ಬೆಳಗಾವಿಯಲ್ಲಿ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಯುವಕ, ಮದುವೆಯಾಗುವುದಾಗಿ ನಂಬಿಸಿ ಯುವತಿಯ ಮೇಲೆ ಅತ್ಯಾ*ಚಾರ ಎಸಗಿದ್ದಾನೆ. ನಂತರ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿ 1500 ಗ್ರಾಂ ಚಿನ್ನ ಹಾಗೂ 19 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾನೆ.
ಮದುವೆಯಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಮೋಸ ಮಾಡಿರುವ ಘಟನೆಯೊಂದು ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಮಾಧವಾ ಕಾಲೋನಿ ನಿವಾಸಿ ಈಶ್ವರಸಿಂಗ್ ಪ್ರೇಮಸಿಂಗ್ ಬಡಗೂಜರ್ ಎಂಬಾತನ ವಿರುದ್ಧ ಯುವತಿಯೊಬ್ಬಳು ಗಂಭೀರವಾದ ಆರೋಪವೊಂದನ್ನು ಮಾಡಿದ್ದಾರೆ.
25
ಇನ್‌ಸ್ಟಾಗ್ರಾಂ ಪ್ರೀತಿ
ಈಶ್ವರ್ ಸಿಂಗ್ ಎಂಬಾತನಿಗೆ ಇನ್‌ಸ್ಟಾಗ್ರಾಂ ಮೂಲಕ ಯುವತಿಯ ಪರಿಚಯವಾಗಿತ್ತು. ಇಬ್ಬರ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಪ್ರೇಯಸಿ ಮೇಲೆ ಈಶ್ವರ್ ಸಿಂಗ್ ನಿರಂತರ ಅತ್ಯಾ*ಚಾರ ಮಾಡಿರುವ ಆರೋಪ ಕೇಳಿ ಬಂದಿದೆ.
35
ಬ್ಲ್ಯಾಕ್‌ಮೇಲ್
ಯುವತಿಯ ಖಾಸಗಿ ಫೋಟೋ ಮತ್ತು ವಿಡಿಯೋಗಳನ್ನಿಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿರುವ ಈಶ್ವರ್ ಸಿಂಗ್, ಸಂತ್ರಸ್ತೆಯಿಂದ 1500 ಗ್ರಾಂ ಚಿನ್ನಾಭರಣ, 19 ಲಕ್ಷ ರೂಪಾಯಿ ಪಡೆದುಕೊಂಡಿದ್ದಾನಂತೆ. ಯುವತಿ ಹೇಳಿಕೆ ಪ್ರಕಾರ, ತಾಯಿಯ ಚಿನ್ನ, ತಂದೆಯ ಎಫ್‌ಡಿ ಹಣ ನೀಡಿದ್ದು, ಆನ್‌ಲೈನ್ ಮೂಲಕವೂ ಈಶ್ವರ್ ಸಿಂಗ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾಳೆ.
ಈಗ ಮದುವೆಯಾಗು ಅಂದ್ರೆ 3 ಕೋಟಿ ರೂಪಾಯಿ ನೀಡಬೇಕೆಂದು ಈಶ್ವರ್ ಸಿಂಗ್ ತಾಯಿ ಡಿಮ್ಯಾಂಡ್ ಮಾಡ್ತಾರೆ. ಗೋಲ್ಡ್‌ಸ್ಮಿತ್ ಅಡಮಾನ ಹೆಸರಿನಲ್ಲಿಯೂ ನನ್ನಿಂದ ಹಣ ಲೂಟಿ ಮಾಡಿದ್ದಾನೆ. ಬೇರೆ ಹುಡುಗಿಯರ ಫೋಟೋ ಕಳುಹಿಸಿ ಟಾರ್ಚರ್ ಕೊಡ್ತಿದ್ದಾನೆ. ಪ್ರೀತಿಯ ಮುಖವಾಡದ ಹಿಂದೆ ಕ್ರೂರ ಮನಸ್ಥಿತಿಗೆ ಕಠಿಣ ಶಿಕ್ಷೆಯಾಗಲಿ ಎಂದು ಸಂತ್ರಸ್ತೆ ಆಗ್ರಹಿಸಿದ್ದಾರೆ.
ನ್ಯಾಯ ಕೇಳಲು ಹೋದ್ರೆ ಪೊಲೀಸರು ರಾಜಿ ಮಾಡಿಕೊಳ್ಳುವಂತೆ ಹೇಳುತ್ತಿದ್ದಾರೆ. ಶಹಾಪುರ ಠಾಣೆ ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿಲ್ಲ. ಈಶ್ವರ್ ಸಿಂಗ್ ಜೊತೆ ಪೊಲೀಸರು ಕೈ ಜೋಡಿಸಿದ್ದಾರೆ ಎಂದು ಆರೋಪಿಸಿರುವ ಯುವತಿ, ನ್ಯಾಯ ಕೊಡಿ ಎಂದು ಕಮೀಷನರ್ ಕಚೇರಿಯಲ್ಲಿ ಕಣ್ಣೀರು ಹಾಕಿದ್ದಾರೆ. ಕಮೀಷನರ್ ಸೂಚನೆ ಕೊಟ್ಟರೂ ಪ್ರಕರಣ ದಾಖಲಿಸಿಕೊಳ್ಳದ ಶಹಾಪುರ ಪೊಲೀಸರು ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಯುವತಿ ಆಗ್ರಹಿಸಿದ್ದಾರೆ.