Water Crisis Karnataka: ಹಳೇ ಮೈಸೂರು ಭಾಗದಲ್ಲಿ ಮುಂಗಾರು ಕೈ ಕೊಟ್ಟಿದೆ. ಜಲಾಶಯಗಳು ಕೂಡ ಬದಿದಾಗಿವೆ. ಕುಡಿಯುವ ನೀರಿಗೂ ಕೂಡ ಹಾಹಾಕಾರ ಪರಿಸ್ಥಿತಿ ಎದುರಾಗಿದೆ. ಚೆಕ್ ಡ್ಯಾಂ ಹೂಳೆತ್ತಿ..
ವರದಿ: ಪುಟ್ಟರಾಜು. ಆರ್.ಸಿ ಏಷಿಯಾನೆಟ್, ಸುವರ್ಣ ನ್ಯೂಸ್, ಚಾಮರಾಜನಗರ.
ಚಾಮರಾಜನಗರ (ಜು.15): ಹಳೇ ಮೈಸೂರು ಭಾಗದಲ್ಲಿ ಮುಂಗಾರು ಕೈ ಕೊಟ್ಟಿದೆ. ಜಲಾಶಯಗಳು ಕೂಡ ಬದಿದಾಗಿವೆ. ಕುಡಿಯುವ ನೀರಿಗೂ ಕೂಡ ಹಾಹಾಕಾರ ಪರಿಸ್ಥಿತಿ ಎದುರಾಗಿದೆ. ಚೆಕ್ ಡ್ಯಾಂ ಹೂಳೆತ್ತಿ ಹಾಗೂ ತಮಿಳುನಾಡಿಗೆ ಹರಿದು ಹೋಗುವ ನೀರು ತಡೆಯಿರಿ ಅಂತಾ ಗ್ರಾಮಸ್ಥರು, ರೈತರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಎಷ್ಟೇ ಮನವಿ ಮಾಡಿದ್ರೂ ಕೂಡ ಸ್ಪಂದಿಸದ ಹಿನ್ನಲೆ ಗ್ರಾಮಸ್ಥರೇ ಚಂದಾ ಎತ್ತಿ ಹೂಳೆತ್ತುವ ಕೆಲಸಕ್ಕೆ ಮುಂದಾಗಿದ್ದಾರೆ. ಅದೆಲ್ಲಿ ಅಂತೀರಾ ಹಾಗಾದ್ರೆ ಈ ಸ್ಟೋರಿ ನೋಡಿ..
25
ಕುಡಿಯುವ ನೀರಿಗೂ ಹಾಹಾಕಾರ
ಹಳೇ ಮೈಸೂರು ಭಾಗದಲ್ಲಿ ಮುಂಗಾರು ಕೊರತೆ ನಡುವೆಯೂ ಕೂಡ ಹನೂರು ಭಾಗದ ಮಾರ್ಟಳ್ಳಿ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿ ಚೆಕ್ ಡ್ಯಾಂಗಳು ತುಂಬಿತ್ತು. ಆದ್ರೆ ಚೆಕ್ ಡ್ಯಾಂಗಳ ಹೂಳೆತ್ತದ ಹಿನ್ನಲೆ ನೀರೆಲ್ಲ ಪಾಲಾರ್ ಹಳ್ಳಕ್ಕೆ ಹರಿದು ಕಾವೇರಿ ಮೂಲಕ ತಮಿಳುನಾಡು ಸೇರಿದೆ. ಆದ್ರೆ ಇದೀಗ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿದೆ, ಕೊಳವೆ ಬಾವಿಗಳು ಕೂಡ ನಿಂತು ಹೋಗಿವೆ.
35
ಚೆಕ್ ಡ್ಯಾಂ ಸಾಮರ್ಥ್ಯ
ಅಧಿಕಾರಿಗಳು ಸ್ಪಂದಿಸದೆ ಹಿನ್ನಲೆ ತಾವೇ ಚಂದಾ ಎತ್ತಿ ಹೂಳೆತ್ತಿ, ಚೆಕ್ ಡ್ಯಾಂ ಸಾಮರ್ಥ್ಯ ಹೆಚ್ಚಿಸಲು ಮುಂದಾಗಿದ್ದಾರೆ. ಸಂದನಪಾಳ್ಯ ಸಮೀಪದ ಚಾರ್ಲಿಸ್ ಸರ್ವೇರ್ ಡ್ಯಾಂ ಅನ್ನೂ 15 ವರ್ಷಗಳ ಹಿಂದೆ ಸ್ಥಳೀಯರೆ ನಿರ್ಮಿಸಿಕೊಂಡಿದ್ದರು. ಮಾರ್ಟಳ್ಳಿ ಬೆಟ್ಟಗುಡ್ಡದಲ್ಲಿ ಸುರಿಯುವ ಮಳೆ ನೀರು ಪಣಂಕೋಬೆ ಡ್ಯಾಂ ಮೂಲಕ ಹರಿದು ಮಾರ್ಟಳ್ಳಿ, ಸಂದನಪಾಳ್ಯ, ನಾಲ್ ರೋಡ್ ಮೂಲಕ ಹರಿದು ಹೋಗಿ ಪಾಲಾರ್ ಹಳ್ಳದ ಮೂಲಕ ಕಾವೇರಿ ನದಿ ಸೇರುತ್ತಿತ್ತು.
ಆ ಮೂಲಕ ಲೆಕ್ಕಕ್ಕೆ ಸಿಗದ ನೀರು ತಮಿಳುನಾಡು ಪಾಲಾಗ್ತಿದೆ ಅಂತಾ ರೈತರು ಆರೋಪ ಮಾಡ್ತಿದ್ದಾರೆ. ಇನ್ನೂ ಬಹಳ ವರ್ಷಗಳ ಹಿಂದೆಯೇ ಪಣಂಕೋಬೆ ಬಳಿ ಚೆಕ್ ಡ್ಯಾಂ ನಿರ್ಮಿಸುವ ಪ್ರಸ್ತಾಪವಿತ್ತು. ಆದ್ರೆ ಜನಪ್ರತಿನಿಧಿಗಳ ನಿರ್ಲಕ್ಷ್ಯ ಧೋರಣೆಯಿಂದ ಯೋಜನೆ ಕೈ ಬಿಡಲಾಗಿತ್ತು. ಆ ಯೋಜನೆಗೆ ಮರುಜೀವ ನೀಡುವಂತೆ ರೈತರು ಹಾಗೂ ಸ್ಥಳೀಯ 15 ಕ್ಕೂ ಹೆಚ್ಚು ಗ್ರಾಮದ ಜನರು ಅಧಿಕಾರಿಗಳನ್ನು ಒತ್ತಾಯಿಸಿದರು ಕೂಡ ಪ್ರಯೋಜನವಾಗಿಲ್ಲ.
55
ಮಾದರಿ ನಡೆ
ಈ ಹಿನ್ನಲೆ ಮಳೆಯ ನೀರು ಬಂದ್ರು ಚೆಕ್ ಡ್ಯಾಂ ನಲ್ಲಿ ನೀರು ನಿಲ್ಲುತ್ತಿಲ್ಲ ಅಂತಾ ಅರಿತ ರೈತರು ಸರ್ಕಾರದ ಅನುದಾನಕ್ಕೆ ಕಾಯದೆ ತಾವೇ ಸ್ವಂತ ಹಣ ಸಂಗ್ರಹಿಸಿ ಚೆಕ್ ಡ್ಯಾಂ ಹೂಳೆತ್ತುವ ಕಾಯಕಕ್ಕೆ ಕೈ ಹಾಕಿದ್ದಾರೆ. ಇದಕ್ಕೆ ಹನೂರಿನ ಬಿಜೆಪಿ ಮುಖಂಡರು ಕೂಡ ಕೈ ಜೋಡಿಸಿದ್ದೇವೆ ಅಂತಿದ್ದಾರೆ. ಒಟ್ನಲ್ಲಿ ಮಾರ್ಟಳ್ಳಿ ಭಾಗದಲ್ಲಿ ಬೀಳುವ ಮಳೆಯ ನೀರಿನಿಂದ ಭರ್ತಿಯಾಗಿದ್ದ ಚೆಕ್ ಡ್ಯಾಂ ನೀರು ಕೇವಲ 15 ದಿನಕ್ಕೆ ಹರಿದು ತಮಿಳುನಾಡು ಪಾಲಾಗಿದೆ. ಅಧಿಕಾರಿಗಳು ಹಾಗೂ ಶಾಸಕರು ಜನರ ಕಷ್ಟಕ್ಕೆ ಸ್ಪಂದಿಸದ ಹಿನ್ನಲೆ ಗ್ರಾಮಸ್ಥರೇ ಹೂಳೆತ್ತಲೂ ಮುಂದಾಗಿರುವುದು ಮಾತ್ರ ಮಾದರಿ ನಡೆ.