ಲಾಕ್‌ಡೌನ್‌ನಲ್ಲಿ ಪಂಚಾಯತ್‌ನಿಂದ ಮಾದರಿ ಕೆಲಸ: ಗ್ರಾಮಸ್ಥರೇ ನಿರ್ಮಿಸ್ತಿದ್ದಾರೆ ಬೃಹತ್ ಕೆರೆ..!

First Published | May 1, 2020, 12:27 PM IST

ಉಡುಪಿಯ ಅಲೆವೂರು ಗ್ರಾಮ ಪಂಚಾಯಿತಿ ಲಾಕ್‌ಡೌನ್ ವೇಳೆ ತನ್ನೂರಿನ ಬಡ ಕಾರ್ಮಿಕರಿಗೆ ಕೆಲಸ ಕೊಟ್ಟಿದೆ. ಹೇಗೆ ಅಂತೀರಾ..? ಗ್ರಾಮಸ್ಥರೇ ಸೇರಿ ದೊಡ್ಡದೊಂದು ಕೆರೆ ನಿರ್ಮಿಸ್ತಿದ್ದಾರೆ. ಮಹಿಳೆಯರೂ ಪುರುಷರೂ ಒಗ್ಗಟ್ಟಿನಿಂದ ಕೆಲಸ ಮಾಡ್ತಿದ್ದಾರೆ. ಕಾಲ್‌ಡೌನ್‌ನಲ್ಲಿ ಕೆಲಸವೂ ಆಯ್ತು, ನೀರಿಗೂ ದಾರಿಯಾಯ್ತು ಎಂಬಂತೆ ಗ್ರಾಮ ಪಂಚಾಯತ್ ಕೆಲಸ ಮಾದರಿಯಾಗಿದೆ. ಇಲ್ಲಿವೆ ಫೋಟೋಸ್

ಉಡುಪಿಯ ಅಲೆವೂರು ಗ್ರಾಮ ಪಂಚಾಯಿತಿಯಲ್ಲಿ ಕೆರೆ ನಿರ್ಮಿಸಲು ಗುರುತಿಸಲಾಗಿರುವ ಸ್ಥಳವನ್ನು ಸ್ವಚ್ಛ ಮಾಡುತ್ತಿರುವ ಗ್ರಾಮಸ್ಥರು
undefined
ಲಾಕ್‌ಡೌನ್‌ನಿಂದಾಗಿ ಎಲ್ಲ ರೀತಿಯ ಉತ್ಪಾದಕ, ಅಭಿವೃದ್ಧಿ ಕಾರ್ಯಗಳು ಸ್ಥಬ್ದವಾಗಿವೆ, ಇದರಿಂದ ನಿತ್ಯ ದುಡಿದು ನಿತ್ಯ ಉಣ್ಣುವ ಕೂಲಿ ಕಾರ್ಮಿಕರು ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವಂತಾಗಿದೆ. ಇಂತಹ ಕೆಟ್ಟದಿನಗಳನ್ನೇ ಸದ್ಬಳಕೆ ಮಾಡಿಕೊಂಡ ಇಲ್ಲಿನ ಅಲೆವೂರು ಗ್ರಾಮ ಪಂಚಾಯಿತಿ ಊರಿನ ಸುಸ್ಥಿರ ಅಭಿವೃದ್ಧಿಯ ಜೊತೆಗೆ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಿ ಸೈ ಎನಿಸಿಕೊಂಡಿದೆ.
undefined

Latest Videos


ಕೋಡಿ ಎಂಬಲ್ಲಿರುವ ಪುರಾತನ ಕೆರೆಯೊಂದರ ಪುನರುಜ್ಜೀವನಕ್ಕೆ ಕೈಹಾಕಿರುವ ಪಂಚಾಯಿತಿ, ಈ ಮೂಲಕ ಸುಮಾರು 25 ಮಂದಿ ಬಡ ಕೂಲಿ ಕಾರ್ಮಿಕರ ಕುಟುಂಬದ ಅನ್ನಕ್ಕೆ ಆಧಾರವಾಗಿದೆ, ಈ ಕೆರೆಯ ಸುತ್ತಮುತ್ತಲಿನ 60- 70 ಕೃಷಿಕರ ಗದ್ದೆ ನೀರುಣಿಸುವ, ಬಾವಿಗಳಲ್ಲಿ ನೀರಿನ ಮಟ್ಟಹೆಚ್ಚಿಸುವ, ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುತ್ತಿದೆ.
undefined
ಲಾಕ್‌ಡೌನ್‌ ಇದ್ದರೂ, ಗ್ರಾಮೀಣ ಭಾಗದಲ್ಲಿ ನಿರ್ಮಾಣ ಕಾಮಗಾರಿಗಳಿಗೆ ನೀಡಲಾದ ಅನುಮತಿಯನ್ನು ಬಳಸಿಕೊಂಡು, ಕೇಂದ್ರ ಸರ್ಕಾರದ ಉದ್ಯೋಗ ಖಾತ್ರಿ ಯೋಜನೆಯಡಿ ಈ ಕಾಮಗಾರಿಯನ್ನು ನಡೆಸಲಾಗುತ್ತಿದೆ.
undefined
ಈಗಾಗಲೇ 7 ದಿನಗಳ ಮೊದಲ ಹಂತದ ಕಾಮಗಾರಿ ಮುಗಿದಿದೆ, ಸುಮಾರು 55 ಅಡಿ ಅಗಲ, 55 ಅಡಿ ಉದ್ದದ ಈ ಕೆರೆಯನ್ನು ಈಗಾಗಲೇ 5 ಅಡಿ ಆಳಗೊಳಿಸಲಾಗಿದೆ.
undefined
ಇನ್ನೂ 20 ದಿನಗಳಲ್ಲಿ ಇನ್ನೂ 10 ಅಡಿ ಅಂದರೆ ಒಟ್ಟು ಸುಮಾರು 15 ಅಡಿ ಆಳಗೊಳಿಸುವ ಉದ್ದೇಶ ಇದೆ ಎನ್ನುತ್ತಾರೆ ಪಂಚಾಯಿತಿ ಅಧ್ಯಕ್ಷ ಶ್ರೀಕಾಂತ್‌ ನಾಯಕ್‌.
undefined
ಈಗಾಗಲೇ ಉದ್ಯೋಗ ಖಾತ್ರಿ ಯೋಜನೆಯಡಿ 500 ಮಾನವ ದಿನಗಳಿಗೆ 1.50 ಲಕ್ಷ ರು. ಮಂಜೂರಾಗಿದೆ. ಇನ್ನೂ 1.50 ಲಕ್ಷ ರು.ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎನ್ನುತ್ತಾರೆ ಅಧ್ಯಕ್ಷರು. ಸುಮಾರು 12 ವರ್ಷಗಳ ಹಿಂದೆ ಈ ಕೆರೆ ಜೀವಂತವಾಗಿದ್ದು, ಸುತ್ತಮುತ್ತಲಿನ ಸುಮಾರು 100 ಎಕರೆ ಕೃಷಿ ಗದ್ದೆಗಳಿಗೆ ಜನವರಿ- ಫೆಬ್ರವರಿ ತಿಂಗಳವರೆಗೆ ನೀರು ಪೂರೈಕೆ ಮಾಡುತ್ತಿದ್ದು,ಕುಡಿಯುವ ನೀರಿಗೂ ಆಶ್ರಯವಾಗಿತ್ತು.
undefined
ಆದರೆ ಈ ಕೆರೆಯ ಮೇಲ್ಭಾಗದಲ್ಲಿ ಭೂಮಿಯನ್ನು ವಾಣಿಜ್ಯ ಬಳಕೆಗೆ ಸಮುತಟ್ಟು ಮಾಡಿದಾಗ, ಮಳೆಗಾಲದಲ್ಲಿ ಅಲ್ಲಿಂದ ಮಣ್ಣು ಹರಿದು ಬಂದು ಈ ಕೆರೆ ತುಂಬಿ ತನ್ನ ಸ್ವರೂಪವನ್ನೇ ಕಳೆದುಕೊಂಡಿದೆ ಎಂದು ಊರಿನ ಹಿರಿಯರು ನೆನಪಿಸಿಕೊಳ್ಳುತ್ತಾರೆ.
undefined
ಪುನರುಜ್ಜೀವನಗೊಳಿಸಿದರೆ ಕನಿಷ್ಠ ಡಿಸೆಂಬರ್‌ವರೆಗೆ ಕೃಷಿಗದ್ದೆಗಳಿಗೆ ನೀರು ಪೂರೈಕೆ ಮಾಡಿ, ಇಲ್ಲಿ ತೀವ್ರವಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬಹುದು ಎಂಬುದು ಪಂಚಾಯಿತಿ ಅಧ್ಯಕ್ಷರ ಆಶಯವಾಗಿದೆ.
undefined
ಭವಿಷ್ಯದಲ್ಲಿ ಊರಿಗೆ ಕುಡಿಯುವುದಕ್ಕೆ - ಕೃಷಿಗೆ ನೀರಿನ ಭರವಸೆಯಾದರೆ, ಪ್ರಸ್ತುತ ಉದ್ಯೋಗವಿಲ್ಲದೆ ತಲೆಮೇಲೆ ಕೈಹೊತ್ತಿದ್ದ ಸುಮಾರು 25 ಬಡ ಕೂಲಿ ಕಾರ್ಮಿಕರ ಕುಟುಂಬಗಳಿಗೆ ಈ ಕೆರೆ ಕಾಮಗಾರಿ ಆಸರೆಯಾಗಿರುವುದು ವಾಸ್ತವವಾಗಿದೆ.
undefined
ಕೊರೋನಾ ಲಾಕ್‌ಡೌನ್‌ ಇನ್ನೆಷ್ಟುದಿನ ಮುಂದುವರಿಯುತ್ತದೋ ಗೊತ್ತಿಲ್ಲ, ಬಡವರಿಗೆ ಆಹಾರ ಕಿಟ್‌ಗಳನ್ನು ಇನ್ನೆಷ್ಟುದಿನ ವಿತರಿಸುವುದು ಎನ್ನುವುದೂ ಗೊತ್ತಿಲ್ಲ, ಇಂತಹ ಸಂದರ್ಭದಲ್ಲಿ ಅವ್ರಿಗೆ ಕೂಲಿ ಕೊಡುವಂತಹ ಯೋಜನೆ ಮಾಡ್ಬೇಕು ಎಂದೆಣಿಸಿ, 2 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಕೆರೆಯ ಪುನರುಜ್ಜೀವ ಮಾಡುತಿದ್ದೇವೆ ಎಂದು ಅಲೆವೂರು ಗ್ರಾಮ ಪಂಚಾಯತ್ ಅಧ್ಯಕ್ಷಶ್ರೀಕಾಂತ್‌ ನಾಯಕ್‌ ತಿಳಿಸಿದ್ದಾರೆ
undefined
click me!