ಕೊಪ್ಪಳ: ಮಿರ್ಚಿ ಭಜಿ ಸ್ವತಃ ಹಾಕಿ ತಿಂದ ಬಿ.ವೈ.ವಿಜಯೇಂದ್ರ

First Published Mar 21, 2021, 11:16 AM IST

ಕೊಪ್ಪಳ(ಮಾ.21): ಪ್ರತಾಪಗೌಡ ಅವರಂತಹವರು ತಮ್ಮ ಶಾಸಕ ಸ್ಥಾನವನ್ನು ತ್ಯಾಗ ಮಾಡಿದ್ದರಿಂದಲೇ ಇಂದು ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

ಮಸ್ಕಿಗೆ ತೆರಳುವ ಮುನ್ನ ಕನಕಗಿರಿಯಲ್ಲಿ ಶನಿವಾರ ಕನಕಾಚಲ ಲಕ್ಷ್ಮೇನರಸಿಂಹ ದೇವರ ದರ್ಶನ ಪಡೆದ ಬಿ.ವೈ.ವಿಜಯೇಂದ್ರ
undefined
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತ್ಯಾಗ ಮಾಡಿದವರನ್ನು ಸ್ಮರಿಸಬೇಕು ಮತ್ತು ಅವರ ಗೆಲುವಿಗಾಗಿ ಶ್ರಮಿಸಬೇಕು. ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬರಲು ಮೊದಲ ಹೆಜ್ಜೆಯನ್ನು ಇಟ್ಟಿದ್ದೇ ಪ್ರತಾಪಗೌಡ. ಯಡಿಯೂರಪ್ಪ ಸರ್ಕಾರವನ್ನು ಮತ್ತಷ್ಟು ಬಲಗೊಳಿಸಲು ಪ್ರತಾಪಗೌಡರನ್ನು ಭರ್ಜರಿಯಾಗಿಯೇ ಜನ ಗೆಲ್ಲಿಸುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು.
undefined
ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಅವರನ್ನು ನಾನು ಒಂದು ಸಮುದಾಯದ ನಾಯಕ ಎಂದು ಹೇಳುವುದಿಲ್ಲ. ಅವರು ಎಲ್ಲ ಸಮುದಾಯದ ನಾಯಕರಾಗಿದ್ದಾರೆ. ಹೀಗಾಗಿ, ಅವರು ಪಕ್ಷಕ್ಕೆ ಬಂದಿದ್ದು ಆನೆ ಬಲಬಂದಂತಾಗಿದೆ. ಇದು ಪ್ರತಾಪಗೌಡ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
undefined
ಸಿ.ಡಿ. ವಿಚಾರ ಮಾತನಾಡುವುದು ಬೇಡ. ನಾವು ಚುನಾವಣೆ ಎಂಬ ಯುದ್ಧಕ್ಕೆ ತೆರಳುತ್ತಿದ್ದೇವೆ. ಹೀಗಾಗಿ, ಆ ವಿಷಯದ ಮಾತುಕತೆ ಬೇಡ ಎಂದರು. ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ ಅವರ ಕುರಿತು ಕೇಳಿದ ಪ್ರಶ್ನೆಗೂ ಉತ್ತರಿಸದೆ ಮುಂದೆ ಸಾಗಿದರು.
undefined
ಈಗಾಗಲೇ ಈ ಹಿಂದೆ ನಡೆದ 12 ಉಪ ಚುನಾವಣೆಯಲ್ಲಿಯೂ ಬಿಜೆಪಿ ಜಯ ಸಾಧಿಸಿದೆ. ಹೀಗಾಗಿ, ಈ ಬಾರಿಯೂ ಉಪ ಚುನಾವಣೆಯಲ್ಲಿ ಗೆಲವು ನಿಶ್ಚಿತ ಎಂದರು.
undefined
ಮಸ್ಕಿ ಉಪಚುನಾವಣೆ ಹಿನ್ನೆಲೆಯಲ್ಲಿ ಕನಕಗಿರಿ ಮಾರ್ಗವಾಗಿ ಮಸ್ಕಿಗೆ ತೆರಳುತ್ತಿದ್ದ ವಿಜಯೇಂದ್ರ, ತಾವರಗೇರಾ ಹನುಮಸಿಂಗ್‌ ಅವರ ಹೋಟೆಲ್‌ ಬಳಿ ವಾಹನ ನಿಲ್ಲಿಸಿ, ಮಿರ್ಚಿ ತಿನ್ನಲು ಮುಂದಾದರು. ಆಗ ಬಿಸಿ ಬಿಸಿ ಮಿರ್ಚಿ ಹಾಕುತ್ತಿದ್ದನ್ನು ಗಮನಿಸಿದ ಅವರು, ತಾವೇ ಸ್ವತಃ ಮಿರ್ಚಿಯನ್ನು ಹಿಟ್ಟಿನಲ್ಲಿ ಅದ್ದಿ, ಎಣ್ಣೆಯಲ್ಲಿ ಬಿಟ್ಟು, ಗರಿ ಗರಿಯಾದ ಮಿರ್ಚಿಯನ್ನು ತೆಗೆದು ತಿಂದರು.
undefined
ತಾವು ಅನೇಕ ಸಾರಿ ಈ ರೀತಿಯಾಗಿ ಮಿರ್ಚಿ ಭಜಿಯನ್ನು ಹಾಕಿಕೊಂಡು ತಿಂದಿ​ದ್ದ​ನ್ನು ಈ ವೇಳೆ ಸ್ಮರಿಸಿಕೊಂಡರು. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಮಿರ್ಚಿ ಭಜಿಯಷ್ಟು ರುಚಿ ಮತ್ತೆಲ್ಲಿಯೂ ಇರುವುದಿಲ್ಲ, ಸ್ವಾದ ತುಂಬಾ ಚೆನ್ನಾಗಿರುತ್ತದೆ ಎಂದರು.
undefined
ಬಿ.ವೈ. ವಿಜಯೇಂದ್ರ ಅವರು ಮಿರ್ಚಿ ಜೊತೆಗೆ ಉತ್ತರ ಕರ್ನಾಟಕ ಪ್ರದೇಶದ ಸಾಂಪ್ರದಾಯಿಕ ತಿಂಡಿಯಾದ ಮಂಡಾಳ (ಚುರುಮುರಿ)ವನ್ನೂ ಸವಿದು ಸಂಭ್ರಮಿಸಿದರು.
undefined
ಬಳಿಕ ರಸ್ತೆ ಬದಿಯ ಹೋಟೆಲ್‌ನಲ್ಲಿಯೇ ಕುಳಿತುಕೊಂಡು ಸಾಮಾನ್ಯರಂತೆ ಮಿರ್ಚಿ ಭಜಿಯನ್ನು ತಿಂದರು. ಕನಕಗಿರಿಯ ಶಾಸಕ ಬಸವರಾಜ ದಡೇಸ್ಗೂರು ಜತೆಗಿದ್ದರು.
undefined
click me!