ಶನಿವಾರ ಸುಬ್ರಹ್ಮಣ್ಯ ನಗರ ಮತ್ತು ವೈಯಾಲಿ ಕಾವಲ್‌ನಲ್ಲಿ ನೂತನ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಮಲ್ಲೇಶ್ವರ ಕೆ.ಸಿ.ಜನರಲ್ ಆಸ್ಪತ್ರೆ ಎದುರಿನ ಸರ್ಕಾರಿ ಶಾಲಾ ಆವರಣದಲ್ಲಿ 24/7 ಕೋವಿಡ್ ಲಸಿಕಾ ಕೇಂದ್ರ(24/7 Covid Vaccine Center) ಉದ್ಘಾಟಿಸಿದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್.ಅಶ್ವತ್ಥ ನಾರಾಯಣ(CN Ashwathnarayan)
ಸೋಮವಾರದಿಂದ 15-18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಅಭಿಯಾನ(Vaccination campaign for children) ಆರಂಭವಾಗಲಿದೆ. ಜೊತೆಗೆ ಆರೋಗ್ಯ ಕಾರ್ಯಕರ್ತರು ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್ ಡೋಸ್(Booster Dose) ನೀಡಲಾಗುವುದು. ಇದಕ್ಕಾಗಿ ವೈದ್ಯರು, ಆರೋಗ್ಯ ಸಿಬ್ಬಂದಿ ಮತ್ತು ಔಷಧಿಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದ ಸಚಿವರು
ಕಳೆದೊಂದು ವಾರದಿಂದ ಕೋವಿಡ್(Covid19) ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಮೂರನೇ ಅಲೆ ಎಂದು ಹೇಳಲು ಸಾಧ್ಯವಿಲ್ಲ. ಈ ಕುರಿತು ಇನ್ನೂ ಸ್ವಲ್ಪ ದಿನ ಕಾದು ನೋಡಬೇಕಿದೆ. ಆದರೂ ಮೂರನೇ ಅಲೆ ಎದುರಿಸಲು ಅಗತ್ಯ ಸಿದ್ಧತೆಯನ್ನು ರಾಜ್ಯ ಸರ್ಕಾರ(Government of Karnataka) ಪ್ರಾರಂಭಿಸಿದೆ ಎಂದ ಅಶ್ವತ್ಥ ನಾರಾಯಣ
ಕಾಡುಮಲ್ಲೇಶ್ವರ, ಸುಬ್ರಹ್ಮಣ್ಯ ನಗರ ವಾರ್ಡಿಗೆ ಹೊಸದಾಗಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮಂಜೂರು ಮಾಡಿದ್ದು, ವಿಳಂಬ ಮಾಡದೆ ಆರೋಗ್ಯ ಸೇವೆಗಳನ್ನು ನೀಡಬೇಕೆಂಬ ಉದ್ದೇಶದಿಂದ ತಾತ್ಕಾಲಿಕ ಕಟ್ಟಡದಲ್ಲಿ ಯುಪಿಎಚ್‌ಡಿ ಆರಂಭಿಸಲಾಗಿದೆ ಎಂದು ತಿಳಿಸಿದ ಸಚಿವರು.
ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹೊಸ ಕಟ್ಟಡ ನಿರ್ಮಾಣ ಯೋಜನೆ ಸಿದ್ಧವಿದ್ದು, ಶೀಘ್ರವೇ ಕಾಮಗಾರಿ ಪ್ರಾರಂಭವಾಗಲಿದೆ. ಆರೋಗ್ಯ ಕೇಂದ್ರದಲ್ಲಿ ಎಂಬಿಬಿಎಸ್ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಪ್ರತಿದಿನ ಲಭ್ಯವಿದ್ದು, ಆರೋಗ್ಯ ಸೇವೆಗಳನ್ನು ನೀಡಲಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಯೋಗಾಲಯ, ಎಕ್ಸ್-ರೇ, ದಂತ ವೈದ್ಯಕೀಯ, ಕಣ್ಣಿನ ಹಾಗೂ ರೆಟಿನಾ ತಪಾಸಣೆ, ಫಿಜಿಯೋ ತೆರಪಿ, ಲಸಿಕಾ ಕೇಂದ್ರ, ಜನೌಷಧಿ ಹಾಗೂ ತಜ್ಞ ವೈದ್ಯರ ವರ್ಚುವಲ್ ಕ್ಲಿನಿಕ್ ಸೌಲಭ್ಯಗಳನ್ನು ಹೊಸ ಕಟ್ಟಡದಲ್ಲಿ ಒದಗಿಸಲಾಗುವುದು. ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎಲ್ಲ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುವುದು ಎಂದು ಮಾಹಿತಿ ನೀಡಿದ ಪಶ್ಚಿಮ ವಲಯ ಜಂಟಿ ಆಯುಕ್ತ ಬಿ.ಶಿವಸ್ವಾಮಿ