ದೀಪಾವಳಿ ಪಟಾಕಿ ಕಿಡಿ ಸಿಡಿದಿದ್ದಕ್ಕೆ ಮಚ್ಚು-ಲಾಂಗು ಹಿಡಿದು ಇಡೀ ಏರಿಯಾಗೆ ಬೆದರಿಸಿದ ಅನ್ಯಕೋಮಿನ ಪುಂಡರು!

Published : Oct 20, 2025, 10:05 PM IST

ಬೆಂಗಳೂರಿನ ಹೆಣ್ಣೂರಿನಲ್ಲಿ ದೀಪಾವಳಿ ಪಟಾಕಿ ಕಿಡಿ ಸಿಡಿದಿದ್ದಕ್ಕೆ ಶುರುವಾದ ಸಣ್ಣ ಜಗಳವು, ಐವರ ಗುಂಪೊಂದು ಮಚ್ಚು-ಲಾಂಗುಗಳಿಂದ ಬಡಾವಣೆಯ ನಿವಾಸಿಗಳಿಗೆ ಪ್ರಾಣ ಬೆದರಿಕೆ ಹಾಕುವಷ್ಟರ ಮಟ್ಟಿಗೆ ಉಲ್ಬಣಗೊಂಡಿದೆ. ಈ ದಾಂಧಲೆಯಿಂದ ಬೆಚ್ಚಿಬಿದ್ದ ಸ್ಥಳೀಯರು, ಮೂವರು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

PREV
16
ದೀಪಾವಳಿ ಪಟಾಕಿ ಕಿಡಿ ಸಿಡಿದಿದ್ದಕ್ಕೆ ರೌಡಿಸಂ

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಮನೆಯ ಮುಂದೆ ಪಟಾಕಿ ಹೊಡೆಯುತ್ತಿದ್ದ ವೇಳೆ ಸಣ್ಣ ಕಿಡಿಯೊಂದು ಸಿಡಿದಿದ್ದಕ್ಕೆ ಅನ್ಯಕೋಮಿನ ಐವರು ಸೇರಿಕೊಂಡು ಮಚ್ಚು-ಲಾಂಗು ಹಿಡಿದ ಇಡೀ ಏರಿಯಾದಲ್ಲಿನ ಎಲ್ಲ ಜನರಿಗೆ ಪ್ರಾಣ ಬೆದರಿಕೆ ಹಾಕಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನ ಹೆಣ್ಣೂರಿನಲ್ಲಿ ನಡೆದಿದೆ.

26
ಬೆಚ್ಚಿಬಿದ್ದ ಹೆಣ್ಣೂರು ಬಡಾವಣೆಯ ನಿವಾಸಿಗಳು

ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಧ್ಯರಾತ್ರಿ ಪುಡಿ ರೌಡಿಗಳ ಗುಂಪೊಂದು ಮಾರಕಾಸ್ತ್ರಗಳನ್ನು ಹಿಡಿದು ದಾಂಧಲೆ ನಡೆಸಿ, ಸಾರ್ವಜನಿಕರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ. ಈ ಅಟ್ಟಹಾಸದಿಂದ ಹೆಣ್ಣೂರು ಬಡಾವಣೆಯ ನಿವಾಸಿಗಳು ಬೆಚ್ಚಿಬಿದ್ದಿದ್ದು, ಸ್ಥಳೀಯರ ಧೈರ್ಯದಿಂದ ಮೂವರು ಆರೋಪಿಗಳನ್ನು ಪೊಲೀಸರಿಗೆ ಒಪ್ಪಿಸಲಾಗಿದೆ. ಘಟನೆ ತಡರಾತ್ರಿ ಸುಮಾರು 10 ಗಂಟೆ ಸುಮಾರಿಗೆ ಹೆಣ್ಣೂರು ಬಡಾವಣೆಯ ದೊಡ್ಡೆರಾಮಣ್ಣ ಬಡಾವಣೆ ಬಳಿ ನಡೆದಿದೆ. ಸರ್ವಜ್ಞನಗರ ನಿವಾಸಿಗಳೆನ್ನಲಾದ ಐವರು ಯುವಕರು ಈ ಕೃತ್ಯದಲ್ಲಿ ಭಾಗಿಯಾಗಿದ್ದರು.

36
ಪಟಾಕಿ ಕಿಡಿಯಿಂದ ಶುರುವಾದ ಗಲಾಟೆ

ಈ ದಾಂಧಲೆಗೆ ಕಾರಣವಾದ ಸಣ್ಣ ವಿಷಯವು ಪಟಾಕಿ ಹೊಡೆಯುವ ವಿಚಾರವಾಗಿದೆ. ಆರೋಪಿಗಳಲ್ಲಿ ಒಬ್ಬನಾದ ಅಮೀನ್ ಷರೀಫ್ ರಾತ್ರಿ 10 ಗಂಟೆ ಸುಮಾರಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ, ಸ್ಥಳೀಯರು ಹೊಡೆಯುತ್ತಿದ್ದ ಪಟಾಕಿಯ ಸಣ್ಣ ಕಿಡಿಯೊಂದು ಷರೀಫ್‌ಗೆ ತಾಗಿತ್ತು ಎನ್ನಲಾಗಿದೆ. ಇದರಿಂದಾಗಿ ಅದೇ ಸ್ಥಳದಲ್ಲಿ ಷರೀಫ್ ಮತ್ತು ಸ್ಥಳೀಯರ ನಡುವೆ ಮಾತಿನ ಚಕಮಕಿ ಶುರುವಾಯಿತು.

46
ಮಚ್ಚು ಲಾಂಗ್ ಸಮೇತ ಗ್ಯಾಂಗ್ ಕರ್ಕೊಂಡು ಬಂದ:

ಸಣ್ಣ ಗಲಾಟೆ ನಡೆದ ಕೆಲವೇ ನಿಮಿಷಗಳಲ್ಲಿ ಷರೀಫ್ ತನ್ನ ಸಹಚರರನ್ನು ಮತ್ತು ಸಂಬಂಧಿಕರನ್ನು ಕರೆದುಕೊಂಡು ಮಾರಕಾಸ್ತ್ರಗಳಾದ ಲಾಂಗು ಮತ್ತು ಮಚ್ಚುಗಳೊಂದಿಗೆ ವಾಪಸ್ ಬಂದಿದ್ದಾರೆ. ಬಂದ ಕೂಡಲೇ ಸಾರ್ವಜನಿಕರ ಮೇಲೆ ಹಲ್ಲೆ ನಡೆಸಿ, ಕೆಲವರಿಗೆ ಹೆದರಿಸಿ-ಬೆದರಿಸಿದ್ದಾರೆ. ಮಾರಕಾಸ್ತ್ರಗಳೊಂದಿಗೆ ರಸ್ತೆಯಲ್ಲಿ ಪುಂಡರು ದಾಂಧಲೆ ನಡೆಸುತ್ತಿದ್ದ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದಿದ್ದಾರೆ.

56
ಮೂವರು ಪುಡಿ ರೌಡಿಗಳ ಬಂಧನ:

ಪುಡಿ ರೌಡಿಗಳ ಈ ಕೃತ್ಯದಿಂದ ಹೆದರದ ಸ್ಥಳೀಯ ಯುವಕರು ಒಂದಾಗಿ, ದಾಂಧಲೆ ನಡೆಸುತ್ತಿದ್ದ ಆರೋಪಿಗಳನ್ನು ಹಿಡಿದಿದ್ದಾರೆ. ಬಳಿಕ ಈ ಮೂವರು ಆರೋಪಿಗಳನ್ನು ಹೆಣ್ಣೂರು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತ ಆರೋಪಿಗಳನ್ನು ಅಮೀನ್ ಷರೀಫ್, ಸೈಯದ್ ಅರ್ಬಾಸ್ ಮತ್ತು ಶೀದ್ ಖಾದರ್ ಎಂದು ಗುರುತಿಸಲಾಗಿದೆ. ಇನ್ನುಳಿದ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.

66
ಹವಾ ಮೆಂಟೇನ್ ಮಾಡಲು ಕೃತ್ಯ:

ಕಿರಣ್ ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ವೇಳೆ, ಆರೋಪಿಗಳು ಏರಿಯಾದಲ್ಲಿ ತಮ್ಮ 'ಹವಾ ಮೇಂಟೇನ್' ಮಾಡಲು ಈ ಕೃತ್ಯವನ್ನು ಎಸಗಿದ್ದಾರೆ ಎಂಬುದು ತಿಳಿದುಬಂದಿದೆ. ಪೊಲೀಸರು ಆರೋಪಿಗಳ ವಿರುದ್ಧ ಆರ್ಮ್ಸ್ ಆ್ಯಕ್ಟ್ (Arms Act) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Read more Photos on
click me!

Recommended Stories