Anjanadri Temple: ತಾಪಮಾನ ಏರಿದರೂ ಭಕ್ತಿ ಕಡಿಮೆ ಆಗಲಿಲ್ಲ; ಒಂದೇ ದಿನ ಅಂಜನಾದ್ರಿಗೆ 25 ಸಾವಿರ ಭಕ್ತರ ಭೇಟಿ!

Published : May 24, 2026, 05:20 AM IST

ಕೊಪ್ಪಳ: ಉರಿ ಬಿಸಿಲು ಲೆಕ್ಕಿಸದೆ ಶನಿವಾರ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಆಂಜನೇಯನ ಜನ್ಮಸ್ಥಳ ಅಂಜನಾದ್ರಿಗೆ ಅಂದಾಜು 25000 ಮಂದಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ನಿನ್ನೆ ಅಷ್ಟು ಭಕ್ತರು ಆಗಮಿಸಿ ದರ್ಷನ ಪಡೆಯಲು ಕಾರಣವೇನು ತಿಳಿಯಿರಿ

PREV
14
ಒಂದೇ ದಿನ ಅಂಜನಾದ್ರಿಗೆ 25000 ಭಕ್ತಾಧಿಗಳು ಭೇಟಿ

ಉರಿ ಬಿಸಿಲು ಲೆಕ್ಕಿಸದೆ ಶನಿವಾರ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಪೌರಾಣಿಕ ಪ್ರಸಿದ್ಧ ಕ್ಷೇತ್ರ, ಆಂಜನೇಯನ ಜನ್ಮಸ್ಥಳ ಅಂಜನಾದ್ರಿಗೆ ಅಂದಾಜು 25000 ಮಂದಿ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು

24
ಭಯಂಕರ ಬಿಸಿಲಿನಲ್ಲೂ ಮೆಟ್ಟಿಲು ಹತ್ತಿ ಆಂಜನೇಯ ದರ್ಶನ ಪಡೆದ ಭಕ್ತರು

ಬೆಳಗ್ಗೆಯಿಂದಲೇ ಆಗಮಿಸಿದ್ದ ಭಕ್ತರು ಗುಡ್ಡ ಏರಿ ಹನುಮಂತನ ದರ್ಶನ ಪಡೆಯಲು ಸಾಲುಗಟ್ಟಿ ನಿಂತಿದ್ದರು. 11 ಗಂಟೆಯ ಬಳಿಕವೂ ಭಕ್ತರ ಸಂಖ್ಯೆ ಕಡಿಮೆ ಆಗಲಿಲ್ಲ

34
ಆಂಜನೇಯನ ಜನ್ಮಸ್ಥಳ ಅಂಜನಾದ್ರಿಗೆ ಭಕ್ತಸಾಗರ

ವಿಪರೀತ ಬಿಸಿಲು ಇರುವುದರಿಂದ 11ರ ನಂತರ ಬೆಟ್ಟ ಏರುವುದಕ್ಕೆ ಅವಕಾಶ ಇಲ್ಲದ ಕಾರಣ ಮತ್ತೆ ಸಂಜೆ ಬೆಟ್ಟ ಹತ್ತಲು ಭಕ್ತರು ಕೆಳಗಡೆಯೇ ಕಾಯುತ್ತಾ ಕುಳಿತಿದ್ದರು.

44
ಕುಡಿಯುವ ನೀರಿಗಾಗಿ ಅಂಜನಾದ್ರಿ ಬೆಟ್ಟದಲ್ಲಿ ಕಾಯುವ ಸ್ಥಿತಿ

ದೇವಸ್ಥಾನ ಸಮಿತಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಕೇವಲ 4 ನಲ್ಲಿಗಳು ಮಾತ್ರ ಇದ್ದು, ಹೆಚ್ಚಾಗಿ ಭಕ್ತರು ಆಗಮಿಸಿದ್ದರಿಂದ ಕುಡಿಯುವ ನೀರಿಗಾಗಿ ಕಾಯುವ ಸ್ಥಿತಿ ನಿರ್ಮಾಣವಾಗಿತ್ತು.

Read more Photos on
click me!

Recommended Stories