ಉಳ್ಳಾಲದಲ್ಲಿ ಹೆಚ್ಚಿದ ಕಡಲ್ಕೊರೆತ: ಮನೆ ಸಮುದ್ರಪಾಲು, ಇಲ್ಲಿವೆ ಫೋಟೋಸ್

First Published | Jun 17, 2020, 8:49 AM IST

ಉಳ್ಳಾಲ ಹಾಗೂ ಸೋಮೇಶ್ವರ ಭಾಗದಲ್ಲಿ ಕಡಲ್ಕೊರೆತ ಮತ್ತೆ ಮುಂದುವರಿದ್ದು ಉಳ್ಳಾಲದ ಕೈಕೋ, ಕಿಲೇರಿಯಾನಗರ, ಸೀಗ್ರೌಂಡ್‌ ಬಳಿ ಸಮುದ್ರದ ಅಬ್ಬರ ಹೆಚ್ಚಾಗಿದೆ. ಇಲ್ಲಿವೆ ಫೋಟೋಸ್

ಉಳ್ಳಾಲ ಹಾಗೂ ಸೋಮೇಶ್ವರ ಭಾಗದಲ್ಲಿ ಕಡಲ್ಕೊರೆತ ಮತ್ತೆ ಮುಂದುವರಿದ್ದು ಉಳ್ಳಾಲದ ಕೈಕೋ, ಕಿಲೇರಿಯಾನಗರ, ಸೀಗ್ರೌಂಡ್‌ ಬಳಿ ಸಮುದ್ರದ ಅಬ್ಬರ ಹೆಚ್ಚಾಗಿದೆ.
ಸೋಮೇಶ್ವರ ದೇವಸ್ಥಾನ ಬಳಿ ನಿವಾಸಿ ಮೋಹನ್‌ ಅವರಿಗೆ ಸೇರಿದ ಮನೆ ಸಂಪೂರ್ಣ ಸಮುದ್ರ ಪಾಲಾಗಿದ್ದು, ಕಳೆದ ಬಾರಿ ಸಮುದ್ರ ಕೊರೆತಕ್ಕೆ ಮನೆ ಭಾಗಶ: ಹಾನಿಯಾಗಿತ್ತು.
Tap to resize

ಸೋಮೇಶ್ವರ ಉಚ್ಚಿಲದಲ್ಲಿ ಸಮುದ್ರ ಕೊರೆತಕ್ಕೆ ಶಾಶ್ವತ ಕಾಮಗಾರಿಯ ಪರಿಣಾಮ ಸೋಮೇಶ್ವರ ಕಡಲತೀರದಲ್ಲಿ ಸಮುದ್ರದ ಅಬ್ಬರ ಹೆಚ್ಚಾಗಿದ್ದು ಅನೇಕ ತೆಂಗಿನ ಮರಗಳು ಸೇರಿದಂತೆ ಸಮುದ್ರ ತೀರ ಪ್ರದೇಶಗಳು ಸಮುದ್ರ ಪಾಲಾಗುತ್ತಿದೆ.
ಈ ಭಾಗದಲ್ಲಿ ಶಾಶ್ವತ ಕಾಮಗಾರಿ ಆರಂಭಗೊಂಡಿದ್ದು, ಮನೆಗಳಿಗೆ ಸಮುದ್ರದ ಅಲೆಗಳು ಅಪ್ಪಳಿಸುತ್ತಿದೆ. ಸೋಮೇಶ್ವರ ಉಚ್ಚಿಲದಲ್ಲಿಯೂ ಕಡಲ್ಕೊರೆತ ಆರಂಭಗೊಂಡಿದ್ದು, ಕಳೆದ ಬಾರಿ ಉಚ್ಚಿಲ ಬೀಚ್‌ ಎಂಡ್‌ ಪಾಯಿಂಟ್‌ ಸಂಪರ್ಕಿಸುವ ರಸ್ತೆ ಕುಸಿದು ಹೋಗಿತ್ತು.
ಇಲ್ಲಿ ಶಾಶ್ವತ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವುದು ಕಡಲ್ಕೊರೆತ ಹೆಚ್ಚಳಕ್ಕೆ ಕಾರಣವಾಗಿದೆ. ಉಳ್ಳಾಲ ಮತ್ತು ಸೋಮೇಶ್ವರ ವ್ಯಾಪ್ತಿಯಲ್ಲಿ ಸುಮಾರು 20ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿದೆ.

Latest Videos

click me!