ಕೊರೋನಾಗೆ ವ್ಯಾಕ್ಸಿನ್ ಕಂಡು ಹಿಡಿಯುವಬ್ರಿಟನ್ ವೈದ್ಯರತಂಡದಲ್ಲಿ ಕೊಡಗಿನ ವೈದ್ಯೆಯೊಬ್ಬರು ಕೆಲಸ ಮಾಡುತ್ತಿದ್ದಾರೆ ಎಂಬುದು ಹೆಮ್ಮೆಯ ವಿಷಯ.ಕೊಡಗಿನ ಮೂಲದ ವೈದ್ಯೆ ಡಾ. ಅಫ್ರೀನ್ ಅಮೀರ್ಡೆಕ್ಸಾಮಿತಾಸೋನ್ ಎಂಬ ಔಷಧಿ ಸಂಶೋಧನಾ ತಂಡದ ಭಾಗವಾಗಿದ್ದಾರೆ.
ಕೊಡಗಿನ ಮೂಲದ ವೈದ್ಯೆ ಡಾ. ಅಫ್ರೀನ್ ಅಮೀರ್ಮಡಿಕೇರಿಯ ಅಮೀರುದ್ದೀನ್, ಆರಿಫಾ ದಂಪತಿಯ ಮಗಳು
ಔಷಧ ಸಂಶೋಧನಾ ತಂಡದ ಭಾಗವಾಗಿರುವುದಕ್ಕೆ ಇವರು ಸಂತಸ ವ್ಯಕ್ತಪಡಿಸಿ ಫೇಸ್‌ಬುಕ್ ಪೋಸ್ಟ್ ಹಾಕಿಕೊಂಡಿದ್ದಾರೆ.
ಪತಿ ಹಾಗೂ ತಮ್ಮ ಪುಟ್ಟ ಮಗಳೊಂದಿಗೆ ಕೊಡಗಿನ ವೈದ್ಯೆ
ಡೆಕ್ಸಾಮಿತಾಸೋನ್ ಎಂಬ ಔಷಧಿ ಸಂಶೋಧನೆ ತಂಡದಲ್ಲಿ ಈಕೆ ಕೆಲಸ ಮಾಡುತ್ತಿದ್ದಾರೆ.
ಕೊರೋನಾ ರೋಗಿಗಳಿಗೆ ನೀಡಲಾಗುವ ಸ್ಟಿರಾಯ್ಡ್ ಔಷಧಿ ಸಂಶೋಧನಾ ತಂಡದಲ್ಲಿ ಇವರು ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೊರೋನಾ ಬಾಧಿತರು ಗುಣಮುಖರಾಗಲು ಈ ಔಷಧನೀಡಲಾಗುತ್ತದೆ.ಈ ತಂಡದ ಸಂಶೋಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಅಫ್ರಿನ್ ಎರಡು ವರ್ಷಗಳಿಂದ ಮ್ಯಾಂಚೆಸ್ಟರ್‌ನಲ್ಲಿ ಪತಿ ಡಾ. ಮುಶೀರ್ ಜತೆ ನೆಲೆಸಿದ್ದಾರೆ.