ಬಾಗಲಕೋಟೆ ಜಿಲ್ಲೆಯ ಬುದ್ನಿ ಗ್ರಾಮದಲ್ಲಿ ಮಹಾದೇವಪ್ಪ ಕೊಲೂರ ಅವರ ಶಕ್ತಿಶಾಲಿ ಎತ್ತು ₹5,11,000ಕ್ಕೆ ಮಾರಾಟವಾಗಿದೆ. ಮಹಾರಾಷ್ಟ್ರದ ಪುಣೆಯ ವಿರಾಟ್ ಕಾಟೇದಾರ್ ಎಂಬುವವರು ಈ ಎತ್ತನ್ನು ಖರೀದಿಸಿದ್ದಾರೆ. ಎತ್ತಿನ ದಷ್ಟಪುಷ್ಟ ದೇಹ, ಎತ್ತರದ ನಿಲುವು ಮತ್ತು ಬಲಿಷ್ಠ ರೂಪವೇ ಈ ಬೆಲೆಯ ಹಿಂದಿನ ಕಾರಣ.
ಬಾಗಲಕೋಟೆ (ಜೂ. 8): ಎತ್ತು ಮಾರಾಟದ ವಿಷಯದಲ್ಲಿ ಈಗ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಬುದ್ನಿ ಗ್ರಾಮ ರಾಜ್ಯದಾದ್ಯಂತ ಗಮನ ಸೆಳೆದಿದೆ. ಇಲ್ಲಿನ ಮಹಾದೇವಪ್ಪ ಕೊಲೂರ ಎಂಬುವವರಿಗೆ ಸೇರಿದ ಒಂದು ಶಕ್ತಿಶಾಲಿ ಎತ್ತು ಬರೋಬ್ಬರಿ ₹5,11,000ಕ್ಕೆ ಮಾರಾಟವಾಗಿದೆ! ಇದು ಈವರೆಗೆ ಆ ಭಾಗದಲ್ಲಿ ದಾಖಲೆ ಬೆಲೆ ಎತ್ತಿಗೆ ಲಭಿಸಿದ ಅಪರೂಪದ ಸಂದರ್ಭವಾಗಿದೆ.
26
ಈ ಎತ್ತನ್ನು ಮಹಾರಾಷ್ಟ್ರದ ಪುಣೆಯಿಂದ ಬಂದಿರುವ ವಿರಾಟ್ ಕಾಟೇದಾರ್ ಎಂಬುವವರು ಖರೀದಿಸಿದ್ದಾರೆ. ಎತ್ತಿನ ದಷ್ಟಪುಷ್ಟ ದೇಹ, ಎತ್ತರದ ನಿಲುವು, ಕಟ್ಟುಮಸ್ತಾದ ಬಲಿಷ್ಠ ರೂಪವೇ ಈ ಬೆಲೆಯ ಹಿಂದಿನ ಪ್ರಮುಖ ಕಾರಣಗಳಾಗಿವೆ. ಈ ಎತ್ತು ರಾಜ್ಯದ ಹಲವು ತೆರೆಬಂಡಿ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಗೆದ್ದಿರುವ ಶಕ್ತಿಶಾಲಿ ಜಾನುವಾರು.
36
ಮೆರವಣಿಗೆಯೊಂದಿಗೆ ಬೀಳ್ಕೊಡುಗೆ:
ಮಾರಾಟದ ನಂತರ ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಎತ್ತಿಗೆ ಪೂಜೆ ಸಲ್ಲಿಸಿ, ಆರತಿ ಬೆಳಗಿಸಿ, ಗುಲಾಲ್ ಎರಚಿ ಹಾಗೂ ಪಟಾಕಿ ಸಿಡಿಸಿ ಮೆರವಣಿಗೆ ನಡೆಸಲಾಯಿತು. ಕುಟುಂಬಸ್ಥರು ಭಾರದ ಮನಸ್ಸಿನಿಂದಲೇ ಎತ್ತಿಗೆ ಬೀಳ್ಕೊಡುಗೆ ನೀಡಿದರು.
ಈ ಎತ್ತು ಮಾರಾಟದ ಸುದ್ದಿ ಈಗ ಬಾಗಲಕೋಟೆ ಮಾತ್ರವಲ್ಲ, ರಾಜ್ಯದ ಅನೇಕ ಗ್ರಾಮಾಂತರ ಪ್ರದೇಶಗಳಲ್ಲಿ ಜನರ ಚರ್ಚೆಯ ವಿಷಯವಾಗಿದೆ. ಗ್ರಾಮಸ್ಥರು ಮತ್ತು ಎತ್ತುಪ್ರೇಮಿಗಳು ಇದನ್ನು ಹೆಮ್ಮೆಪಡುವ ವಿಷಯವೆಂದು ಪರಿಗಣಿಸಿದ್ದಾರೆ.
56
ಏನಿದೆ ಈ ಎತ್ತಿನಲ್ಲಿ ವಿಶೇಷ?
ರಾಜ್ಯದ ವಿವಿಧ ಎತ್ತು ಸ್ಪರ್ಧೆಗಳಲ್ಲಿ ಬಹುಮಾನ ಗೆದ್ದಿದೆ
ನೋಡಲು ಶಕ್ತಿಶಾಲಿ, ಎತ್ತರದ ನಿಲುವು ಹೊಂದಿರುವ ಎತ್ತು.
ದೈನಂದಿನ ಕೃಷಿ ಕೆಲಸಕ್ಕೂ, ಕ್ರೀಡಾ ಸ್ಪರ್ಧೆಗಳಿಗೂ ಸಮರ್ಪಕ
ಗ್ರಾಮೀಣ ಜನಜೀವನದಲ್ಲಿ ಎತ್ತುಗಳನ್ನು ದೈವಿಕ ಸ್ವರೂಪ ಎಂದು ನಂಬುತ್ತಾರೆ
66
ಈ ರೀತಿಯ ಅಪರೂಪದ ಘಟನೆಯು ಕರ್ನಾಟಕದ ಗ್ರಾಮೀಣ ಬದುಕಿನಲ್ಲಿ ಎತ್ತುಗಳಿಗೆ ಎಷ್ಟೊಂದು ಮಹತ್ವವಿದೆ ಎಂಬುದನ್ನು ಮತ್ತೊಮ್ಮೆ ಎತ್ತಿ ತೋರಿಸುತ್ತದೆ.