ಹಾವು ಕಚ್ಚಿಸಿಕೊಂಡು ಸಾವು ಗೆದ್ದು ಬಂದ ಡ್ಯಾನಿಯಿಂದ ಮತ್ತೇ ಶುರುವಾಯ್ತು ಉರಗ ರಕ್ಷಣೆ‌

First Published Jul 24, 2020, 6:43 PM IST

ಹಾವು ಹಿಡಿಯುವುದು ಒಂದು ಕಲೆ. ಆ ಕಲೆ ಎಲ್ಲರಿಗೂ ಬರುವುದಿಲ್ಲ. ಹಾವು ಹಿಡಿಯುವ ಕಲೆಯನ್ನು ಕರಗತ ಮಾಡಿಕೊಂಡವರೂ ಅನೇಕ ಬಾರಿ ಎಡವುದಿದೆ. ಹಾವು ಹಿಡಿಯುವಾಗ ಸ್ವಲ್ಪ ಯಾಮಾರಿ ಜೀವವನ್ನೇ ಕಳೆದು ಕೊಂಡ ಅನೇಕ ಉದಾಹರಣೆಗಳಿವೆ. ಅಂದರಂತೆ ಹಾವು ಕಚ್ಚಿಸಿಕೊಂಡು ಸಾವು ಬದುಕಿನ ಮಧ್ಯೆ ಹೋರಾಡಿ ಕೊನೆಗೆ ಗೆದ್ದು ಬಂದ  ಉರಗತಜ್ಞ ಡ್ಯಾನಿಯಲ್ ನ್ಯೂಟನ್ ಅವರಿಂದ ಮತ್ತೆ ಹಾವುಗಳ ರಕ್ಷಣಾ ಕಾಯ೯  ಶುರುವಾಗಿದೆ.
 

ಹಾವು ಕಚ್ಚಿಸಿಕೊಂಡು ಸಾವು ಗೆದ್ದು ಬಂದ ಡ್ಯಾನಿಯಲ್ ನ್ಯೂಟನ್‌ರಿಂದ ಮತ್ತೇ ಶುರುವಾಯ್ತು ಉರಗ ರಕ್ಷಣೆ‌
undefined
ಹಾವು ಕಚ್ಚಿಸಿಕೊಂಡು ಚಿಕಿತ್ಸೆಯಿಂದ ಚೇತರಿಸಿಕೊಂಡ ಬೆನ್ನಲ್ಲೆ ಒಂದೇ ತಿಂಗಳಲ್ಲಿ ಮತ್ತೇ 40 ಹಾವುಗಳ ರಕ್ಷಣೆ.
undefined
ಕಳೆದ ತಿಂಗಳ ವಿಷಪೂರಿತ ಹಾವೊಂದು ಕಚ್ಚಿ ಅಸ್ವಸ್ಥನಾಗಿ ಖಾಸಗಿ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದ ಡ್ಯಾನಿ.
undefined
ಮುಚಖಂಡಿ ಕ್ರಾಸ್ ಬಳಿಯ ಜಯನಗರ ಬಡಾವಣೆಯಲ್ಲಿ ನಾಗರಹಾವು ಹಿಡಿಯುವ ವೇಳೆ ಅವರ ಎಡಗೈ ಬೆರಳಿಗೆ ನಾಗರ ಹಾವು ಕಚ್ಚಿತ್ತು.
undefined
ಇತ್ತ ಚಿಕಿತ್ಸೆ ಪಡೆದು ಹೊರ ಬರುತ್ತಲೇ ಮತ್ತೇ ಉರಗ ರಕ್ಷಣಾ ಕಾಯ೯ ಮುಂದುವರೆಸಿದ ಡ್ಯಾನಿ.
undefined
ಇಲ್ಲಿಯವರೆಗೆ 3000 ಕ್ಕೂ ಅಧಿಕ ಹಾವುಗಳನ್ನ ರಕ್ಷಿಸಿ ಕಾಡಿಗೆ ಬಿಟ್ಟಿರೋ ಡ್ಯಾನಿಯಲ್ ನ್ಯೂಟನ್
undefined
ಅವರು ಹಲವಾರು ವರುಷಗಳಿಂದ ಎಲ್ಲೇ ಹಾವು ಕಂಡರೂ ಹಿಡಿದು, ಅದನ್ನು ಕಾಡಿಗೆ ಬಿಡುವ ಕಾಯಕ ಮಾಡುತ್ತಿದ್ದಾರೆ.
undefined
ಉರಗ ರಕ್ಷಕ ಎಂದೇ ಖ್ಯಾತಿ ಪಡೆದ ಡ್ಯಾನಿಯಲ್ ನ್ಯೂಟನ್, ಕಳೆದ ಹಲವು ವರ್ಷಗಳಿಂದ ಮನೆ, ಜನವಸತಿಗಳಲ್ಲಿ ಕಂಡು ಬರುವ ಹಾವುಗಳನ್ನು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡುತ್ತಾರೆ.
undefined
click me!