ರಕ್ತ ಕುದಿಯುತ್ತಿದೆ, ಹೃದಯ ಮಿಡಿಯುತ್ತಿದೆ: ಬೀದಿ ನಾಯಿಗಳಿಗಾಗಿ ನಟಿ ರಮ್ಯಾ ಕಣ್ಣೀರು; ಆಗಿದ್ದೇನು?

Published : Apr 12, 2026, 11:47 AM IST

ಬೆಂಗಳೂರಿನಲ್ಲಿ ಬೀದಿ ನಾಯಿಗಳನ್ನು ಅಮಾನವೀಯವಾಗಿ ಸೆರೆ ಹಿಡಿದಿದ್ದನ್ನು ಖಂಡಿಸಿ ನಟಿ ರಮ್ಯಾ ಪ್ರತಿಭಟನೆಯಲ್ಲಿ ಭಾಗವಹಿಸಿ ಕಣ್ಣೀರಿಟ್ಟಿದ್ದಾರೆ. ಈ ಕೃತ್ಯಕ್ಕೆ ಕಾರಣರಾದವರನ್ನು ಶಿಕ್ಷಿಸಬೇಕೆಂದು ಆಗ್ರಹಿಸಿದ್ದು, ಪ್ರಾಣಿಪ್ರಿಯರು ನಾಪತ್ತೆಯಾದ ನಾಯಿಗಳ ಬಗ್ಗೆ ಮಾಹಿತಿ ಕೇಳುತ್ತಿದ್ದಾರೆ.

PREV
16
ಬೀದಿ ನಾಯಿ- ಪರ, ವಿರೋಧ ನಿಲುವು

ಬೀದಿ ನಾಯಿಗಳ ಬಗ್ಗೆ ಹಲವು ವರ್ಷಗಳಿಂದ ಪರ-ವಿರೋಧ ನಿಲುವು ವ್ಯಕ್ತವಾಗುತ್ತಲೇ ಇವೆ. ಬೀದಿ ನಾಯಿಗಳು ಚಿಕ್ಕ ಮಕ್ಕಳು ಸೇರಿದಂತೆ ಹಲವು ಜೀವಗಳನ್ನು ಬಲಿ ಪಡೆದಿರುವ ಬಗ್ಗೆ ಆಕ್ರೋಶ ವ್ಯಕ್ತವಾಗುವುದು ಒಂದೆಡೆಯಾದರೆ, ಅವುಗಳಿಗೆ ಕಲ್ಲು ಹೊಡೆಯುವುದು, ಹಿಂಸೆ ನೀಡುವುದು ಮಾಡಿದರೆ ಮಾತ್ರ ಅವು ತಿರುಗಿ ಬೀಳುತ್ತವೆ, ಬೀದಿ ನಾಯಿಗಳ ಮೇಲೆ ಕ್ರೂರತೆ ಸಲ್ಲದು ಎನ್ನುವುದು ಪ್ರಾಣಿಪ್ರಿಯರ ಮಾತು. ಈ ವಿಷಯ ಸುಪ್ರೀಂಕೋರ್ಟ್​ವರೆಗೂ ಹೋಗಿದೆ. ಜನರು ನಾಯಿಗಳಿಗೆ ಆಹಾರ ನೀಡಲು ಅಥವಾ ಆರೈಕೆ ಮಾಡಲು ಬಯಸಿದರೆ, ಅವರು ಅದನ್ನು ತಮ್ಮ ಸ್ವಂತ ಆವರಣದಲ್ಲಿ ಮಾಡಬೇಕು ಅಥವಾ ತಮ್ಮ ಸ್ವಂತ ಮನೆಯಲ್ಲಿಯೇ ಸಾಕಬೇಕು ಮತ್ತು ತಮ್ಮ ಸ್ವಂತ ಮನೆಯಲ್ಲಿಯೇ ಆಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಪೀಠವು ಹೇಳಿದೆ.

26
ಸೆರೆ ಹಿಡಿಯುವುದಕ್ಕೆ ವಿರೋಧ

ಇದರ ಬೆನ್ನಲ್ಲೇ ಕೆಲವು ಕಡೆಗಳಲ್ಲಿ ಬೀದಿ ನಾಯಿಗಳನ್ನು ಸೆರೆ ಹಿಡಿಯಲಾಗುತ್ತಿದೆ. ಕೆಲವು ಪ್ರಾಣಿ ದಯಾ ಸಂಘಗಳು ಬೀದಿ ನಾಯಿಗಳಿಗೆ ಸಂತಾನವಾಗದೇ ಇರುವಂತೆ ಶಸ್ತ್ರ ಚಿಕಿತ್ಸೆ ನೀಡಲು ಶ್ರಮಿಸುತ್ತಿದ್ದು, ಇವುಗಳ ಹಾವಳಿ ಹೆಚ್ಚಾಗಿರುವ ಪ್ರದೇಶಗಳಲ್ಲಿ ನಾಯಿಗಳನ್ನು ಸೆರೆ ಹಿಡಿಯುತ್ತಿರುವುದಕ್ಕೆ ಅವರು ವಿರೋಧವನ್ನೂ ವ್ಯಕ್ತಪಡಿಸುತ್ತಿದ್ದಾರೆ. ಬೆಂಗಳೂರಿನ ಕಗ್ಗದಾಸಪುರದಲ್ಲಿರುವ ಡಿಆರ್‌ಡಿಒ ಸಂಕೀರ್ಣದಲ್ಲಿ ನಾಯಿಗಳನ್ನು ಅಮಾನವೀಯವಾಗಿ ಸೆರೆ ಹಿಡಿಯಲಾಗುತ್ತಿದೆ ಎಂದು ಇದಾಗಲೇ ಬೃಹತ್​ ಮಟ್ಟದ ಪ್ರತಿಭಟನೆ ನಡೆಯುತ್ತಿದೆ.

36
ಕಣ್ಣೀರಿಟ್ಟ ನಟಿ ರಮ್ಯಾ

ಈ ಸಂದರ್ಭದಲ್ಲಿ ಸ್ಯಾಂಡಲ್​ವುಡ್​ ನಟಿ, ಮೋಹಕ ತಾರೆರ ರಮ್ಯಾ (Mohaka Tare Ramya) ಭಾಗವಿಸಿದ್ದು, ಬೀದಿ ನಾಯಿಗಳಿಗಾಗಿ ಕಣ್ಣೀರು ಹಾಕಿದ್ದಾರೆ. ಶ್ವಾನಗಳ ಮೇಲೆ ನಡೆದ ದೌರ್ಜನ್ಯದ ದೃಶ್ಯಗಳನ್ನು ಕಂಡು ಭಾವುಕರಾಗಿರುವ ನಟಿ, ನಾಯಿಗಳಿಗೆ ಏನಾಗಿರಬಹುದು ಎಂಬುದನ್ನು ಕಲ್ಪಿಸಿಕೊಂಡರೆ ನೋವಾಗುತ್ತದೆ. ಈ ರೀತಿ ಆಗಿದೆ ಎಂಬುದು ಗೊತ್ತಾಗಾದ ನನಗೆ ಆಘಾತ ಆಯಿತು ಎಂದು ಗಳಗಳನೆ ಅತ್ತಿದ್ದಾರೆ. ಸಂಸ್ಥೆಯೊಂದು ಇಷ್ಟು ಬೇಜವಾಬ್ದಾರಿಯಾಗಿ ನಡೆದುಕೊಂಡಿರುವುದು ಸರಿಯಲ್ಲ ಎಂದು ಅವರು ಅಸಮಾಧಾನ ಹೊರ ಹಾಕಿದ್ದಾರೆ. ನಾಪತ್ತೆಯಾಗಿರುವ ನಾಯಿಗಳು ಸುರಕ್ಷಿತವಾಗಿದ್ದರೆ ನಮಗೆ ತೋರಿಸಿ, ಇಲ್ಲದಿದ್ದರೆ ಈ ಕೃತ್ಯಕ್ಕೆ ಕಾರಣರಾದವರನ್ನು ಶಿಕ್ಷಿಸಿ’ ಎಂದು ನಟಿ ಆಗ್ರಹಿಸಿದ್ದಾರೆ.

46
ನಟಿಯ ಪ್ರಾಣಿ ಪ್ರೀತಿ

ರಮ್ಯಾ ಅವರು ಪ್ರಾಣಿಗಳ ಬಗ್ಗೆ ಕಾಳಜಿ ಹೊಂದಿದ್ದಾರೆ. ಅವರು ನಾಯಿಗಳ ರಕ್ಷಣೆ ಬಗ್ಗೆ ಧ್ವನಿ ಎತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಅವರು ಇಂಥ ಘಟನೆಗಳು ನಡೆದಾಗಿ ಮಾಧ್ಯಮಗಳ ಎದುರು ಬಂದು ಮಾತನಾಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಕೂಡ ಅವರು ಇಂಥ ಕೃತ್ಯಗಳನ್ನು ಖಂಡಿಸಿದ್ದಾರೆ.

56
ಪ್ರತಿಭಟನಾಕಾರರ ಆಕ್ರೋಶ

ಸಿ.ವಿ.ರಾಮನ್ ನಗರ ಅನಿಮಲ್ ಸ್ಕ್ವಾಡ್ ನೇತೃತ್ವದಲ್ಲಿ ಈ ಹೋರಾಟ ನಡೆದಿತ್ತು. ಇದರಲ್ಲಿ ಪ್ರಾಣಿ ಕಲ್ಯಾಣ ಸಂಸ್ಥೆಗಳು, ಕಾನೂನು ತಜ್ಞರು ಮತ್ತು ಸ್ವಯಂಸೇವಕರು ಪಾಲ್ಗೊಂಡಿದ್ದರು. ನಾಪತ್ತೆಯಾಗಿರುವ ನಾಯಿಗಳ ಬಗ್ಗೆ ಮಾಹಿತಿ ನೀಡಬೇಕೆಂದು ಆಗ್ರಹಿಸಿದರು. ನಾಯಿಗಳನ್ನು ಚೀಲದಲ್ಲಿ ಕಟ್ಟಿ ಸಾಗಿಸಿರುವುದು ಘೋರ ಉಲ್ಲಂಘನೆ. ಸಾರ್ವಜನಿಕ ಸ್ಥಳಗಳಿಂದ ನಾಯಿಗಳನ್ನು ತೆರವುಗೊಳಿಸುವ ಬಗ್ಗೆ ಇರುವ ಸುಪ್ರೀಂಕೋರ್ಟ್‌ನ ಕೆಲವು ಹಳೆಯ ಆದೇಶಗಳನ್ನು ಸಂಸ್ಥೆಗಳು ತಪ್ಪಾಗಿ ಅರ್ಥೈಸಿಕೊಳ್ಳುತ್ತಿವೆ. ಅಮಾನವೀಯವಾಗಿ ಸಾಗಿಸುವುದಕ್ಕೆ ಯಾವುದೇ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಪ್ರತಿಭಟನಾಕಾರರು ಹೇಳುತ್ತಿದ್ದಾರೆ.

66
ಸಂತಾನಶಕ್ತಿ ಹರಣ ಚಿಕಿತ್ಸೆ

ಬೆಂಗಳೂರಿನಲ್ಲಿ 60ಕ್ಕೂ ಹೆಚ್ಚು ಸ್ವಯಂಸೇವಕ ತಂಡಗಳು ಕಳೆದ ಒಂದು ದಶಕದಿಂದ ಬೀದಿ ನಾಯಿಗಳಿಗೆ ಲಸಿಕೆ ಮತ್ತು ಸಂತಾನಶಕ್ತಿ ಹರಣ ಚಿಕಿತ್ಸೆ ನೀಡಲು ಶ್ರಮಿಸುತ್ತಿವೆ. ಹೀಗಿರುವಾಗ ಸಂಸ್ಥೆಗಳು ಕಾನೂನು ಮೀರಿ ವರ್ತಿಸಿದರೆ ನಾವು ಸುಮ್ಮನಿರುವುದಿಲ್ಲ ಎಂದು ಪ್ರಾಣಿ ಕಲ್ಯಾಣ ಹೋರಾಟಗಾರ್ತಿ ಪ್ರಿಯಾ ಚೆಟ್ಟಿ ರಾಜಗೋಪಾಲ್ ಎಚ್ಚರಿಸಿದ್ದಾರೆ.

Read more Photos on
click me!

Recommended Stories