Bengaluru: ಕುರಿ ಮಟನ್ ಬದಲಾಗಿ ದನದ ಮಾಂಸ ನೀಡ್ತಿದ್ದ ರೆಸ್ಟೋರೆಂಟ್‌ಗೆ ಬೀಗ; ಇಬ್ಬರ ಬಂಧನ

Published : May 30, 2026, 09:04 AM IST

ಬೆಂಗಳೂರಿನ ಬೂದಿಗೆರೆ ಕ್ರಾಸ್‌ನಲ್ಲಿರುವ ಕಾಯಲೋರಂ ರೆಸ್ಟೋರೆಂಟ್‌ನಲ್ಲಿ ಮಟನ್ ಎಂದು ನಂಬಿಸಿ ಗ್ರಾಹಕರಿಗೆ ದನದ ಮಾಂಸವನ್ನು ನೀಡಲಾಗುತ್ತಿತ್ತು. ಅನುಮಾನಗೊಂಡ ಯುವಕರು ಪೊಲೀಸರಿಗೆ ಮಾಹಿತಿ ನೀಡಿದಾಗ ಈ ವಂಚನೆ ಬಯಲಾಗಿದ್ದು, ಪೊಲೀಸರು ಇಬ್ಬರನ್ನು ಬಂಧಿಸಿ ರೆಸ್ಟೋರೆಂಟ್‌ಗೆ ಬೀಗ ಹಾಕಿದ್ದಾರೆ.

PREV
14
ಮಾಂಸಾಹಾರ ಸೇವನೆ

ಸಿಕ್ಕ ಸಿಕ್ಕ ಜಾಗದಲ್ಲಿ ಅಥವಾ ನಂಬಿಕೆಗೆ ಅರ್ಹವಲ್ಲದ ಹೋಟೆಲ್‌ಗಳಲ್ಲಿ ಮಾಂಸಾಹಾರ ಸೇವನೆ ಮಾಡುವ ಜನರು ಎಚ್ಚರಿಕೆಯಿಂದಿರಬೇಕಾಗುತ್ತದೆ. ಮಟನ್ ಹೆಸರಿನಲ್ಲಿ ಗ್ರಾಹಕರಿಗೆ ದನದ ಮಾಂಸ ನೀಡುತ್ತಿದ್ದ ಬೆಂಗಳೂರಿನ ರೆಸ್ಟೋರೆಂಟ್‌ಗೆ ಬೀಗ ಹಾಕಲಾಗಿದೆ.

24
ಕಾಯಲೋರಂ ರೆಸ್ಟೊರೆಂಟ್ ವಿರುದ್ಧ ಗಂಭೀರ ಆರೋಪ

ಬೆಂಗಳೂರಿನ ಬೂದಿಗೆರೆ ಕ್ರಾಸ್ ಬೊಮ್ಮೇನಹಳ್ಳಿಯ ಐಸಿರಿ ಹಬ್ ನಲ್ಲಿರುವ ಕಾಯಲೋರಂ ರೆಸ್ಟೊರೆಂಟ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಈ ಸಂಬಂಧ ಆವಲಹಳ್ಳಿ ಠಾಣೆಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಜೀಜು ಮತ್ತು ಶಿಬು ಎಂದು ಗುರುತಿಸಲಾಗಿದೆ. ಕಳೆದ ಒಂದೂವರೆ ವರ್ಷದಿಂದ ಕಾಯಲೋರಂ ಹೆಸರಿನಲ್ಲಿ ಈ ರೆಸ್ಟೋರೆಂಟ್ ನಡೆಸಲಾಗುತ್ತಿದೆ.

34
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಕೆಲವು ದಿನಗಳ ಹಿಂದೆ ಯುವಕರು ಕಾಯಲೋರಂ ರೆಸ್ಟೋರೆಂಟ್‌ಗೆ ಊಟಕ್ಕೆ ಬಂದು ಮಟನ್ ಮೀಲ್ಸ್ ಆರ್ಡರ್ ಮಾಡಿದ್ದಾರೆ. ಈ ವೇಳೆ ರೆಸ್ಟೋರೆಂಟ್ ಸಿಬ್ಬಂದಿ, ಮಟನ್ ಬದಲಿಗೆ ದನದ ಮಾಂಸವನ್ನು ನೀಡಿದ್ದಾರೆ. ಅನುಮಾನಗೊಂಡ ಯುವಕರು ಸಿಬ್ಬಂದಿಯನ್ನು ಪ್ರಶ್ನೆ ಮಾಡಿದ್ದಾರೆ. ಕೂಡಲೇ ಆವಲಹಳ್ಳಿ ಪೊಲೀಸರಿಗೂ ಸಹ ಈ ಮಾಹಿತಿಯನ್ನು ನೀಡಿದ್ದಾರೆ. (ಸಾಂದರ್ಭಿಕ ಚಿತ್ರ)

44
ಬಂಧಿತರ ವಿಚಾರಣೆ, ತನಿಖೆ ಮುಂದುವರಿಕೆ

ವಿಷಯ ತಿಳಿದು ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದಾಗ ದನದ ಮಾಂಸ ನೀಡಿರೋದು ಪತ್ತೆಯಾಗಿದೆ. ಆರೋಪಿಗಳನ್ನು ಬಂಧಿಸಿರುವ ಪೊಲೀಸರು ರೆಸ್ಟೋರೆಂಟ್‌ನನ್ನು ಬಂದ್ ಮಾಡಿದ್ದಾರೆ. ಈ ಸಂಬಂಧ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಸಾಂದರ್ಭಿಕ ಚಿತ್ರ)

Read more Photos on
click me!

Recommended Stories