'ಕೋವಿಡ್‌ ಕೇರ್‌ ಸೆಂಟರ್‌ನಲ್ಲೂ ಆಕ್ಸಿಜನ್‌ ಬೆಡ್‌ ವ್ಯವಸ್ಥೆ’

First Published | Apr 25, 2021, 8:35 AM IST

ಬೆಂಗಳೂರು(ಏ.25): ಕೋವಿಡ್‌ ಆರೈಕೆ ಕೇಂದ್ರಗಳಲ್ಲೂ ಕನಿಷ್ಠ ಶೇ.10ರಷ್ಟು ಆಕ್ಸಿಜನ್‌ ಸೌಲಭ್ಯಯುಳ್ಳ ಹಾಸಿಗೆ ಇರುವಂತೆ ವ್ಯವಸ್ಥೆ ಮಾಡಲು ಕ್ರಮಕೈಗೊಂಡಿದ್ದೇವೆ ಎಂದು ಸರ್ಕಾರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌ ತಿಳಿಸಿದ್ದಾರೆ.

ಶನಿವಾರ ಪಶ್ಚಿಮ ವಲಯದ ದೊಮ್ಮಲೂರಿನ ವಾರ್‌ ರೂಂಗೆ ಪಾಲಿಕೆ ಮುಖ್ಯ ಆಯುಕ್ತ ಗೌರವ್‌ ಗುಪ್ತಾ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸರ್ಕಾರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್‌
ಚಿಕ್ಕ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಪ್ಲಾಂಟ್‌ ಇಲ್ಲ. ಅವರು ಸಣ್ಣ ಸಿಲಿಂಡರ್‌ಗಳಲ್ಲಿ ಆಕ್ಸಿಜನ್‌ ತುಂಬಿಕೊಂಡು ಬಂದಿರುತ್ತಾರೆ. ಈ ಹಿಂದೆ ಒಮ್ಮೆ ಒಂದು ಸಿಲಿಂಡರ್‌ ತುಂಬಿಕೊಂಡರೆ ಮೂರು ದಿನ ಬಳಸಬಹುದಾಗಿತ್ತು. ಈಗ ಒಂದು ದಿನದಲ್ಲಿ ಒಂದೊಂದು ಸಿಲಿಂಡರನ್ನು ಎರಡ್ಮೂರು ಬಾರಿ ತುಂಬಿಕೊಂಡು ಬರುವಂತಾಗಿದೆ. ಅದಕ್ಕಾಗಿ ಹೋಗಿ ಸಿಲಿಂಡರ್‌ ತುಂಬಿಸಿಕೊಂಡು ಬರುವುದು ತಡವಾಗುತ್ತಿದೆ. ಇದು ಸರಬರಾಜು ಸಮಸ್ಯೆ ಹೊರತು ಆಕ್ಸಿಜನ್‌ ಸಮಸ್ಯೆಯಲ್ಲ ಎಂದರು.
Tap to resize

ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಪ್ಲಾಂಟ್‌ ಇಲ್ಲದಿದ್ದರೆ ಕನಿಷ್ಠ ಆಕ್ಸಿಜನ್‌ ದಾಸ್ತಾನು ಸಂಗ್ರಹ ಸಾಮರ್ಥ್ಯ ಹೆಚ್ಚಿಸಿಕೊಳ್ಳಬೇಕು. ಆಗ ಮಾತ್ರ ಆಕ್ಸಿಜನ್‌ ಸರಬರಾಜು ಕೊರತೆ ಕಡಿಮೆಯಾಗಲಿದೆ ಎಂದು ತಿಳಿಸಿದ ರವಿಕುಮಾರ್‌
ಪ್ರಸ್ತುತ ಸೋಂಕಿತರ ಅನುಕೂಲಕ್ಕಾಗಿ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಆಕ್ಸಿಜನ್‌ ವ್ಯವಸ್ಥೆ ಮಾಡಲು ನಿರ್ಧರಿಲಾಗಿದೆ. ಆದರೆ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಐಸಿಯು ಸ್ಥಾಪನೆ ಸಾಧ್ಯವಿಲ್ಲ ಎಂದು ಹೇಳಿದ ಪಿ.ರವಿಕುಮಾರ್‌

Latest Videos

click me!