ರಾಘವೇಂದ್ರ ಭಟ್ ಸಾಕಿದ್ದು ಬೆಲ್ಜಿಯನ್ ಮೆಲಿನೋಯ್ಸ್ ತಳಿಯ ಮೂರು ನಾಯಿಗಳನ್ನು. ಈ ನಾಯಿಗಳ ಮರಿಗಾಗಿ ಭಾರಿ ಬೇಡಿಕೆ ಇದೆ.
undefined
ಈ ಹಿಂದೆ ಹಾಕಿದ 14 ಮರಿಗಳು ಬೆಂಗಳೂರು ಪೊಲೀಸ್ ಶ್ವಾನದಳಕ್ಕೆ, ನಾಗಾಲ್ಯಾಂಡ್, ಕೇರಳ ಹಾಗೂ ರಾಜ್ಯದ ವಿವಿಧೆಡೆಯ ಜನತೆ ಕೊಂಡೊಯ್ದಿದ್ದಾರೆ. ಈಗ ಹುಟ್ಟಲಿರುವ ಮರಿಗಳಿಗಾಗಿ ನಾಗಾಲ್ಯಾಂಡ್, ತಮಿಳುನಾಡು, ತೆಲಂಗಾಣ ಹಾಗೂ ಗುಜರಾತ್‌ನ ಜನತೆ ಮುಂಗಡ ಬುಕ್ ಮಾಡಿದ್ದಾರೆ.
undefined
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವೀಕ್ಷಣಾಲಯದ ಅಧೀಕ್ಷಕರಾಗಿರುವ ರಾಘವೇಂದ್ರ ಜಿ. ಭಟ್ ಅವರಿಗೆ ಶ್ವಾನಗಳನ್ನು ಸಾಕುವುದು ಕ್ರೇಜ್. ಇವರ ಶ್ವಾನಗಳು ಕೆಲವೆಡೆ ಪ್ರಶಸ್ತಿಯನ್ನೂ ಪಡೆದಿವೆ. ಹೆಚ್ಚು ಕಡಿಮೆ 22 ವರ್ಷಗಳಿಂದ ಶ್ವಾನಗಳನ್ನು ಸಾಕುತ್ತಿದ್ದಾರೆ.
undefined
ವರ್ಷ, ಎರಡು ವರ್ಷಗಳಿಗೊಮ್ಮೆ ಶ್ವಾನಗಳನ್ನು ಬದಲಿಸುತ್ತ ಬಹುತೇಕ ತಳಿಗಳ ಶ್ವಾನಗಳನ್ನು ಸಾಕಿದ ಅನುಭವ ಇವರಿಗಿದೆ. ಡಾಬರ್‌ಮನ್, ಜರ್ಮನ್ ಶೆಫರ್ಡ್, ಬಾಕ್ಸರ್, ಪಗ್, ಮುಧೋಳ, ಇಂಡಿಯನ್ ಮೆಸ್ಟಿಫ್, ಸೆಂಟ್ ಬರ್ನಾಡ್ ಹೀಗೆ ವಿವಿಧ ತಳಿಯ ಶ್ವಾನಗಳನ್ನು ಹಿಂದೆ ಸಾಕಿದ ಅನುಭವದೊಂದಿಗೆ ಈಗ ಬೆಲ್ಜಿಯಂ ಮೆಲಿನೋಯ್ಸ್ ತಳಿಯ 1 ಗಂಡು, 2 ಹೆಣ್ಣು ಹೀಗೆ 3 ಶ್ವಾನಗಳಿವೆ. ದೆಹಲಿ ಹಾಗೂ ಹೈದರಾಬಾದ್‌ಗೆ ತೆರಳಿ ಲಕ್ಷಾಂತರ ರು. ನೀಡಿ ಶ್ವಾನ ಖರೀದಿಸಿ ತಂದಿದ್ದಾರೆ. ಪ್ರತಿ ನಾಯಿ ಮರಿಯನ್ನು 50-60 ಸಾವಿರಗಳಿಗೆ ಮಾರಾಟ ಮಾಡಿದ್ದಾರೆ.
undefined
ಕೇವಲ ಕ್ರೇಜ್‌ಗಾಗಿ ಶ್ವಾನಗಳನ್ನು ಸಾಕುವುದನ್ನು ಆರಂಭಿಸಿದ ಇವರು, ಅದನ್ನು ಯಶಸ್ವಿಯಾಗಿ ಮುಂದುವರಿಸಿದರು. ಆರಂಭದಲ್ಲಿ ನಾಯಿಗಳಿಗೆ ಚಿಕ್ಕಪುಟ್ಟ ಅನಾರೋಗ್ಯವಾದಾಗ ಇವರೇ ಔಷಧಿ ಮಾಡುತ್ತ, ತಜ್ಞಪಶು ವೈದ್ಯರ ಸಲಹೆ, ಮಾರ್ಗದರ್ಶನ, ಅವರು ನೀಡುವ ಚಿಕಿತ್ಸೆ ನೋಡಿ ಈಗ ಇವರೇ ಪಶುವೈದ್ಯರ ಮಟ್ಟಕ್ಕೆ ಬೆಳೆದಿದ್ದಾರೆ.
undefined
ಆರಂಭದಲ್ಲಿ ಕೆಲವು ನಾಯಿಗಳ ವರ್ತನೆ ನೋಡಿ ಮನೆಯವರು ಇವರಿಗೆ ಕಿರಿಕಿರಿ ಮಾಡಿದ್ದಿದೆ. ಆದರೆ ಉತ್ತಮ ತಳಿಯ ನಾಯಿಗಳು ಬಂದಾಗ ಅಷ್ಟೇ ಅಕ್ಕರೆಯಿಂದ ಆರೈಕೆ ಮಾಡಿದ್ದಾರೆ. ಈಗಂತೂ ಬೆಲ್ಜಿಯಂ ಮೆಲನೋಯ್‌್ಸ ಶ್ವಾನ ಅಂದರೆ ಇವರ ತಾಯಿ ಗೀತಾ, ಪತ್ನಿ ರಾಜೇಶ್ವರಿ, ಮಗಳು ಅನನ್ಯ ರಾಘವೇಂದ್ರ ಭಟ್ ಅವರಿಗೆ ಸಾಥ್ ನೀಡುತ್ತಿದ್ದಾರೆ.
undefined
ಬೆಲ್ಜಿಯನ್ ಮೆಲಿನೋಯ್ಸ್ ದಣಿವರಿಯದೆ 25 ಕಿ.ಮೀ. ದೂರ ಕ್ರಮಿಸುವ ಸಾಮರ್ಥ್ಯ ಹೊಂದಿದೆ. 1 ಕಿ.ಮೀ. ದೂರದ ಸಣ್ಣ ಶಬ್ದವನ್ನೂ ಗ್ರಹಿಸಬಲ್ಲದು. ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿ ತರಬೇತಿ ನೀಡಬಹುದು. ದೇಶದ ಎಲ್ಲ ವಾತಾವರಣಕ್ಕೂ ಹೊಂದಿಕೊಳ್ಳಬಲ್ಲದು.
undefined
ರಾಘವೇಂದ್ರ ಭಟ್ ಶುದ್ಧ ಶಾಕಾಹಾರಿ. ಆದರೆ ಚಿಕನ್ ಅಂಗಡಿಯಲ್ಲಿ ಇವರ ಅಕೌಂಟ್ ಇದೆ. ಇವರ ಮನೆಗೆ ಪ್ರತಿದಿನ ಚಿಕನ್ ರೈಸ್, ಹಸಿ ಮಾಂಸ, ಬೇಯಿಸಿದ ಮೊಟ್ಟೆಗಳ ಪಾರ್ಸೆಲ್ ಬರುತ್ತದೆ. ಶ್ವಾನಗಳಿಗೆ ಮಾಂಸಾಹಾರ ಬೇಕೇಬೇಕು. ಮಾಂಸಾಹಾರ ತಂದು ಹಾಕಲೆಂದೆ ಒಬ್ಬನನ್ನು ನೇಮಕ ಮಾಡಿಕೊಂಡಿದ್ದಾರೆ. ಪ್ರತಿ ತಿಂಗಳು ಶ್ವಾನಗಳ ಆಹಾರಕ್ಕೆಂದೆ 15-20 ಸಾವಿರ ವೆಚ್ಚ ಮಾಡುತ್ತಾರೆ.
undefined
ನನಗೆ ನಾಯಿ ಸಾಕುವುದು ಹವ್ಯಾಸ. ನಾಯಿಗಳಿಂದ ಹಣ ಮಾಡುವ ಉದ್ದೇಶ ಇಲ್ಲ. ಬಂದ ಸಂಬಳದಲ್ಲಿ ಕೆಲವು ಭಾಗವನ್ನು ನಾಯಿಗಳಿಗಾಗಿ ವಿನಿಯೋಗಿಸುತ್ತೇನೆ. ನಾಯಿಗಳ ನಿಷ್ಟೆ, ವಿಧೇಯತೆ ಖುಷಿ ಕೊಡುವ ಸಂಗತಿ ಎಂದು ರಾಘವೇಂದ್ರ ಭಟ್ ತಿಳಿಸಿದ್ದಾರೆ.
undefined