ಧಾರವಾಡ: ಮಾಜಿ ಸಚಿವ ಜನಾರ್ದನ್‌ ರೆಡ್ಡಿ ಮೊಮ್ಮಗಳಿಗೆ ಕಲಘಟಗಿ ತೊಟ್ಟಿಲು..!

First Published | Aug 7, 2020, 1:57 PM IST

ಕಲಘಟಗಿ(ಆ.07):  ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರ ಪುತ್ರಿ ಬ್ರಹ್ಮಣಿ ಮಗುವಿಗೆ ಸಿದ್ಧವಾಗುತ್ತಿದೆ ಕಲಘಟಗಿ ಖ್ಯಾತಿಯ ಸುಪ್ರಸಿದ್ಧ ಬಣ್ಣದ ತೊಟ್ಟಿಲು. ಪಟ್ಟಣದ ಮಾರುತಿ ಬಡಿಗೇರ ಸುಮಾರು ಮೂರು ತಿಂಗಳಿಂದ ಈ ತೊಟ್ಟಿಲನ್ನು ತಯಾರು ಮಾಡುತ್ತಿದ್ದಾರೆ. ಶ್ರೀಕೃಷ್ಣನ ಬಾಲ ಲೀಲೆಗಳು ತೊಟ್ಟಿಲಲ್ಲಿ ಮೂಡಿ ಬಂದಿವೆ.

ಹಾವೇರಿ ಜಿಲ್ಲೆಯ ವನಿತಾ ಎಚ್‌. ಗುತ್ತಲ್‌ ಎಂಬುವವರು ಜನಾರ್ದನ ರೆಡ್ಡಿ ಮೊಮ್ಮಗಳಿಗೆ ಈ ತೊಟ್ಟಿಲು ನೀಡುತ್ತಿದ್ದಾರೆ.
ಈಗಾಗಲೇ 40000 ಮುಂಗಡ ಹಣ ನೀಡಿದ್ದು, ಗುರುವಾರ 50000 ನೀಡಿ ತೊಟ್ಟಿಲು ತೆಗೆದುಕೊಂಡು ಬೆಂಗಳೂರಿಗೆ ಹೋಗಿ ಜನಾರ್ದನ ರೆಡ್ಡಿ ಮೊಮ್ಮಗಳಿಗೆ ನೀಡುವುದಾಗಿ ತಿಳಿಸಿದ ವನಿತಾ ಎಚ್‌. ಗುತ್ತಲ್‌
Tap to resize

ರಾಧಿಕಾ ಯಶ್‌ ದಂಪತಿಯ ಪುತ್ರಿಗೆ ಅಂಬರೀಶ್‌ ಅಭಿಮಾನಿಯೊಬ್ಬರು ಬಣ್ಣದ ತೊಟ್ಟಿಲುಗಳು ಕಾಣಿಕೆಯಾಗಿ ನೀಡಿದ್ದರು.
ವರನಟ ಡಾ. ರಾಜಕುಮಾರ ಕುಟುಂಬಕ್ಕೂ ಇವರೇ ತೊಟ್ಟಿಲು ನೀಡಿದ್ದರು. ಅವರು ಅದನ್ನು ಅಮೆರಿಕಾಕ್ಕೆ ಕಳುಹಿಸಿದ್ದಾರೆ.
ನಾಲ್ಕೈದು ತಲೆಮಾರುಗಳಿಂದ ಕಲಘಟಗಿ ಪಟ್ಟಣದಲ್ಲಿ ಹಿರಿಯರಾದ ಓಂಕಾರಪ್ಪ ಮಲ್ಲೇಶಪ್ಪ ಬಡಿಗೇರ ಅವರ ಕಾಲದಿಂದ ಇಲ್ಲಿವರೆಗೂ ನಿರಂತರವಾಗಿ ತೊಟ್ಟಿಲನ್ನು ತಯಾರಿಸುತ್ತಾ ಬಂದಿರುವುದು ಕಲಘಟಗಿಗೆ ಹೆಮ್ಮೆಯ ವಿಷಯವಾಗಿದೆ.
15 ಸಾವಿರದಿಂದ 35 ಸಾವಿರದ ವರೆಗೆ ತೊಟ್ಟಿಲು ಇವರ ಬಳಿ ಸಿಗುತ್ತವೆ. ತೊಟ್ಟಿಲು ಮತ್ತು ಸ್ಟ್ಯಾಂಡ್‌ನ್ನು ಆಕರ್ಷಕವಾಗಿ ತಯಾರಿಸಲಾಗುತ್ತಿದೆ. ಒಂದು ತೊಟ್ಟಿಲು ತಯಾರಿಕೆಗೆ ಒಂದು ತಿಂಗಳಿಂದ ಮೂರು ತಿಂಗಳ ವರೆಗೆ ಅವಧಿ ಬೇಕಾಗುತ್ತದೆ ಎನ್ನುತ್ತಾರೆ ಮಾರುತಿ ಬಡಿಗೇರ. ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಕಲಘಟಗಿ ತೊಟ್ಟಿಲಿಗೆ ಬೇಡಿಕೆ ಇದೆ.

Latest Videos

click me!