Worlds Biggest Employers: ವಿಶ್ವದ ಕೆಲ ದೇಶಗಳ ಜನಸಂಖ್ಯೆಗಿಂತ ಹೆಚ್ಚು ಉದ್ಯೋಗಿಳು ಈ ಸಂಸ್ಥೆಗಳಲ್ಲಿದ್ದಾರೆ!

Published : Sep 30, 2023, 07:02 PM ISTUpdated : Sep 30, 2023, 07:03 PM IST

ಜಗತ್ತಿನಲ್ಲಿ ಕೆಲವೇ ಕೆಲವು ಕಂಪನಿಗಳು ಹಾಗೂ ಸರ್ಕಾರಿ ಇಲಾಖೆಗಳಿವೆ. ಅವುಗಳಲ್ಲಿ ಲಕ್ಷ ಲಕ್ಷ ಉದ್ಯೋಗಿಗಳಿದ್ದಾರೆ. ಅದರಲ್ಲೂ ವಿಶ್ವದ ಕೆಲವು ದೇಶಗಳಾದ, ಗ್ರೆನೆಡಾ ಹಾಗೂ ಕೆರಿಬಿಯನ್‌ ದ್ವೀಪ ಸಮೂಹದಲ್ಲಿರುವ ದೇಶಗಳ ಜನಸಂಖ್ಯೆಗಿಂತ ಹೆಚ್ಚಿನ ಉದ್ಯೋಗಿಗಳು ಈ ಕಂಪನಿಗಳಲ್ಲಿದ್ದಾರೆ. ಅವುಗಳ ಲಿಸ್ಟ್‌ ಇಲ್ಲಿದೆ.  

PREV
19
 Worlds Biggest Employers: ವಿಶ್ವದ ಕೆಲ ದೇಶಗಳ ಜನಸಂಖ್ಯೆಗಿಂತ ಹೆಚ್ಚು ಉದ್ಯೋಗಿಳು ಈ ಸಂಸ್ಥೆಗಳಲ್ಲಿದ್ದಾರೆ!

ಭಾರತದ ರಕ್ಷಣಾ ಇಲಾಖೆ: ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಇರುವುದು ಭಾರತದ ರಕ್ಷಣಾ ಇಲಾಖೆ. ಹೌದು ಭಾರತದ ರಕ್ಷಣಾ ಇಲಾಖೆಯಲ್ಲಿ ಅಂದಾಜು 29.90 ಲಕ್ಷ ಮಂದಿ ಉದ್ಯೋಗಿಗಳಿದ್ದಾರೆ.

29

ಅಮೆರಿಕ ರಕ್ಷಣಾ ಇಲಾಖೆ: ವಿಶ್ವದ ಅತಿದೊಡ್ಡ ಮಿಲಿಟರಿ ಶಕ್ತಿಯಾಗಿರುವ ಅಮೆರಿಕದ ರಕ್ಷಣಾ ಇಲಾಖೆ ವಿಶ್ವದ ಅತೀದೊಡ್ಡ ಉದ್ಯೋಗದಾತರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಅಮೆರಿಕ ರಕ್ಷಣಾ ಇಲಾಖೆಯಲ್ಲಿ 29.10 ಲಕ್ಷ ಮಂದಿ ಉದ್ಯೋಗಿಗಳಿದ್ದಾರೆ.

39

ಪೀಪಲ್ಸ್‌ ಲಿಬರೇಷನ್‌ ಆರ್ಮಿ: ಚೀನಾದ ಪೀಪಲ್ಸ್‌ ಲಿಬರೇಷನ್‌ ಆರ್ಮಿ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಚೀನಾದ ಪ್ರಮುಖ ಸೈನಿಕ ದಳ. 25.50 ಲಕ್ಷ ಮಂದಿ ಉದ್ಯೋಗಿಗಳು ಇದರಲ್ಲಿದ್ದಾರೆ.

49

ವಾಲ್‌ಮಾರ್ಟ್‌: ಸ್ಯಾಮ್‌ ವಾಲ್ಟನ್‌ ಹಾಗೂ ಬುಡ್‌ ವ್ಯಾಲ್ಟನ್‌ರಿಂದ 1962ರಲ್ಲಿ ಆರಂಭವಾದ ಕಂಪನಿ ವಾಲ್‌ಮಾರ್ಟ್‌. ಅಮೆರಿಕದ ಈ ಕಂಪನಿ 23 ಲಕ್ಷ ನೌಕರರನ್ನು ಹೊಂದಿದೆ.

59

ಅಮೇಜಾನ್‌: ಜೆಫ್‌ ಬೆಜೋಸ್‌ರಿಂದ 1994ರಲ್ಲಿ ಆರಂಭವಾದ ಕಂಪನಿ ಅಮೇಜಾನ್‌. ಇದು ಬಹುತೇಕ ದೇಶಗಳಲ್ಲಿ ತನ್ನ ನೆಲೆ ಹೊಂದಿರುವ ಈ ಕಂಪನಿ 16.10 ಲಕ್ಷ ಉದ್ಯೋಗಿಗಳನ್ನು ಹೊಂದಿದೆ.

69

ನ್ಯಾಷನಲ್‌ ಪೆಟ್ರೋಲಿಯಂ ಕಾರ್ಪೋರೇಷನ್‌: ಚೀನಾದ ನ್ಯಾಷನಲ್‌ ಪೆಟ್ರೋಲಿಯಂ ಕಾರ್ಪೋರೇಷನ್‌ 35 ವರ್ಷಗಳ ಹಿಂದೆ ಆರಂಭವಾದ ಕಂಪನಿ. 14.50 ಲಕ್ಷ ನೌಕರರನ್ನು ಈ ಕಂಪನಿ ಹೊಂದಿದೆ.

79

ನ್ಯಾಷನಲ್‌ ಹೆಲ್ತ್‌ ಸರ್ವೀಸ್‌: ಇಂಗ್ಲೆಂಡ್‌ನಲ್ಲಿ ಸಾರ್ವಜನಿಕ ಫಂಡ್‌ನಲ್ಲಿ ನಡೆಯತ್ತಿರುವ ಕಂಪನಿ ನ್ಯಾಷನಲ್‌ ಹೆಲ್ತ್‌ ಸರ್ವೀಸ್‌.  ಇದು 13.80 ಲಕ್ಷ ನೌಕರರನ್ನು ಹೊಂದಿದೆ.

89

ಫಾಕ್ಸ್‌ಕಾನ್‌: ವಿಶ್ವದ ಅತಿದೊಡ್ಡ ಎಲೆಕ್ಟ್ರಾನಿಕ್ಸ್‌ಗಳ ಕಾಂಟ್ರಾಕ್ಟ್‌ ಉತ್ಪಾದಕ ಕಂಪನಿ. ತೈವಾನ್‌ನ ಈ ಕಂಪನಿಯಲ್ಲಿ 12.90 ಲಕ್ಷ ನೌಕರರು ಕೆಲಸ ಮಾಡುತ್ತಿದ್ದಾರೆ.

ಆತನ ಜೊತೆ ಸೆಕ್ಸ್‌ ನಿರಾಕರಿಸಿದೆ, ಅರ್ಧ ಶೂಟ್‌ ಆದ ಚಿತ್ರದಿಂದ ನನ್ನ ಹೊರಹಾಕಿದ್ರು ಎಂದ ನಟಿ

99
indian railways

ಭಾರತೀಯ ರೈಲ್ವೆ: ವಿಶ್ವದ ಅತಿದೊಡ್ಡ ಉದ್ಯೋಗದಾತ ಕಂಪನಿಗಳಲ್ಲಿ ಭಾರತದ ಇನ್ನೊಂದು ಕಂಪನಿ ಇದ್ದರೆ ಅದು ಭಾರತೀಯ ರೈಲ್ವೆ. 12.12 ಲಕ್ಷ ನೌಕರರನ್ನು ಭಾರತೀಯ ರೈಲ್ವೆ ಹೊಂದಿದೆ.

ಮುಂಬೈ ಮೂಲದ ಸ್ಟಾರ್‌ ಕ್ರಿಕೆಟಿಗನ ಜೊತೆ ಕರ್ನಾಟಕದ ಪ್ರಖ್ಯಾತ ನಟಿಯ ಮದುವೆ?

Read more Photos on
click me!

Recommended Stories