ನೆಲಮಂಗಲದಲ್ಲಿ 28 ವರ್ಷದ ಜಿಮ್ ಟ್ರೈನರ್ ದಿಲೀಪ್ ನೇಣಿಗೆ ಶರಣಾಗಿದ್ದಾರೆ. ವಿವಾಹಿತ ಮಹಿಳೆಯಿಂದ ಬ್ಲಾಕ್‌ಮೇಲ್‌ಗೆ ಒಳಗಾಗಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
28 ವರ್ಷದ ಯುವಕನೋರ್ವ ನೇಣು ಬಗಿದುಕೊಂಡು ಪ್ರಾಣ ಕಳೆದುಕೊಂಡಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ಪಟ್ಟಣದಲ್ಲಿ ನಡೆದಿದೆ. ದಿಲೀಪ್ ಮೃತ ಯುವಕನಾಗಿದ್ದು, ನೆಲಮಂಗಲದ ವಾಜರಹಳ್ಳಿಯಲ್ಲಿ ಜಿಮ್ ಟ್ರೈನರ್ ಆಗಿ ಕೆಲಸ ಮಾಡಿಕೊಂಡಿದ್ದರು.
25
ಸುನಿತಾ ಜೊತೆ ದಿಲೀಪ್‌ಗೆ ಸಂಬಂಧ?
ಜಿಮ್‌ನಲ್ಲಿ ದಿಲೀಪ್‌ಗೆ 42 ವರ್ಷದ ಸುನಿತಾ (ಹೆಸರು ಬದಲಾಯಿಸಲಾಗಿದೆ) ಎಂಬಾಕೆಯ ಪರಿಚಯವಾಗಿತ್ತು. ಸುನಿತಾಗೆ ಮದುವೆಯಾಗಿದ್ರೂ ದಿಲೀಪ್ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದಳು ಎಂಬ ಆರೋಪಗಳು ಕೇಳಿ ಬಂದಿವೆ. ಆನಂತ್ರ ಸುನಿತಾ ಬ್ಲಾಕ್‌ಮೇಲ್ ಮಾಡಲಾರಂಭಿಸಿದಳು ಎಂದು ದಿಲೀಪ್ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
35
ಬ್ಲಾಕ್‌ಮೇಲ್ ಮಾಡಿರುವ ಆರೋಪ
ಸುನಿತಾಳ ಬ್ಲಾಕ್‌ಮೇಲ್‌ನಿಂದ ನೊಂದು ದಿಲೀಪ್ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ ಎಂಬ ಆರೋಪಗಳು ಕೇಳಿ ಬಂದಿದೆ. ಸಾವಿಗೂ ಮುನ್ನ ಸುನಿತಾಗೆ ದಿಲೀಪ್ ಕರೆ ಮಾಡಿದ್ದಾನೆ. ಸುನಿತಾಗೆ ವಿಷಯ ತಿಳಿಸಿಯೇ ದಿಲೀಪ್ ಪ್ರಾಣ ಕಳೆದುಕೊಂಡಿದ್ದಾನೆ.
ಈ ವಿಷಯ ತಿಳಿಯುತ್ತಿದ್ದಂತೆ ದಿಲೀಪ್ ಸೋದರರಿಗೆ ಸುನಿತಾ ಮೆಸೇಜ್ ಮಾಡಿದ್ದಾಳೆ. ನಿನ್ನ ಸಹೋದರ ರೂಮಿನಲ್ಲಿ ಸೂ*ಸೈಡ್ ಮಾಡಿಕೊಂಡಿದ್ದಾನೆ. ಆತನ ರೂಮ್‌ಗೆ ಹೋಗಿ ಚೆಕ್ ಮಾಡಿ ಎಂದು ಹೇಳಿದ್ದಾನೆ. ಈ ವಿಷಯ ನಿನಗೆ ಹೇಗೆ ಗೊತ್ತಾಯ್ತು ಎಂದು ದಿಲೀಪ್ ಸೋದರರು ಪ್ರಶ್ನೆ ಮಾಡಿದ್ದಾರೆ. ಕೂಡಲೇ ತಡಮಾಡದೇ ಹೋಗಿ ನೋಡಿದಾಗ ದಿಲೀಪ್ ಶವ ಪತ್ತೆಯಾಗಿದೆ.
ಸ್ಥಳಕ್ಕೆ ನೆಲಮಂಗಲ ಟೌನ್ ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ದಿಲೀಪ್ ಮೃತದೇಹವನ್ನು ಮರಣೋತ್ತರ ಶವ ಪರೀಕ್ಷೆಗಾಗಿ ನೆಲಮಂಗಲದ ಸಾರ್ವಜನಿಕ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸುನಿತಾ ಮದುವೆ ಆಗಿದ್ದರೂ ಸಂಬಂಧ ಬೆಳೆಸಿ ಬ್ಲಾಕ್ ಮೇಲ್ ಮಾಡಿದ್ದಳು ಎಂದು ದಿಲೀಪ್ ಕುಟುಂಬ ಆರೋಪಿಸಿದೆ.