26ರ ಲೇಡಿ, 52ರ ಅಂಕಲ್ ಲವ್ ಸ್ಟೋರಿ; ಹೊಸ ಗೆಳೆಯನ ಹಿಂದೆ ಹೋಗಿದ್ದಕ್ಕೆ ಬೆಂಕಿ ಇಟ್ಟ!

Published : Sep 01, 2025, 11:20 AM IST

ಬೆಂಗಳೂರಿನಲ್ಲಿ 26 ವರ್ಷದ ವನಜಾಕ್ಷಿ ಎಂಬ ಯುವತಿಯನ್ನು 52 ವರ್ಷದ ವಿಠಲ್ ಎಂಬಾತ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ. ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದ ಇಬ್ಬರ ನಡುವೆ ಮನಸ್ತಾಪ ಉಂಟಾಗಿ ಈ ಘಟನೆ ನಡೆದಿದೆ.

PREV
15
26ರ ಲೇಡಿ, 52ರ ಅಂಕಲ್ ಲವ್ ಸ್ಟೋರಿ

ಪ್ರೇಯಸಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊ*ಲೆ ಮಾಡಿರುವ ಘಟನೆ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 26 ವರ್ಷದ ವನಜಾಕ್ಷಿ ಕೊ*ಲೆಯಾದ ಮಹಿಳೆ. ಗಂಡನ ನಿಧನದ ಬಳಿಕ 26 ವರ್ಷದ ವನಜಾಕ್ಷಿ, ಕ್ಯಾಬ್ ಚಾಲಕನಾಗಿದ್ದ 52 ವರ್ಷದ ವಿಠಲ್ ಜೊತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು.

25
ಆಕೆ ಗಂಡನಿಲ್ಲ, ಈತನಿಗೆ ಹೆಂಡ್ತಿ ಇರಲಿಲ್ಲ

ವನಜಾಕ್ಷಿ ಮತ್ತು ವಿಠಲ್ ಇಬ್ಬರು ನೇಕಲ್ ಬಳಿಯ ಮಳೆನಲ್ಲಸಂದ್ರದ ಗ್ರಾಮದ ನಿವಾಸಿಗಳು ಎಂದು ತಿಳಿದು ಬಂದಿದೆ. ಈ ವಿಠಲ್‌ಗೆ ಎರಡು ಮದುವೆಯಾಗಿದ್ದು, ಮೊದಲ ಪತ್ನಿ ನಿಧನವಾಗಿದ್ದಾರೆ. ಎರಡನೇ ಪತ್ನಿ ವಿಠಲ್‌ನಿಂದ ದೂರವಾಗಿ ಬೇರೆಯೊಬ್ಬನ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದಾರೆ.

35
ಹೊಸ ಗೆಳೆಯ ಸಿಗ್ತಿದ್ದಂತೆ ವಿಠಲ್‌ನಿಂದ ಡಿಸ್ಟೇನ್ಸ್ ಮೇಂಟೈನ್

ಗಂಡನಿಲ್ಲದ ವನಜಾಕ್ಷಿಗೂ ಮತ್ತು ಹೆಂಡತಿ ಇಲ್ಲದ ವಿಠಲ್‌ಗೂ ಪರಿಚಯವಾಗಿದೆ. ಹಾಗಾಗಿ ವನಜಾಕ್ಷಿ ಮತ್ತು ವಿಠಲ್ ಜೊತೆಯಾಗಿರಲು ಆರಂಭಿಸಿದ್ದರು. ಇಬ್ಬರು ಹೆಂಡತಿಯರ ನಂತರ ವಿಠ್ಠಲ ತನಗಿಂತ 26 ವರ್ಷ ಚಿಕ್ಕವಳಾದ ವನಜಾಕ್ಷಿಯ ಸಾಂಗತ್ಯ ಬೆಳೆಸಿದ್ದನು. ಮೂರ್ನಾಲ್ಕು ವರ್ಷ ವನಜಾಕ್ಷಿ ಮತ್ತು ವಿಠಲ್ ನಡುವೆ ಎಲ್ಲವೂ ಚೆನ್ನಾಗಿತ್ತು. ಆದ್ರೆ ಇತ್ತೀಚೆಗೆ ವಿಠಲ್‌ ನಿಂದ ವನಜಾಕ್ಷಿ ಅಂತರ ಕಾಯ್ದುಕೊಳ್ಳಲು ಆರಂಭಿಸಿದ್ದಳು.

45
ಪೆಟ್ರೋಲ್ ಸುರಿದು ಬೆಂಕಿಯಿಟ್ಟ ಅಂಕಲ್

ವಿಠಲ್‌ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದ ವನಜಾಕ್ಷಿ ಅದೇ ಗ್ರಾಮದ ಮತ್ತೋರ್ವನೊಂದಿಗೆ ಸಲುಗೆ ಬೆಳೆಸಿಕೊಂಡಿದ್ದಳು. ಶನಿವಾರ ಗೆಳೆಯನೊಂದಿಗೆ ವನಜಾಕ್ಷಿ ಸ್ಯಾಂಟ್ರೋ ಕಾರ್‌ನಲ್ಲಿ ಬನ್ನೇರುಘಟ್ಟದಿಂದ ಬಸವನಪುರಕ್ಕೆ ಹೋಗುತ್ತಿರೋದನ್ನು ವಿಠಲ್ ನೋಡಿದ್ದಾನೆ. ಕೂಡಲೇ ವಿಠಲ್ ಅವರಿಬ್ಬರಿದ್ದ ಕಾರ್ ಹಿಂಬಾಲಿಸಿದ್ದಾನೆ. ಹುಳಿಮಾವು ಠಾಣೆ ವ್ಯಾಪ್ತಿಯ ಹೊಮ್ಮದೇವನಹಳ್ಳಿ ಬಳಿ ಕಾರ್ ನಿಲ್ಲಿಸಿ, ವನಜಾಕ್ಷಿ ಜೊತೆ ಜಗಳವಾ

55
ಚಿಕಿತ್ಸೆ ಫಲಕಾರಿಯಾಗದೇ ವನಜಾಕ್ಷಿ ಸಾವು

ಈ ವೇಳೆ ವನಜಾಕ್ಷಿ ಮೇಲೆ ಪೆಟ್ರೋಲ್ ಸುರಿದು ಲೈಟರ್‌ನಿಂದ ಬೆಂಕಿ ಹೆಚ್ಚಿದ್ದಾನೆ. ಶೇ.60ರಷ್ಟು ಸುಟ್ಟಗಾಯಗಳಿಂದ ಗಾಯಗೊಂಡಿದ್ದ ವನಜಾಕ್ಷಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ವನಜಾಕ್ಷಿ ಸಾವನ್ನಪ್ಪಿದ್ದಾಳೆ. ಘಟನೆ ಸಂಬಂಧ ಹುಳಿಮಾವು ಪೊಲೀಸ್ ಠಾಣೆಯಲ್ಲಿ ಕೊ*ಲೆ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿ ವಿಠಲ್‌ನನ್ನು ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

Read more Photos on
click me!

Recommended Stories