ರೇಣುಕಮ್ಮ(63), ಸಂಕೊಳ್ಳಿ, ವೈದ್ಯರ ಸಮಯ ಪ್ರಜ್ಞೆಯಿಂದ ಮತ್ತೆ ಚೇತರಿಸಿಕೊಂಡ ಮಹಿಳೆ.

PREV
13
ಹಾವೇರಿ: ಸತ್ತವಳು ಬದುಕಿ ಬಂದಳು!

ಸತ್ತಿದ್ದಾಳೆಂದು ಕುಟುಂಬಸ್ಥರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದ ವೇಳೆ ಮಹಿಳೆ ಪವಾಡ ಸದೃಶ್ಯವಾಗಿ ಬದುಕಿದ ಘಟನೆ ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲೂಕು ಗೊಡಚಿಕೊಂಡ ಗ್ರಾಮದಲ್ಲಿ ನಡೆದಿದೆ. ರೇಣುಕಮ್ಮ(63), ಸಂಕೊಳ್ಳಿ, ವೈದ್ಯರ ಸಮಯ ಪ್ರಜ್ಞೆಯಿಂದ ಮತ್ತೆ ಚೇತರಿಸಿಕೊಂಡ ಮಹಿಳೆ.

63 ವರ್ಷದ ರೇಣುಕಮ್ಮ ಕಳೆದ ಸೋಮವಾರ ರಾತ್ರಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಬಿಪಿ ಶುಗರ್ ಕಡಿಮೆ ಆಗಿ ಪ್ರಜ್ಞೆ ಕಳೆದುಕೊಂಡಿದ್ದರು. ಕುಟುಂಬಸ್ಥರು ಗ್ರಾಮದ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ವೈದ್ಯರ ಬಳಿ ತೋರಿಸಿದಾಗ 'ರೇಣುಕಮ್ಮ ಬದುಕೋದೇ ಡೌಟು' ಅಂದಿದ್ರು. ಇದರಿಂದ ರೇಣುಕಮ್ಮ ಸಾಯುವುದು ನಿಶ್ಚಿತ ಎಂದು ತಿಳಿದ ಕುಟುಂಬಸ್ಥರು ಕೈಚೆಲ್ಲಿದ್ದರು.

ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ಥರು ಸಿದ್ಧತೆ ನಡೆಸಿದ್ದರು!

ಇದೇ ವೇಳೆ ರೇಣುಕಾಮ್ಮ ಉಸಿರಾಟವೂ ತೀವ್ರವಾಗಿ ಕಡಿಮೆಯಾಗಿ ಜೀವಚ್ಛವವಾಗಿ ಮಲಗಿದ್ದರು. ಆದರೆ ಕುಟುಂಬಸ್ಥರಿಗೆ ಈ ಅನಾರೋಗ್ಯದ ಪರಿಣಾಮ ತಿಳಿಯದೆ ಉಸಿರಾಟ ನಡೆಸದ ರೇಣುಕಮ್ಮ ಸತ್ತಿದ್ದಾಳೆಂದೇ ತಿಳಿದು ಸಂಬಂಧಿಕರಿಗೆ ಮಾರನೇ ಅಂತ್ಯಸಂಸ್ಕಾರವಿದೆ ಎಂದು, ಅಂತ್ಯಸಂಸ್ಕಾರಕ್ಕೆ ಬರಬೇಕೆಂದು ಫೋನ್ ಮೂಲಕ ಮಾಹಿತಿ ನೀಡಿ. ನಾಳೆಯ ಕಾರ್ಯಕ್ಕೆ ಕುಟುಂಬಸ್ಥರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು.

23
ರೇಣುಕಮ್ಮ ಎದೆಯ ಏರಿಳಿತ ಕಂಡು ಶಾಕ್

ರೇಣುಕಮ್ಮ ಸತ್ತಿದ್ದಾಳೆಂದೇ ನಂಬಿದ್ದ ಕುಟುಂಬಸ್ಥರು. ಸಂಬಂಧಿಕರಿಗೆ ಕರೆ ಮಾಡಿ ಅದಾಗಲೇ ತಿಳಿಸಿಬಿಟ್ಟಿದ್ದರು. ತೀರ ಹತ್ತಿರದ ಸಂಬಂಧಿಕರು ಅಂತ್ಯಸಂಸ್ಕಾರಕ್ಕೆ ಹಾರ ತೆಗೆದುಕೊಂಡು ಊರಿಗೆ ಬಂದಿದ್ದರು. ಕೊನೆ ಕ್ಷಣದಲ್ಲಿ ಕುಟುಂಬಸ್ಥರು ಮೈಮರೆತಿದ್ದರೆ ರೇಣುಕಮ್ಮಳನ್ನ ಜೀವಂತ ಮಣ್ಣು ಮಾಡಿಬಿಡುತ್ತಿದ್ದರೇನೋ. ರೇಣುಕಮ್ಮ ಮೃತದೇಹ ನೋಡುತ್ತಲೇ ಕುಳಿತಿದ್ದ ಕುಟುಂಬಸ್ಥರಿಗೆ ರೇಣುಕಮ್ಮಳ ದೇಹದ ಏರಿಳಿತ ಕಂಡು ಶಾಕ್ ಆಗಿತ್ತು. ಅದೆಲ್ಲಿತ್ತೊ ಒಂದಿಷ್ಟು ಉಸಿರು ರೇಣುಕಮ್ಮ ಸಣ್ಣಗೆ ನಡೆಸಿದ ಉಸಿರಾಟಕ್ಕೆ ಎದೆ ಏರಿಳಿತ ಮುಂದೆ ಕುಳಿತಿದ್ದವರಿಗೆ ಕಾಣಿಸಿದೆ. ಉಸಿರಾಟ ನಡೆಸಿದ್ದು ಕಂಡ ಕುಟುಂಬಸ್ಥರು ತಕ್ಷಣ ಪಕ್ಕದ ಹಿರೇಕೆರೂರು ಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.

33
ವೈದ್ಯರ ಸಮಯ ಪ್ರಜ್ಞೆಯಿಂದ ಸತ್ತಾಕೆ ಬದುಕಿ ಬಂದಳು!

ಖಾಸಗಿ ವೈದ್ಯರು ತಡ ಮಾಡದೆ ತುರ್ತು ಚಿಕಿತ್ಸೆಯಿಂದ ಕೊನೆಗೂ ರೇಣುಕಾಮ್ಮ ಸಾವಿನ ಸಮೀಪಕ್ಕೆ ಹೋಗಿ ಬಂದಿದ್ದಾರೆ. ಸದ್ಯ ವೈದ್ಯರ ಮುತುವರ್ಜಿಯಿಂದ ನಡೆಸಿದ ಚಿಕಿತ್ಸೆ ಪರಿಣಾಮವಾಗಿ ರೇಣುಕಾಮ್ಮಳ ಆರೋಗ್ಯ ಸ್ಥಿರವಾಗಿದ್ದು ಚೇತರಿಸಿಕೊಳ್ಳುತ್ತಿದ್ದಾಳೆ. ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದ ಕುಟುಂಬಕ್ಕೆ ಮಹಿಳೆ ಮತ್ತೆ ಬದುಕಿಬಂದಿದ್ದು ಪವಾಡದ ರೀತಿ ನಡೆದುಹೋಗಿದೆ.

Read more Photos on
click me!

Recommended Stories