ಶಿವಮೊಗ್ಗದಲ್ಲಿ ವಿಮಾನ ಪ್ರಯಾಣಿಕರ ಪರದಾಟ, ಕೊನೆ ಕ್ಷಣದಲ್ಲಿ ತಿರುಪತಿ ವಿಮಾನ ರದ್ದುಗೊಳಿಸಿದ ಏರ್‌ಲೈನ್ಸ್

Published : Jun 25, 2026, 08:53 AM IST

ಶಿವಮೊಗ್ಗದಿಂದ ತಿರುಪತಿಗೆ ಹೊರಡಬೇಕಿದ್ದ ವಿಮಾನ ಆರಂಭದಲ್ಲಿ ವಿಳಂಬ ಎಂದು ಬಳಿಕ ರದ್ದುಗೊಳಿಸಿದ ಘಟನೆ ನಡದಿದೆ. ಪರಿಣಾಮ ತಿರುಪತಿ ದರ್ಶನ ಟಿಕೆಟ್ ಪಡೆದು ಕಾಯುತ್ತಿದ್ದ ಭಕ್ತರು ತೀವ್ರ ಪರದಾಡುವಂತಾಗಿದೆ.

PREV
14
ಏರ್‌ಲೈನ್ಸ್ ಎಡವಟ್ಟಿನಿಂದ ಪ್ರಯಾಣಿಕರ ಪರದಾಟ

ಶಿವಮೊಗ್ಗದಿಂದ ತಿರುಪತಿಗೆ ಪ್ರಯಾಣ ಬೆಳೆಸಬೇಕಿದ್ದ ಸ್ಪೈಸ್‌ಜೆಟ್ ವಿಮಾನ ದಿಢೀರ್ ರದ್ದುಗೊಂಡ ಕಾರಣ 60 ಪ್ರಯಾಣಿಕರು ಪರದಾಡಿದ ಘಟನೆ ನಡೆದಿದೆ. ವಿಮಾನ ಪ್ರಯಾಣ ವಿಳಂಬ ಎಂದು ಘೋಷಣೆ ಮಾಡಿದ್ದ ಏರ್‌ಲೈನ್ಸ್ ಇನ್ನೇನು ವಿಮಾನ ಹೊರಡಬೇಕು ಎನ್ನುವಷ್ಟರಲ್ಲೇ ವಿಮಾನ ಪ್ರಯಾಣ ರದ್ದುಗೊಳಿಸಿದ ಘಚನೆ ನೆಡೆದಿದೆ.

24
ಆಕ್ರೋಶ ಹೊರಹಾಕಿದ 60 ಪ್ರಯಾಣಿಕರು

60 ಜನರು ಮಧ್ಯಾಹ್ನ 12.30ಕ್ಕೆ ಸೈಸ್‌ಜೆಟ್ ಮೂಲಕ ತಿರುಪತಿಗೆ ಪ್ರಯಾಣಿಸಬೇಕಿತ್ತು.ಏರ್‌ ಲೈನ್ಸ್ ಸಂಸ್ಥೆ ಸಿಬ್ಬಂದಿ ಪ್ರಕಟಣೆ ಹೊರಡಿಸಿ 'ಅನಿವಾರ್ಯ ಕಾರಣದಿಂದ ವಿಮಾನ ಎತಡವಾಗಿ ಪ್ರಯಾಣ ಆರಂಭಿಸಲಿದೆ ಎಂದು ತಿಳಿಸಿದ್ದರು. ಹಿಡಿ ಶಾಪ ಹಾಕುತ್ತಾ, ಆಕ್ರೋಶ ವ್ಯಕ್ತಪಡಿಸುತ್ತಾ ಪ್ರಯಾಣಿಕರು ಪ್ರಯಾಣಕ್ಕಾಗಿ ಕಾದು ಕುಳಿತಿದ್ದರು. ಬೇರೆ ಯಾವುದೇ ಮಾರ್ಗ ಇಲ್ಲದ ಕಾರಣ ಪ್ರಯಾಣಿಕರು ಅನಿವಾರ್ಯವಾಗಿ ಕಾಯಲು ನಿರ್ಧರಿಸಿದ್ದರು.

34
ದರ್ಶನ ಟಿಕೆಟ್ ಕಾಯ್ದಿರಿಸಿದ ಭಕ್ತರಿಗೆ ತೀವ್ರ ಸಮಸ್ಯೆ

ಪ್ರಯಾಣಿಕರು ನಿಗದಿತ ಸಮಯಕ್ಕೆ ಆಗಮಿಸಿ ಕಾಯುತ್ತಿದ್ದರು. ಮಧ್ಯಾಹ್ನ 1.30ಕ್ಕೆ ಮತ್ತೆ ಪ್ರಕಟಣೆ ಹೊರಡಿಸಿದ ವಿಮಾನ ಕಂಪನಿ ಸಿಬ್ಬಂದಿ ಇಂದಿನ ತಿರುಪತಿ ಪ್ರಯಾಣವನ್ನು ತಾಂತ್ರಿಕ ಕಾರಣಗಳಿಂದ ರದ್ದು ಪಡಿಸಲಾಗಿದೆ ಎಂದು ಘೋಷಿಸಿದರು. ತಿರುಪತಿ ವೆಂಕಟರಮಣನ ದರ್ಶನಕ್ಕೆ ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸಿದವರಿಗೆ ತೀವ್ರ ನಿರಾಸೆಯಾಯಿತು.

44
ಕಾಯಿಸಿ ರದ್ದುಪಡಿಸಿದ್ದೇಕೆ?

ವಿಮಾನಯಾನ ಕಂಪನಿಯ ಎಡವಟ್ಟಿನಿಂದ ಪ್ರಯಾಣಿಕರು ಶಿವಮೊಗ್ಗ ನಿಲ್ದಾಣದಲ್ಲಿ ಪರದಾಡ ಬೇಕಾಯಿತು. 60 ಪ್ರಯಾಣಿಕರಿಗೆ ತೊಂದರೆ ಅನುಭವಿಸಿದ್ದಾರೆ. ಒಂದು ದಿನ ಇಡೀ ಕಾಯಿಸಿ ಬಳಿಕ ರದ್ದುಪಡಿಸಿದ್ದೇಕೆ ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ. ತಾಂತ್ರಿಕ ಕಾರಣ ಕುರಿತು ವಿಳಂಬ ಘೋಷಣೆ ಮಾಡುವಾಗಲೇ ಸೂಚಿಸಿದ್ದರೆ ಬೇರೆ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದೆವು ಎಂದು ಪ್ರಯಾಣಿಕರು ಆಕ್ರೋಶ ಹೊರಹಾಕಿದ್ದಾರೆ.

Read more Photos on
click me!

Recommended Stories