20 ವರ್ಷಗಳ ಹಿಂದೆ ಮುಚ್ಚಿದ ಪ್ರತಿಷ್ಠಿತ ಆಸ್ಪತ್ರೆಗೆ ಮರುಜೀವ ನೀಡಲು ನಿರ್ಧರಿಸಲಾಗಿದ್ದು, ಕೋವಿಡ್ ಕೇರ್ ಸೆಂಟರ್ ಆಗಿ ಬದಲಾವಣೆ ಮಾಡಲಾಗಿದೆ.
undefined
ಕೋಲಾರ ಸಂಸದ ಮುನಿಸ್ವಾಮಿ ಪ್ರಯತ್ನದಿಂದ ಹಳೆಯ ಆಸ್ಪತ್ರೆ ಮತ್ತೆ ಕಾರ್ಯಾರಂಭ ಮಾಡಲಿದೆ. 2001ರಲ್ಲಿ ಮುಚ್ಚಿದ್ದ ಆಸ್ಪತ್ರೆ ಮರುಪ್ರಾರಂಭಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅನುಮತಿ ನೀಡಿದ್ದಾರೆ.
undefined
ಕೇಂದ್ರ ಗಣಿ ಮತ್ತು ಕಲ್ಲಿದ್ದಲು ಖಾತೆ ಸಚಿವ ಪ್ರಹ್ಲಾದ್ ಜೋಷಿ ಕೋಲಾರ ಜಿಲ್ಲೆಯ ಬಹುದೊಡ್ಡ ಆಸ್ಪತ್ರೆ ಎಂಬ ಹೆಗ್ಗಳಿಕೆ ಪಡೆದಿದ್ದ BGMLಆಸ್ಪತ್ರೆಯನ್ನು ಕೊರೋನಾ ಆಸ್ಪತ್ರೆಯಾಗಿ ಬದಲಾಯಿಸಲು ಅನುಮತಿಸಿದ್ದಾರೆ.
undefined
ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನಲ್ಲಿರುವ BGML ಆಸ್ಪತ್ರೆಗೆ 20 ವರ್ಷಗಳ ಹಿಂದೆ ಬಾಗಿಲು ಹಾಕಲಾಗಿತ್ತು. ಈಗ ಕೋವಿಡ್ ಕೇರ್ ಸೆಂಟರ್ ಮಾಡಲು ಕೇಂದ್ರ ಸರ್ಕಾರ ಅನುಮತಿಸಿದೆ.
undefined
140 ವರ್ಷಗಳ ಇತಿಹಾಸವಿರುವ ಬ್ರಿಟಿಷರ ಕಾಲದ ಆಸ್ಪತ್ರೆ ಯಲ್ಲಿ ನೂರಕ್ಕೂ ಹೆಚ್ಚು ಜನರು ಇರುವಷ್ಟು ನಾಲ್ಕು ಬೃಹತ್ ವಾರ್ಡ್‌ಗಳಿವೆ. ಪ್ರತ್ಯೇಕ ಕೋಣೆಗಳು ಕೂಡ ಸಾಕಷ್ಟು ಸಂಖ್ಯೆಯಲ್ಲಿವೆ.
undefined
ಕಟ್ಟಡದಲ್ಲಿನ ಗಿಡಗಂಟೆಗಳ ತೆರವು ಹಾಗೂ ಶುಚಿ ಮಾಡುವ ಕಾರ್ಯ ಶುರುವಾಗಿದೆ.
undefined
ಅಂದು ಇಲ್ಲ ಚಿನ್ನದ ಗಣಿಯಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಗಳಿಗೆ, ಕುಟುಂಬದವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದಾಯ ಕಡಿಮೆ ಬರುತ್ತಿದ್ದರಿಂದ 2001 ರ ಮಾರ್ಚ್ 4 ರಂದು ಮುಚ್ಚಲಾಗಿತ್ತು.
undefined
ಕೋಲಾರ ಜಿಲ್ಲೆಯಲ್ಲದೆ ಬೆಂಗಳೂರು, ತಮಿಳುನಾಡಿನ ಅಂಬೂರು, ಗುಡಿಯಾತಂ, ಕೊಲಂಬಾಡಿ, ಆಂದ್ರದ ಕುಪ್ಪಂ ಪ್ರದೇಶಗಳಿದ್ದ ಬಂದು ಜನ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಸಂಸದ ಎಸ್.ಮುನಿಸ್ವಾಮಿ ಕಾರ್ಯಕ್ಕೆ ಜಿಲ್ಲೆಯ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
undefined