ತಮ್ಮನಿಗೆ ನಿಶ್ಚಯವಾಗಿದ್ದ ಹುಡುಗಿಯ ಮೇಲೆ ಆಸೆ; ತಲೆಮೇಲೆ ಕಲ್ಲು ಹಾಕಿ ಕೊಂದ ಅಣ್ಣ!

Published : Mar 18, 2026, 07:29 AM IST

ತಮ್ಮನಿಗೆ ನಿಶ್ಚಯವಾಗಿದ್ದ ಹುಡುಗಿಯ ಮೇಲೆ ಆಸೆಪಟ್ಟು ಅಣ್ಣನೇ ತಮ್ಮನನ್ನು ಕೊಲೆ ಮಾಡಿದ್ದಾನೆ. ಆರೋಪಿ ಅಶೋಕ, ತನ್ನ ತಮ್ಮ ಫಕೀರಪ್ಪನನ್ನು ಹತ್ಯೆ ಮಾಡಿ, ಅಪರಿಚಿತರು ಕೊಂದಿದ್ದಾರೆಂದು ನಾಟಕವಾಡಿದ್ದ. ಪೊಲೀಸರ ತನಿಖೆಯಲ್ಲಿ ಸತ್ಯಾಂಶ ಬಯಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

PREV
15
ತಮ್ಮ ಮದುವೆಯಾಗಬೇಕಿದ್ದ ಹುಡುಗಿ ಮೇಲೆ ಅಣ್ಣನಿಗೆ ಆಸೆ

ತಮ್ಮನಿಗೆ ನಿಶ್ಚಯಿಸಲಾಗಿದ್ದ ಕನ್ಯೆಗಾಗಿ ಆಸೆಪಟ್ಟಿದ ಅಣ್ಣನೊಬ್ಬ ಒಡಹುಟ್ಟಿದ ತಮ್ಮನನ್ನೇ ಕೊಲೆ ಮಾಡಿರುವ ಘಟನೆ ಗದಗ ಜಿಲ್ಲೆ ನರಗುಂದ ತಾಲೂಕಿನ ಹಿರೇಕೊಪ್ಪ ಗ್ರಾಮದಲ್ಲಿ ಮಂಗಳವಾರ ನಡೆದಿದ್ದು, ಹತ್ಯೆಗೈದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

25
ಕುರಿಗಾಹಿ ಫಕೀರಪ್ಪ

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಚಿಕ್ಕಮೂಲಂಗಿ ಗ್ರಾಮದ ಕುರಿಗಾಹಿ ಫಕೀರಪ್ಪ ಕುರವಿನಕೊಪ್ಪ (19) ಮೃತ. ಈತನ ಅಣ್ಣ ಅಶೋಕ ಬಂಧಿತ ಆರೋಪಿ. ಹತ್ಯೆ ಬಳಿಕ ಪೊಲೀಸರಿಗೆ ಕರೆ ಮಾಡಿದ್ದ ಅಶೋಕ್, ಯಾರೋ ದುಷ್ಕರ್ಮಿಗಳು ತಮ್ಮನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆಂದು ಸುಳ್ಳು ಹೇಳಿ ಪಾರಾಗಲು ಯತ್ನಿಸಿದ್ದ.

35
ಸೋದರನೊಂದಿಗೆ ಗಲಾಟೆ

ಪೊಲೀಸರು ಅನುಮಾನದ ಮೇಲೆ ಅಶೋಕನನ್ನು ವಶಕ್ಕೆ ಪಡೆದು ವಿಚಾಸಿದಾಗ ಸತ್ಯ ಬಯಲಾಗಿದೆ. ಹುಡುಗಿ ವಿಷಯವಾಗಿ ಫಕ್ಕೀರಪ್ಪನ ಜೊತೆಗೆ ಗಲಾಟೆಯಾಗಿತ್ತು. ತಮ್ಮನನ್ನು ಕೊಲೆ ಮಾಡಿದರೆ ಆ ಹುಡುಗಿ ನನಗೆ ಸಿಗುತ್ತಾಳೆ ಎಂದು ಕೃತ್ಯ ಮಾಡಿರುವುದಾಗಿ ಆರೋಪಿ ಅಶೋಕ್ ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.

45
ತಾಯಿ ಯಲ್ಲಮ್ಮ ಕಣ್ಣೀರು

ಅಶೋಕನಿಗೂ ಹಿರಿಯರು ಕನ್ಯೆ ಹುಡುಕಿದ್ದರು. ಆದರೆ, ಆ ಹುಡುಗಿ ಆತನಿಗೆ ಇಷ್ಟ ಇರಲಿಲ್ಲ. ಫಕೀರಪ್ಪನ ಹುಡುಗಿಗೆ ಆಸೆಪಟ್ಟು ತಮ್ಮನನ್ನೇ ಕೊಲೆ ಮಾಡ್ತಾನೆ ಅಂದುಕೊಂಡಿರಲಿಲ್ಲ ಎಂದು ತಾಯಿ ಯಲ್ಲಮ್ಮ ಅಳಲು ತೊಡಿಕೊಂಡಿದ್ದಾರೆ.

ಇದನ್ನೂ ಓದಿ: Jai Bangla Slogan Case: 'ಜೈ ಬಾಂಗ್ಲಾ' ಘೋಷಣೆ ಕೂಗಿ ಜೈಲು ಸೇರಿದ್ದ ಮಹಿಳೆಗೆ ಹೈಕೋರ್ಟ್ ಜಾಮೀನು

55
ಆರೋಪಿಯ ಬಂಧನ

ಸುದ್ದಿ ತಿಳಿಯುತ್ತಿದ್ದಂತೆ ನರಗುಂದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಪೊಲೀಸರ ತನಿಖೆ ವೇಳೆ ಆರೋಪಿ ಅಶೋಕ್ ಸತ್ಯ ಬಾಯಿಬಿಟ್ಡಿದ್ದಾನೆ. ನರಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: ಪ್ರೀತಿಗೆ ಅಡ್ಡಿಯಾದ ಜಾತಿ; ಪೊಲೀಸ್‌ ಭದ್ರತೆ ಪಡೆದು, ದೇವಸ್ಥಾನದಲ್ಲಿ ಮದುವೆಯಾದ ಬೆಂಗಳೂರಿನ ಜೋಡಿ

Read more Photos on
click me!

Recommended Stories