14 ದಿನದಲ್ಲಿ ಕುದುರೆಮುಖ ಕಬ್ಬಿಣ ಅದಿರು ಕಂಪನಿಗೆ 10 ಕೋಟಿ ನಷ್ಟ, ಇಲ್ಲಿದೆ ಫೋಟೋಸ್

First Published | May 1, 2020, 3:03 PM IST

ಕೇಂದ್ರ ಸ್ವಾಮ್ಯದ ಮಂಗಳೂರಿನ ಕುದುರೆಮುಖ ಕಬ್ಬಿಣ ಅದಿರು ಕಂಪನಿ(ಕೆಐಒಸಿಎಲ್‌) ಸುಮಾರು 14 ದಿನಗಳ ಬಿಡುವಿನ ಬಳಿಕ ಏ.15ರಿಂದ ಮತ್ತೆ ಘಟಕ ಕಾರ್ಯಾರಂಭ ಮಾಡಿದೆ. ಘಟಕ ಸ್ಥಗಿತಗೊಂಡ ಪರಿಣಾಮ ಕಂಪನಿ ಅಂದಾಜು 10 ಕೋಟಿ ರು.ಗಳಷ್ಟುನಷ್ಟಅನುಭವಿಸುವಂತಾಗಿದೆ. ಈಗ ಮತ್ತೆ ಕಾರ್ಯಾರಂಭವಾಗಿದ್ದು, ಇಲ್ಲಿವೆ ಫೋಟೋಸ್‌

ಕೊರೋನಾ ಲಾಕ್‌ಡೌನ್‌ನಿಂದಾಗಿ ಕೇಂದ್ರ ಸ್ವಾಮ್ಯದ ಮಂಗಳೂರಿನ ಕುದುರೆಮುಖ ಕಬ್ಬಿಣ ಅದಿರು ಕಂಪನಿ(ಕೆಐಒಸಿಎಲ್‌) ಎರಡು ವಾರಗಳ ಕಾಲ ಅದಿರು ಉಂಡೆಕಟ್ಟುವ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದು, ಇದೀಗ ಮತ್ತೆ ಘಟಕವನ್ನು ಭಾಗಶಃ ಪುನರಾರಂಭಿಸಿದೆ.
undefined
ಲಾಕ್‌ಡೌನ್‌ ಹೊರತೂ ಮಾಚ್‌ರ್‍ ತಿಂಗಳು ಈ ಕಂಪನಿ ಪೂರ್ತಿ ಅದಿರು ಉಂಡೆಕಟ್ಟುವ ಕೆಲಸ ನಡೆಸಿತ್ತು. ಆದರೆ ಏಪ್ರಿಲ್‌ ಮೊದಲ ದಿನದಿಂದಲೇ ಲಾಕ್‌ಡೌನ್‌ ಬಿಗುಗೊಳಿಸಿದ ಪರಿಣಾಮ ಸಮುದ್ರ ಮಾರ್ಗದಿಂದಲೂ ಅದಿರು ನಿಕ್ಷೇಪ ಆಮದಿಗೆ ಅಡ್ಡಿಯುಂಟಾಗಿತ್ತು.
undefined

Latest Videos


ಇದರಿಂದ ಛತ್ತೀಸಗಡದಿಂದ ಅದಿರು ಬಾರದೆ ಅನಿವಾರ್ಯವಾಗಿ ಘಟಕದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕಾಯಿತು. ಈ ಅವಧಿಯಲ್ಲಿ ಘಟಕದ ನಿರ್ವಹಣೆಗೆ ಬಳಕೆ ಮಾಡಿಕೊಳ್ಳಲಾಗಿದೆ.
undefined
ಘಟಕ ಸ್ಥಗಿತಗೊಂಡ ಅವಧಿಯನ್ನು ನಿರ್ವಹಣೆಗೆ ಬಳಸಿಕೊಳ್ಳಲಾಗಿದೆ. ಪ್ರಸ್ತುತ ಕೇಂದ್ರ ಸರ್ಕಾರದ ಸೂಚನೆಯಂತೆ ಶೇ.33 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದಿರು ಉಂಡೆ ಕಟ್ಟುವ ಘಟಕ ಈಗ ಯಥಾಪ್ರಕಾರ ಕಾರ್ಯನಿರ್ವಹಿಸುತ್ತಿದೆ ಎಂದುಸುಬ್ಬ ರಾವ್‌ ತಿಳಿಸಿದ್ದಾರೆ.
undefined
ಸುಮಾರು 14 ದಿನಗಳ ಬಿಡುವಿನ ಬಳಿಕ ಏ.15ರಿಂದ ಮತ್ತೆ ಘಟಕ ಕಾರ್ಯಾರಂಭ ಮಾಡಿದೆ. ಘಟಕ ಸ್ಥಗಿತಗೊಂಡ ಪರಿಣಾಮ ಕಂಪನಿ ಅಂದಾಜು 10 ಕೋಟಿ ರು.ಗಳಷ್ಟುನಷ್ಟಅನುಭವಿಸುವಂತಾಗಿದೆ.
undefined
click me!