ಶನಿವಾರ ರಾತ್ರಿ ಛಬ್ಬಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದ ಸಚಿವ ಆರ್. ಅಶೋಕ್
ಬೆಳಗ್ಗೆ ಎದ್ದು ಕನ್ನಡ ಪ್ರಭ ಪ್ರತಿಕೆ ಓದಿದ ಸಚಿವರು. ಪತ್ರಿಕೆ ಓದುತ್ತಲೇ ಜನರ ಸಮಸ್ಯೆ ಆಲಿಸಿದ ಅಶೋಕ್
ಬಳಿಕ ಗ್ರಾಮದ ಕೆರೆಯದಂಡೆ ಮೇಲೆ ವಾಯು ವಿಹಾರ ಮಾಡಿದ್ದಾರೆ. ಸಚಿವರಿಗೆ ಸಾಥ್ ಕೊಟ್ಟ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್, ವಿಶೇಷ ಅಧಿಕಾರಿ ಮೋಹನ್ ರಾಜ್. ತಮ್ಮ ಕ್ಯಾಮೆರಾ ಕಣ್ಣಲ್ಲಿ ಪ್ರಕೃತಿಯ ನೈಜಕ ಸೌಂದರ್ಯವನ್ನ ಸೆರೆ ಹಿಡಿದ ಸಚಿವ ಆರ್. ಅಶೋಕ್
ಈ ವೇಳೆ ಮಾತನಾಡಿದ ಸಚಿವರು, ಉತ್ತರ ಕರ್ನಾಟಕ ಜನರು ತೋರಿದ ಪ್ರೀತಿಗೆ ನಾನು ಋಣಿಯಾಗಿದ್ದೇನೆ. ಸಚಿವ ಊರಿಗೆ ಬರ್ತಾರೆ ಅಂದ್ರೆ ಜನರು ಓಡೋಡಿ ಬಂದ್ರು, ಮನೆ ಮುಂದೆ ರಂಗೋಲಿ ಹಾಕಿ ಸ್ವಾಗತಿಸಿದ್ದಾರೆ. ಗ್ರಾಮದ ಹಲವಾರು ಸಮಸ್ಯೆಗಳಿಗೆ ಸ್ಥಳದಲ್ಲೇ ಸ್ಪಂದನ ಸಿಕ್ಕಿದೆ. ಗ್ರಾಮದ ಕರೆಗೆ ತ್ಯಾಜ್ಯ ನೀರು ಹರಿಬಿಡುವ ತಕ್ಷಣಕ್ಕೆ ನಿಲ್ಲಿಸಲು ನೋಟಿಸ್ ನೀಡಿದ್ದೇವೆ. ಗ್ರಾಮದ ಕೆರೆ ವಾತಾವರಣ ನೋಡಿದ್ರೆ ಊಟಿ ನೋಡಿದ ಅನುಭವ ಆಯ್ತು ಎಂದು ಹೇಳಿದ್ದಾರೆ.
ಬಳಿಕ ಸಚಿವ ಅಶೋಕ್ ಅವರು ಗ್ರಾಮದ ದಲಿತರ ಮನೆಯಲ್ಲಿ(ಪ್ರಕಾಶ ಕಾಳೆ) ಉಪ್ಪಿಟ್ಟು, ಇಡ್ಲಿ, ಮೊಸರು ಅವಲಕ್ಕಿ ಸವಿದ ಆರ್. ಆಶೋಕ.