ಕೊಡಗು ಜಿಲ್ಲೆಯಲ್ಲಿ ಆಗಸ್ಟ್ ತಿಂಗಳು ಕರಾಳ ತಿಂಗಳಾಗುತ್ತಿರುವುದು ಇದು ಸತತ 3ನೇ ವರ್ಷ
ಈ ಹಿಂದೆ 2018 ರಿಂದ ಆಗಸ್ಟ್‌ನಲ್ಲಿ ಸತತ ಪ್ರಕೃತಿ ವಿಕೋಪ ಉಂಟಾಗಿ ಜಿಲ್ಲೆಯಲ್ಲಿ ಅಪಾರ ಆಸ್ತಿ, ಪ್ರಾಣ ಹಾನಿಯಾಗುತ್ತಲೇ ಬಂದಿದೆ. ಇದರಿಂದಾಗಿ ಜಿಲ್ಲೆಯ ಪಾಲಿಗೆ ಆಗಸ್ಟ್ ತಿಂಗಳು ಬಂತೆಂದರೆ ನಡುಕ ಶುರುವಾಗುತ್ತದೆ.
ಜಿಲ್ಲೆಯಲ್ಲಿ 2018ರಲ್ಲಿ ಸುರಿದ ಭಾರಿ ಮಳೆಗೆ ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕಿನ ಹೆಬ್ಬೆಟ್ಟಗೇರಿ, ಮುಕ್ಕೋಡ್ಲು, ಮಾದಾಪುರ, ಮಕ್ಕಂದೂರು, ಹಟ್ಟಿಹೊಳೆ, ಮೇಘತ್ತಾಳು, ಹೆಮ್ಮೆತ್ತಾಳು, ಮೊಣ್ಣಂಗೇರಿ, ಗಾಳಿಬೀಡು, ಜೋಡುಪಾಲ, ಮದೆನಾಡು, ಕಾಲೂರು, ಹಟ್ಟಿಹೊಳೆ ಸೇರಿ ಹಲವು ಕಡೆಗಳಲ್ಲಿ ಭೂಕುಸಿತ ಸಂಭವಿಸಿ ಅಪಾರ ಹಾನಿಯಾಗಿತ್ತು.
ಕೆಲ ಕಡೆ ಪ್ರವಾಹ ಕಾಣಿಸಿಕೊಂಡಿತ್ತು. ಸಾವಿರಾರು ಮಂದಿ ಮನೆ ಕಳೆದುಕೊಂಡು ನಿರಾಶ್ರಿತರಾಗಿದ್ದರು. 20ಕ್ಕೂ ಹೆಚ್ಚು ಮಂದಿ ಮಳೆ ಅನಾಹುತಕ್ಕೆ ಬಲಿಯಾಗಿದ್ದರು. ಜಿಲ್ಲೆಗೆ ಮುಖ್ಯಮಂತ್ರಿ, ಕೇಂದ್ರ ರಕ್ಷಣಾ ಸಚಿವರು ಭೇಟಿ ನೀಡಿದ್ದರು.
2018ರಲ್ಲಿ ಮನೆ ಕಳೆದುಕೊಂಡ 500ಕ್ಕೂ ಅಧಿಕ ಸಂತ್ರಸ್ತರಿಗೆ ಇತ್ತೀಚೆಗಷ್ಟೇ ರಾಜ್ಯ ಸರ್ಕಾರದಿಂದ ಮನೆ ಹಸ್ತಾಂತರ ಮಾಡಲಾಗಿದೆ.
ಸಂಪಾಜೆ ಮಡಿಕೇರಿ ಮಧ್ಯೆ ಮೊಣ್ಣಂಗೇರಿ ಎಂಬಲ್ಲಿ ಗುಡ್ಡ ಕುಸಿದು ಮನೆ ನೆಲಸಮವಾಗಿ ಐದು ಮಂದಿ ಪ್ರಾಣ ಕಳೆದುಕೊಂಡಿದ್ದರು. ಮರುದಿನವೇ ಜೋಡುಪಾಲದಲ್ಲಿ ಮೇಘ ಸ್ಫೋಟದಿಂದ ರಸ್ತೆ, ಕೃಷಿ ಭೂಮಿಗಳಿಗೆ ಭಾರೀ ಹಾನಿ ಸಂಭವಿಸಿತ್ತು.
ಮನೆಗಳು ನೆಲ ಸಮಗೊಂಡಿತ್ತು. 2019ರ ಆಗಸ್ವ್‌ನಲ್ಲೂ ವಿರಾಜಪೇಟೆ ತಾಲೂಕಿನ ತೋರ ಗ್ರಾಮದಲ್ಲಿ ಭೂಕುಸಿತ ಸಂಭವಿಸಿತ್ತು. ಭಾಗಮಂಡಲದ ಕೋರಂಗಾಲದಲ್ಲಿ ಭೂಕುಸಿತ ಸೇರಿ ಹಲವು ಕಡೆಗಳಲ್ಲಿ ಪ್ರವಾಹ ಉಂಟಾಗಿತ್ತು. ಇದರಿಂದ ಜಿಲ್ಲೆಯಲ್ಲಿ 17 ಮಂದಿ ಮೃತಪಟ್ಟಿದ್ದರು.
ಈ ಬಾರಿಯೂ ಆಗಸ್ಟ್ ಆರಂಭದಲ್ಲೇ ಭಾರಿ ಮಳೆಯಿಂದ ತಲಕಾವೇರಿಯಲ್ಲಿ ಭೂಕುಸಿತ ಹಾಗೂ ವಿವಿಧೆಡೆ ಪ್ರವಾಹ ಸಂಭವಿಸಿರುವುದು ಆತಂಕ ಮೂಡಿಸಿದೆ.
ಕಳೆದ ಕೆಲವು ದಿನಗಳಿಂದ ನಿರಂತರವಾಗಿನ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭೂಕುಸಿತ ಉಂಟಾಗಿದೆ.
ಭಾಗಮಂಡಲದ ಶ್ರೀ ಭಗಂಡೇಶ್ವರ ದೇವಾಲಯದ ಒಳಗೆ ನುಗ್ಗಿದ ನೀರು