ಚಿಕ್ಕಬಳ್ಳಾಪುರದ ಚಿಂತಾಮಣಿಯಲ್ಲಿ 19 ವರ್ಷದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಮಗನ ಸಾವಿಗೆ 38 ವರ್ಷದ ಮಹಿಳೆಯ ಅಕ್ರಮ ಸಂಬಂಧದ ಒತ್ತಡವೇ ಕಾರಣ ಎಂದು ಯುವಕನ ಪೋಷಕರು ಆರೋಪಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
38 ವರ್ಷದ ಇಬ್ಬರು ಮಕ್ಕಳ ತಾಯಿಯ ಕಾಟಕ್ಕೆ ನೊಂದ 19 ವರ್ಷದ ಯುವಕ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮೂಡಚಿಂತಲಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
25
ಆತ್ಮ*ಹತ್ಯೆಗೆ ಶರಣಾದ ಯುವಕ
ನಿಖಿಲ್ ಕುಮಾರ್ ಆಂಟಿ ಕಾಟಕ್ಕೆ ನೊಂದು ಆತ್ಮ*ಹತ್ಯೆಗೆ ಶರಣಾದ ಯುವಕ. ತಮ್ಮ ಮಗನ ಸಾವಿಗೆ ಶಾರದಾ ಎಂಬ ಮಹಿಳೆಯೇ ಕಾರಣ ಎಂದು ನಿಖಿಲ್ ಕುಮಾರ್ ಪೋಷಕರು ಆರೋಪಿಸಿದ್ದಾರೆ. ಪೋಷಕರ ಕಣ್ಣು ತಪ್ಪಿಸಿ ನಿಖಿಲ್ ಜೊತೆ ಶಾರದಾ ಊರಿನಿಂದ ಹೊರಗಡೆ ಕರೆದುಕೊಂಡು ಹೋಗುತ್ತಿದ್ದಳು ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
35
19 ವರ್ಷ ಚಿಕ್ಕವನಾಗಿರುವ ನಿಖಿಲ್ ಕುಮಾರ್
ಗಂಡನಿಂದ ವಿಚ್ಚೇದನ ಪಡೆದುಕೊಂಡಿದ್ದ ಶಾರದಾಗೆ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದಳು. ಹಲವು ವರ್ಷಗಳಿಂದ ಗಂಡನಿಂದ ದೂರವಾಗಿದ್ದ ಶಾರದಾ, ತನಗಿಂತ 19 ವರ್ಷ ಚಿಕ್ಕವನಾಗಿರುವ ನಿಖಿಲ್ ಕುಮಾರ್ ಮೇಲೆ ಕಣ್ಣಾಕಿದ್ದಳು. ನಿಖಿಲ್ ಕುಮಾರ್ ಜೊತೆ ಶಾರದಾ ಅಕ್ರಮ ಸಂಬಂಧ ಹೊಂದಿದ್ದಳು ಎಂದು ಪೋಷಕರು ಆರೋಪಿಸಿದ್ದಾರೆ.
45
ಅಕ್ರಮ ಸಂಬಂಧ
ನಿಖಿಲ್ ಕುಮಾರ್ ಮೇಲೆ ಅಕ್ರಮ ಸಂಬಂಧಕ್ಕಾಗಿ ಶಾರದಾ ಒತ್ತಡ ಹಾಕುತ್ತಿದ್ದಳು. ಪೋಷಕ ವಿರೋಧದ ನಡುವೆಯೂ ಇಬ್ಬರ ಸಂಬಂಧ ಮುಂದುವರಿದಿತ್ತು. ಇದೀಗ ನಿಖಿಲ್ ಕುಮಾರ್ ಶವ ಚಿಂತಾಮಣಿಯ ಕಾಚಹಳ್ಳಿ ಕೆರೆ ಬಳಿ ಪತ್ತೆಯಾಗಿದೆ. ನೇಣು ಬಿಗಿದುಕೊಂಡು ನಿಖಿಲ್ ಕುಮಾರ್ ಆತ್ಮ*ಹತ್ಯೆ ಮಾಡಿಕೊಂಡಿದ್ದಾನೆ.
ನಿಖಿಲ್ ಕುಮಾರ್ ಸಾವಿನ ಸಂಬಂಧ ಪೋಷಕರು ಶಾರದಾ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಚಿಂತಾಮಣಿ ಗ್ರಾಮಾಂತರ ಠಾಣೆಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಿಖಿಲ್ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.