ನಾಳೆಯಿಂದ ಬೆಂಗಳೂರು ಹೃದಯಭಾಗದ ರಸ್ತೆಯಲ್ಲಿ ಕಾಮಗಾರಿ, 15 ದಿನ ಟ್ರಾಫಿಕ್ ಸಂಕಷ್ಟ ತಪ್ಪಿದ್ದಲ್ಲ

Published : Mar 04, 2026, 01:50 PM IST

ಬೆಂಗಳೂರಿನ ರಸ್ತೆಯಲ್ಲಿ 15 ದಿನಗಳ ಕಾಲ ರಸ್ತೆ ದುರಸ್ತಿ ಕಾಮಗಾರಿ ನಡೆಯಲಿದೆ. ಈ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗುವ ಸಾಧ್ಯತೆಯಿದ್ದು, ಡಾಂಬರೀಕರಣದ ಸಮಯದಲ್ಲಿ ಪರ್ಯಾಯ ಮಾರ್ಗ ಸೂಚಿಸಲಾಗುವುದು.

PREV
15
15 ದಿನ ಟ್ರಾಫಿಕ್ ಹೆಚ್ಚಳ

ನಾಳೆಯಿಂದ ಬೆಂಗಳೂರಿನ ಹೃದಯಭಾಗದ ರಸ್ತೆಯ ರಿಪೇರಿ ಕೆಲಸಗಳು ಆರಂಭವಾಗಲಿದ್ದು, ಮುಂದಿನ 15 ದಿನ ಟ್ರಾಫಿಕ್ ಹೆಚ್ಚಳವಾಗುವ ಎಲ್ಲಾ ಸಾಧ್ಯತೆಗಳಿವೆ. ಕಾಮಗಾರಿ ಆರಂಭದ 8 ರಿಂದ 9 ದಿನ ಯಾವುದೇ ಪರ್ಯಾಯ ಮಾರ್ಗ ಸೂಚಿಸಿಲ್ಲ. ಡಾಂಬರೀಕರಣ ಆರಂಭವಾದ ಬಳಿಕವಷ್ಟೇ ಪರ್ಯಾಯ ಮಾರ್ಗ ಬಳಕೆಗೆ ಸೂಚನೆ ನೀಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

25
ಎಂಜಿ ರಸ್ತೆ

ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಕಾಮಗಾರಿ ಕೆಲಸಗಳು ನಡೆಯಲಿವೆ. ಈ ಕಾಮಗಾರಿಯನ್ನು 15 ದಿನದೊಳಗೆ ಮುಗಿಸುವಂತೆ ಗಡುವು ನೀಡಲಾಗಿದೆ. ಮಾರ್ಚ್ 4 ಸಂಜೆಯೊಳಗೆ ಕಾಮಗಾರಿಗೆ ಸಂಬಂಧಿಸಿದ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು Bengaluru Central City Corporation ಚೀಫ್ ಇಂಜಿನಿಯರ್ ವಿಜಯಕುಮಾರ್ ಹರಿದಾಸ್ ಮಾಹಿತಿ ನೀಡಿದ್ದಾರೆ. ಮಾರ್ಚ್ 5ರಿಂದ ಕೆಲಸಗಳು ಆರಂಭಗೊಳ್ಳಲಿವೆ ಎಂದು ವರದಿಯಾಗಿದೆ.

35
ಟ್ರಿನಿಟಿ ಸರ್ಕಲ್‌ ಮತ್ತು ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಶನ್ ಸರ್ಕಲ್

ಟ್ರಿನಿಟಿ ಸರ್ಕಲ್‌ ಮತ್ತು ಕಬ್ಬನ್ ಪಾರ್ಕ್ ಪೊಲೀಸ್ ಸ್ಟೇಶನ್ ಸರ್ಕಲ್ ನಡುವಿನ 2.2 ಕಿ.ಮೀ. ರಸ್ತೆಯ ಕೆಲಸಗಳು ನಡೆಯಲಿವೆ. ನಗರದ ಪ್ರಮುಖ ರಸ್ತೆ ಎಂಜಿ ರೋಡ್ ಸಹ ಸೇರ್ಪಡೆಯಾಗಲಿದೆ. ರಸ್ತೆಯ ಮೇಲ್ಭಾಗವನ್ನು ಸಂಪೂರ್ಣವಾಗಿ ತೆರವುಗೊಳಿಸಿ ಎಲ್ಲವನ್ನೂ ಕ್ರಮಬದ್ಧವಾಗಿ ಮಾಡಲಾಗುತ್ತಿದೆ. ಬೆಳಗ್ಗೆ ಮತ್ತು ಸಂಜೆ ಈ ಭಾಗದಲ್ಲಿ ವಾಹನ ದಟ್ಟನೆ ಹೆಚ್ಚಾಗಲಿದೆ.

45
ರಸ್ತೆ ಕಾಮಗಾರಿ

ವಾಹನ ಸಂಚಾರಕ್ಕೆ ಅಡಚಣೆಯಾಗದಂತೆ ರಸ್ತೆ ಕಾಮಗಾರಿಯನ್ನು ಆರಂಭಿಸಲಾಗುತ್ತಿದೆ. ರಸ್ತೆ ಒಡೆಯುವುದು, ಡೆಬ್ರಿಸ್ ತೆರುವುಗೊಳಿಸುವ ಪ್ರಕ್ರಿಯೆ ಮೂಲಕ ಕೆಲಸಗಳು ನಡೆಯಲಿವೆ. ರಸ್ತೆಯಲ್ಲಿ ಯಾವುದೇ ಜಲ್ಲಿಕಲ್ಲು, ಅವಶೇಷ ಸಂಗ್ರಹಗೊಳ್ಳದಂತೆ ನೋಡಿಕೊಳ್ಳಲಾಗುವುದು ಶಾಂತಿ ನಗರದ ಎಕ್ಸಿಕ್ಯೂಟಿವ್ ಇಂಜಿನೀಯರ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ UV ವಿಕಿರಣ 'Extreme 13' ಮಟ್ಟಕ್ಕೆ, ಇದರಿಂದ ಆಗೋ ಸಮಸ್ಯೆಯೇನು?

55
ಪರ್ಯಾಯ ಮಾರ್ಗ

ಎಂ.ಜಿ.ರೋಡ್ ಮೂಲಕ ಸಂಚಾರ ಮಾಡುವ ಸವಾರ ಅಕ್ಷಯ್ ಕೆ. ಎಂಬವರು ಮಾತನಾಡಿ, ಇಷ್ಟು ದಿನ ಕೇವಲ ಪ್ಯಾಚ್ ವರ್ಕ್ ಮಾತ್ರ ಮಾಡಲಾಗುತ್ತಿತ್ತು. ಹಾಗಾಗಿ ರಸ್ತೆಯು ಏರಳಿತದಿಂದ ಕೂಡಿತ್ತು. ಇಡೀ ರಸ್ತೆಯನ್ನು ರಿಪೇರಿ ಮಾಡಬೇಕಿತ್ತು. ಕಡಿಮೆ ಸಮಯದಲ್ಲಿ ಗುಣಮಟ್ಟದ ರಸ್ತೆಯನ್ನು ಮಾಡಲಿ ಎಂದು ಹೇಳಿದ್ದಾರೆ. ಡಾಂಬರೀಕರಣ ಸಮಯದಲ್ಲಿ ಪರ್ಯಾಯ ಮಾರ್ಗ ಸೂಚಿಸಲಾಗುತ್ತದೆ.

ಇದನ್ನೂ ಓದಿ: ಬೆಂಗಳೂರು: ನಿಧಿಯಾಸೆಗೆ 900 ವರ್ಷಗಳ ಪುರಾತನ ದೇಗುಲದ ಗರ್ಭಗುಡಿ ಅಗೆದ ಆಂಧ್ರದ ರಿಯಲ್ ಎಸ್ಟೇಟ್ ಉದ್ಯಮಿ!

Read more Photos on
click me!

Recommended Stories