ಬೆಂಗಳೂರಿನ ಕೆ.ಆರ್. ಸರ್ಕಲ್ ಅಂಡರ್‌ಪಾಸ್‌ನಲ್ಲಿ ಮಳೆ ನೀರು ನಿಲ್ಲುವ ದೀರ್ಘಕಾಲದ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಪಾಲಿಕೆ ಮುಂದಾಗಿದೆ. ಅಂಡರ್‌ಪಾಸ್‌ನಿಂದ ಬೃಹತ್ ನೀರುಗಾಲುವೆಗೆ 900 ಮಿ.ಮೀ ಪೈಪ್‌ಲೈನ್ ಅಳವಡಿಸುವ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಬೆಂಗಳೂರು ನಗರದ ಕೆ.ಆರ್. ಸರ್ಕಲ್ ಅಂಡರ್‌ಪಾಸ್‌ನಲ್ಲಿ ಮಳೆ ನೀರು ನಿಲ್ಲುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನೀರುಗಾಲುವೆ ಯೋಜನೆಗೆ ಕೊನೆಗೂ ಚಾಲನೆ ಸಿಕ್ಕಿದೆ. ಅಂಡರ್‌ಪಾಸ್‌ನಲ್ಲಿ ಶೇಖರಣೆಯಾಗುವ ನೀರು ಅಲ್ಲಿಂದ ಸುಲಭವಾಗಿ ಹರಿದು ಹೋಗಲು ಅನುಕೂಲವಾಗುವಂತೆ 900 ಮಿ.ಮೀ ಗಾತ್ರದ ಬೃಹತ್ ಪೈಪ್‌ಲೈನ್ ಸಂಪರ್ಕಗೊಳಿಸುವ ಕಾಮಗಾರಿಗೆ ಕೇಂದ್ರ ನಗರ ಪಾಲಿಕೆಯಿಂದ ಚಾಲನೆ ನೀಡಲಾಗಿದೆ.
24
ನೀರುಗಾಲುವೆಗೆ ಪೈಪ್‌ಲೈನ್ ಮೂಲಕ ಸಂಪರ್ಕ
ಅಂಡರ್‌ಪಾಸ್‌ನಿಂದ ಸಮೀಪದ ಬೃಹತ್ ನೀರುಗಾಲುವೆಗೆ ಪೈಪ್‌ಲೈನ್ ಮೂಲಕ ಸಂಪರ್ಕ ಕಲ್ಪಿಸಲಾಗುತ್ತದೆ. ಈ ಕಾಮಗಾರಿಯಿಂದ ಮಳೆಗಾಲದಲ್ಲಿ ನೀರಿನ ಹರಿವು ಸುಗಮಗೊಂಡು, ನೀರು ನಿಲ್ಲುವಿಕೆ ಕಡಿಮೆಯಾಗುವುದರೊಂದಿಗೆ ಸಾರ್ವಜನಿಕರಿಗೆ ಉತ್ತಮ ಮೂಲಸೌಕರ್ಯ ಒದಗಿಸಲು ಸಹಕಾರಿಯಾಗಲಿದೆ. ನೀರು ನಿಲ್ಲುವಿಕೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಪಾಲಿಕೆ ಹೇಳಿದೆ.
34
23 ವರ್ಷದ ಸಾಫ್ಟ್‌ವೇರ್ ಉದ್ಯೋಗಿಯ ಸಾವು
ಸಣ್ಣ ಮಳೆಗೂ ಈ ಅಂಡರ್‌ಪಾಸ್‌ನಲ್ಲಿ ನೀರು ನಿಲ್ಲುತ್ತದೆ. ಪರಿಣಾಮ ವಿಧಾನಸೌಧ ಕಡೆಯಿಂದ ನೃಪತುಂಗ ರಸ್ತೆಯ ಕಡೆ ಸಿಗ್ನಲ್‌ರಹಿತವಾಗಿ ವಾಹನಗಳ ಸಂಚಾರಕ್ಕೆ ತೊಡಕು ಉಂಟಾಗುತ್ತಿತ್ತು. 21ನೇ ಮೇ 2023ರಂದು ಕಾರೊಂದು ಮಳೆ ನೀರಿನಲ್ಲಿ ಸಿಲುಕಿ 23 ವರ್ಷದ ಸಾಫ್ಟ್‌ವೇರ್ ಉದ್ಯೋಗಿ ಮೃತಪಟ್ಟಿದರು. ಪ್ರತಿ ಸಲ ಮಳೆ ಬಂದು ನೀರು ನಿಂತಾಗ ಸಂಚಾರ ಪೊಲೀಸರು ಅಂಡರ್‌ಪಾಸ್ ಅನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡುವ ಮೂಲಕ ವಾಹನ ಸಂಚಾರವನ್ನು ಸ್ಥಗಿತಗೊಳಿಸುತ್ತಾರೆ.
ಈ ಅಂಡರ್‌ಪಾಸ್ ಬಂದ್ ಆಗೋದರಿಂದ ಕೆಆರ್ ಸರ್ಕಲ್ ಭಾಗದಲ್ಲಿ ದೊಡ್ಡಮಟ್ಟದ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ವಿಧಾನಸೌಧದಿಂದ ಕಾರ್ಪೋರೇಷನ್ ಮಾರ್ಗವಾಗಿ ಚಲಿಸಲು ಅಂಡರ್‌ಪಾಸ್ ನೆರವಾಗುತ್ತಿತ್ತು. ಪ್ರತಿಬಾರಿ ಮಳೆ ಬಂದಾಗಲೂ ಅಂಡರ್‌ಪಾಸ್ ಕ್ಲೋಸ್ ಮಾಡಲಾಗುತ್ತಿತ್ತು.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಶಿವಾಜಿನಗರ ವಿಭಾಗದ ಕೆ.ಆರ್. ಸರ್ಕಲ್ ಅಂಡರ್‌ಪಾಸ್‌ನಿಂದ ಬೃಹತ್ ನೀರುಗಾಲುವೆ (SWD) ಸಂಪರ್ಕದವರೆಗೆ ಮಳೆನೀರು ಸರಾಗವಾಗಿ ಹರಿದು ನೀರು ನಿಲ್ಲುವಿಕೆ ಸಮಸ್ಯೆಯನ್ನು ತಡೆಗಟ್ಟುವ… pic.twitter.com/9SKCcxsuTK
— Greater Bengaluru Authority (@GBA_office) June 2, 2026