ಪಾಠಕ್ಕೆ ನೆಟ್‌ವರ್ಕ್ ಸಮಸ್ಯೆ: ಗುಡ್ಡದ ಮೇಲೆ ಟೆಂಟ್‌ ಕಟ್ಟಿದ ಮಕ್ಕಳು

First Published Jul 24, 2020, 1:14 PM IST

ಕೊರೋನಾದಿಂದಾಗಿ ಆನ್‌ಲೈನ್‌ ತರಗತಿಗಾಗಿ ಇಂಟ​ರ್ನೆ​ಟ್‌ ನೆಟ್‌​ವ​ರ್ಕ್ ಸಿಗದೆ ಪರ​ದಾ​ಡು​ತ್ತಿ​ರುವ ಬೆಳ್ತಂಗಡಿ ತಾಲೂ​ಕಿನ ಶಿಬಾಜೆ ಗ್ರಾಮದ ಪೆರ್ಲದ ವಿದ್ಯಾ​ರ್ಥಿ​ಗಳು ಗುಡ್ಡದ ಮೇಲೆ ಟೆಂಟ್‌ ನಿರ್ಮಿ​ಸಿ​ಕೊಂಡು ಪಾಠ ಕೇಳು​ತ್ತಿದ್ದಾರೆ. ಇಲ್ಲಿವೆ ಫೋಟೋಸ್

ಕೊರೋನಾದಿಂದಾಗಿ ಆನ್‌ಲೈನ್‌ ತರಗತಿಗಾಗಿ ಇಂಟ​ರ್ನೆ​ಟ್‌ ನೆಟ್‌​ವ​ರ್ಕ್ ಸಿಗದೆ ಪರ​ದಾ​ಡು​ತ್ತಿ​ರುವ ಬೆಳ್ತಂಗಡಿ ತಾಲೂ​ಕಿನ ಶಿಬಾಜೆ ಗ್ರಾಮದ ಪೆರ್ಲದ ವಿದ್ಯಾ​ರ್ಥಿ​ಗಳು ಗುಡ್ಡದ ಮೇಲೆ ಟೆಂಟ್‌ ನಿರ್ಮಿ​ಸಿ​ಕೊಂಡು ಪಾಠ ಕೇಳು​ತ್ತಿದ್ದಾರೆ.
undefined
ಊರಿ​ನೊ​ಳಗೆ ಇಂಟ​ರ್ನೆ​ಟ್‌ ನೆಟ್‌​ವ​ಕ್‌​ರ್‍ ಸಿಗು​ತ್ತಿ​ಲ್ಲ. ಹೀಗಾಗಿ ಗುಡ್ಡ ಹತ್ತಿ ಕೂರ​ಬೇ​ಕಾದ ಸ್ಥಿತಿ ಇದೆ.
undefined
ಮಳೆಗಾಲ ಆಗಿರೋ ಕಾರಣ ಗುಡ್ಡದ ಮೇಲೆ ಹೆಚ್ಚಿನ ಸಮಯ ಕೂರಲು ಸಾಧ್ಯ​ವಿಲ್ಲ.ಹೀಗಾ​ಗಿ ಮಳೆ​ಯಿಂದ ರಕ್ಷ​ಣೆಗೆ ವಿದ್ಯಾ​ರ್ಥಿ​ಗ​ಳು ಪ್ಲಾಸ್ಟಿಕ್‌ ಶೀಟ್‌ನ ಟೆಂಟ್‌ ಅನ್ನು ನಿರ್ಮಿಸಿ​ಕೊಂಡಿ​ದ್ದಾ​ರೆ.
undefined
ಸೊಳ್ಳೆ ನಿಯಂತ್ರಿಸಲು ಸೀರೆಯನ್ನು ಟೆಂಟ್‌ ಸುತ್ತ ಕಟ್ಟಿ​ದ್ದಾ​ರೆ. ಪಿಯುಸಿ, ಪದವಿ ಹಾಗೂ ವೃತ್ತಿಪರ ಶಿಕ್ಷಣ ಪಡೆಯುತ್ತಿರುವ 9 ವಿದ್ಯಾರ್ಥಿಗಳು ಹಾಗೂ ತನ್ನ ಕಾಲೇಜು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಶಿಕ್ಷಣ ನೀಡಬೇಕಾದ ಓರ್ವ ಉಪನ್ಯಾಸಕಿಗೂ ಈ ಟೆಂಟ್‌ ಅನ್ನೇ ಸದ್ಯ ನೆಚ್ಚಿ​ಕೊಂಡಿ​ದ್ದಾ​ರೆ.
undefined
ರಸ್ತೆ ಕಾಮಗಾರಿ ವೇಳೆ ಬಿಎಸ್‌ಎನ್‌ಎಲ್‌ ಸಂಪರ್ಕ ಕಡಿದು ಹೋಗಿದ್ದು, ಆ ಬಳಿಕ ಈ ಭಾಗದ ಜನತೆಯ ಸಂಕಷ್ಟಬಿಗಡಾಯಿಸಿದೆ. ಮನೆಗಳಲ್ಲಿ ಫೋನ್‌ ಸಂಪರ್ಕ ಕೂಡ ಸಿಗುತ್ತಿಲ್ಲ.
undefined
ಗುಡ್ಡ ಬೆಟ್ಟವನ್ನೇರಿ ಸಂಪರ್ಕ ಸಾಧಿಸುವ ಸ್ಥಿತಿ ಇದೆ. ಈಗ ಮಕ್ಕಳಿಗೆ ಆನ್‌ಲೈನ್‌ ಶಿಕ್ಷಣ ಅನಿವಾರ್ಯವಾದ ಕಾರಣಕ್ಕೆ ಮಕ್ಕಳು ಗುಡ್ಡದಲ್ಲೇ ಟೆಂಟ್‌ ನಿರ್ಮಿಸಿ ಸಂಪರ್ಕ ಸಾಧಿಸಿದ್ದಾರೆ ಎಂದು ಸ್ಥಳೀಯ ನಿವಾಸಿ ದಿವಾಕರ ಹೆಬ್ಬಾರ್‌ ಹೇಳು​ತ್ತಾ​ರೆ.
undefined
ಆನ್ ಲೈನ್ ಕ್ಲಾಸ್ ಗೆ ಮೊಬೈಲ್ ನೆಟ್ ವರ್ಕ್ ಸಿಗದ ಕಾರಣ 5 ಕಿ.ಮೀ‌ ದೂರದ ಗುಡ್ಡ ಹತ್ತಿ ಕಾಡಿನಲ್ಲಿ ಹಾಕಿರುವಟೆಂಟ್
undefined
ನೆಟ್‌ವರ್ಕ್ ಸಿಗುವ ಬಸ್‌ಸ್ಟಾಂಡ್, ದೇವಸ್ಥಾನದ ವಠಾರ, ಹತ್ತಿರದ ಮನೆಗಳನ್ನು ಆಶ್ರಯಿಸಿದ್ದಾರೆ.
undefined
ಆದರೆ ಎಲ್ಲಾ ಮಕ್ಕಳು ಒಂದೇ ಕಡೆ ಸೇರಿದಾಗ ಅಲ್ಲೂ ನೆಟ್‌ವರ್ಕ್ ಸಮಸ್ಯೆ ಉಂಟಾಗುತ್ತದೆ. ಅದಕ್ಕಾಗಿ ಈ ಪರಿಸರದ ಪ್ರಾದ್ಯಾಪಕರು, ವಿಧ್ಯಾರ್ಥಿಗಳು ಸೇರಿ ಪೇಟೆಯಿಂದ ಸುಮಾರು 5 ಕಿ.ಮೀ ದೂರದ ಎತ್ತರ ಪ್ರದೇಶದ ಕಾಡಿನಲ್ಲಿ ಟೆಂಟ್ ನಿರ್ಮಿಸಿಕೊಂಡಿದ್ದಾರೆ.
undefined
ಸೊಳ್ಳೆಗಳ ಕಾಟ ತಪ್ಪಿಸಲು ಅದಕ್ಕೆ ಸುತ್ತ ಬಟ್ಟೆಯನ್ನು ಸುತ್ತಿ, ಸೊಳ್ಳೆಬತ್ತಿ ಉರಿಸಿ ಇದರೊಳಗೆ ಕುಳಿತುಕೊಂಡು ಆನ್‌ಲೈನ್ ಪಾಠವನ್ನು ಆಲಿಸುತ್ತಿದ್ದಾರೆ. ಶಿಕ್ಷಕಿ ಸೌಂದರ್ಯ ಕೈರಂಡ ಇದೇ ಟೆಂಟ್‌ನಲ್ಲಿ ಕುಳಿತು ಆನ್‌ಲೈನ್ ಕ್ಲಾಸಿಗಾಗಿ ತಯಾರಿ ನಡೆಸುತ್ತಿದ್ದಾರೆ. ಎತ್ತರ ಗುಡ್ಡವಾಗಿದ್ದರಿಂದ ಇಲ್ಲಿ ನೆಟ್‌ವರ್ಕ್ ಸಿಗುತ್ತಿದೆ.
undefined
click me!