ಕಲಬುರಗಿಯಲ್ಲಿ ಪರೀಕ್ಷೆ ಬರೆಯಲು ಹೋದ ಯುವತಿ ನಾಪತ್ತೆಯಾಗಿದ್ದು, ಪೋಷಕರು ಲವ್ ಜಿಹಾದ್‌ಗೆ ಬಲಿಯಾಗಿದ್ದಾಳೆ ಎಂದು ಶಂಕಿಸಿದ್ದಾರೆ. ಯುವತಿಯ ಮೊಬೈಲ್ ಹೈದರಾಬಾದ್‌ನಲ್ಲಿ ಸ್ವಿಚ್ ಆಫ್ ಆಗಿದೆ.
ಪರೀಕ್ಷೆ ಬರೆಯಲು ಹೋಗಿದ್ದ ಹೋಗಿದ್ದ ಯುವತಿ ನಾಪತ್ತೆಯಾಗಿರುವ ಘಟನೆ ಕಲಬುರಗಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಮಗಳು ನಾಪತ್ತೆಯಾಗಲು ಲವ್ ಜಿಹಾದ್ ಕಾರಣ ಎಂದು ಯುವತಿಯ ಪೋಷಕರು ಆರೋಪಿಸಿದ್ದಾರೆ.
26
ಕಲಬುರಗಿ ವಿವಿ ಪೊಲೀಸ್ ಠಾಣೆಯಲ್ಲಿ ದೂರು
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಗೊಬ್ಬರು ಬಿ. ಗ್ರಾಮದ ನಿವಾಸಿಯಾಗಿರುವ ಯುವತಿ ಜುಲೈ 23ರಂದು ಪರೀಕ್ಷೆ ಬರೆಯಲು ಕಲಬುರಗಿಗೆ ಹೋಗುತ್ತಿರೋದಾಗಿ ಹೇಳಿ ಮನೆಯಿಂದ ಹೋಗಿದ್ದಳು. ಆದ್ರೆ ಮನೆಗೆ ಹಿಂದಿರುಗದ ಕಾರಣ ಪೋಷಕರು ಆತಂಕಗೊಂಡು ಕಲಬುರಗಿ ವಿವಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
36
ಮಶಾಕ್ ಜೊತೆ ಫೋನ್‌ನಲ್ಲಿ ಸಂಪರ್ಕ
ಯುವತಿ ಜೈನ ಸಮುದಾಯಕ್ಕೆ ಸೇರಿದ್ದು, ಗಬ್ಬೂರು ಗ್ರಾಮದ ನಿವಾಸಿಯಾಗಿರೋ ಮಶಾಕ್ ಎಂಬಾತನನ್ನು ಪ್ರೀತಿಸುತ್ತಿದ್ದಳು ಎಂದು ತಿಳಿದು ಬಂದಿದೆ. ಯುವತಿಗೆ ಮಾಶಾಕ್ ಕರೆ ಮತ್ತು ಮೆಸೇಜ್ ಮಾಡುತ್ತಿದ್ದನಂತೆ. ಇದೀಗ ಯುವತಿಯ ಪೋಷಕರು ಮಶಾಕ್ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಮಗಳು ಮಶಾಕ್ ಜೊತೆ ಫೋನ್‌ನಲ್ಲಿ ಸಂಪರ್ಕದಲ್ಲಿದ್ದಳು ಎಂದು ಪೋಷಕರು ಹೇಳುತ್ತಾರೆ.
ಈ ಕುರಿತು ಮಾಧ್ಯಮಗಳ ಜೊತೆ ಮಾತನಾಡಿರುವ ಸ್ಥಳೀಯ ಹಿಂದೂ ಸಂಘಟನೆಯ ಮುಖಂಡ, ಪೋಷಕರು ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿಕೊಂಡಿದ್ದಾರೆ. ತನಿಖೆ ಬಗ್ಗೆ ಕೇಳಿದ್ರೆ ಯುವತಿಯ ಮೊಬೈಲ್ ಹೈದರಾಬಾದ್‌ನಲ್ಲಿ ಸ್ವಿಚ್ಛ್ ಆಫ್ ಆಗಿದ್ದು, ಹುಡುಕುವ ಕೆಲಸ ನಡೆಯುತ್ತಿದೆ. ಹುಡುಗ ಹುಬ್ಬಳ್ಳಿ ಮೂಲದವನು ಎಂದು ಹೇಳಿ ಪೊಲೀಸರು ದಾರಿ ತಪ್ಪಿಸುತ್ತಿದ್ದಾರೆ. ಆದ್ರೆ ಪೋಷಕರು ಹುಡುಗ ತಮ್ಮದೇ ಗಬ್ಬರೂ ಗ್ರಾಮದವನು ಎಂದು ಹೇಳ್ತಿದ್ದಾರೆ. ಪೊಲೀಸರು ಹುಡುಗ-ಹುಡುಗಿಯನ್ನ ಶೀಘ್ರವೇ ಪತ್ತೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
56
ಆಕೆ ನಮ್ಮೊಂದಿಗೆ ಬರುತ್ತಾಳೆ
ಯುವತಿಯ ತಂದೆ ಮಾತನಾಡಿ, ಮಗಳ ಪ್ರೀತಿಯ ವಿಷಯ ತಿಳಿದ ಕೂಡಲೇ ಆಕೆಯನ್ನು ಕಾಲೇಜಿಗೆ ಹೋಗುವುದನ್ನು ನಿಲ್ಲಿಸಲಾಯ್ತು. ಆತ ಮಾಡಿದ ಮೆಸೇಜ್ ಓದಿದ ಕೂಡಲೇ ಡಿಲೀಟ್ ಮಾಡುತ್ತಿದ್ದಳು ಎಂದು ಹೇಳಿದ್ದಾರೆ. ತಾಯಿ ಮಾತನಾಡಿ, ಮಗಳು ನಮಗೆ ಬೇಕು. ಆಕೆ ನಮ್ಮೊಂದಿಗೆ ಬರುತ್ತಾಳೆ ಎಂಬ ನಂಬಿಕೆ ನಮಗಿದೆ. ಮನೆಗೆ ಕರೆದುಕೊಂಡು ಹೋಗುವ ಪ್ರಯತ್ನವನ್ನು ನಾವು ಖಂಡಿತವಾಗಿ ಮಾಡುತ್ತೇವೆ. ಒಂದು ವೇಳೆ ಮನಸ್ಸು ಬದಲಿಸಿದ್ರೆ ಏನು ಮಾಡಲು ಸಾಧ್ಯ ಅಂತಾರೆ.
66
ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ಯುವತಿ
ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದ ಯುವತಿ ಪರೀಕ್ಷೆ ಬರೆಯೋದಾಗಿ ಕಲಬುರಗಿ ನಗರಕ್ಕೆ ಬಂದಿದ್ದಳು. ಪ್ರೀತಿ ವಿಷಯ ತಿಳಿದಿದ್ದರಿಂದ ಪೋಷಕರು ಯುವತಿಯನ್ನು ಪ್ರತಿದಿನ ಕಾಲೇಜಿಗೆ ಕಳುಹಿಸುತ್ತಿರಲಿಲ್ಲ. ಪರೀಕ್ಷೆಗೂ ಯುವತಿ ಜೊತೆ ಕುಟುಂಬಸ್ಥರು ಬಂದಿದ್ದರು. ಕಾಲೇಜಿನೊಳಗೆ ಹೋದ ಯುವತಿ ಹಿಂದಿರುಗಿ ಬಂದಿಲ್ಲ. ಈ ಪ್ರಕರಣಕ್ಕೆ ಹಿಂದೂ ಸಂಘಟನೆಗಳು ಧ್ವನಿಗೂಡಿಸಿದ್ದು, ಇದು ಮತಾಂತರದ ಜಾಲದ ಭಾಗವೆಂದು ಆರೋಪಿಸಿ, ಯುವತಿಯನ್ನು ಶೀಘ್ರವಾಗಿ ಪತ್ತೆಹಚ್ಚುವಂತೆ ಪೊಲೀಸರನ್ನು ಒತ್ತಾಯಿಸಿವೆ.