ಐಟಿ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಲೇಆಫ್‌ಗಳು ನಡೆಯುತ್ತಿವೆ. ಕೆಲಸ ಕಳೆದುಕೊಂಡ ಅನೇಕರು ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಆದರೆ, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಒರಾಕಲ್ ಕಂಪನಿಯ ಮಾಜಿ ಇಂಜಿನಿಯರ್ ಒಬ್ಬರು, ಕೆಲಸ ಹೋದರೂ ಪರಿಸ್ಥಿತಿಯನ್ನು ಎದುರಿಸುತ್ತಿರುವ ರೀತಿ ವೈರಲ್ ಆಗಿದೆ.
ಒರಾಕಲ್ ಕಂಪನಿಯಿಂದ ಲೇಆಫ್ ಆದ ತಕ್ಷಣ ಈ ಇಂಜಿನಿಯರ್ ಬೆಂಗಳೂರಿನಲ್ಲೇ ಬೇರೆ ಕೆಲಸ ಹುಡುಕಲಿಲ್ಲ. ಬದಲಾಗಿ, ಅವರು ತಮ್ಮ ತವರೂರಾದ ಒಡಿಶಾದ ಭುವನೇಶ್ವರಕ್ಕೆ ಮರಳಿದರು. ಅಲ್ಲಿ ತಮ್ಮ ಪೋಷಕರೊಂದಿಗೆ ವಾಸಿಸುತ್ತಾ, ಮೆಟ್ರೋ ನಗರದ ದುಬಾರಿ ಖರ್ಚುಗಳನ್ನು ಕಡಿಮೆ ಮಾಡಿಕೊಂಡರು. ಇದರಿಂದ ಅವರ ಜೀವನ ವೆಚ್ಚವೂ ಕಡಿಮೆಯಾಯಿತು.
26
ಡ್ರೈವಿಂಗ್ ಕೌಶಲ್ಯದಿಂದ ಹೊಸ ಆದಾಯ
ಅವರಿಗೆ ಮೊದಲೇ ಡ್ರೈವಿಂಗ್‌ನಲ್ಲಿ ಕೌಶಲ್ಯವಿತ್ತು. ಅದನ್ನು ಬಳಸಿಕೊಂಡು ಅವರು ಊಬರ್ ಡ್ರೈವರ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ಅಗತ್ಯವಿದ್ದಾಗ ಮಾತ್ರ ಕೆಲಸ ಮಾಡುತ್ತಾ, ತಮಗೆ ಬೇಕಾದಷ್ಟು ಆದಾಯ ಗಳಿಸುತ್ತಿದ್ದಾರೆ. ಈ ನಿರ್ಧಾರವು ಆರ್ಥಿಕ ಒತ್ತಡದಿಂದಲ್ಲ, ಬದಲಾಗಿ ಸುಮ್ಮನೆ ಕೂರಬಾರದು ಎಂಬ ಯೋಚನೆಯಿಂದ ಬಂದಿದೆ.
36
ಮುಂಚಿತವಾಗಿಯೇ ಮಾಡಿದ ಉಳಿತಾಯವೇ ಬಲ
ಈ ಕಥೆಯನ್ನು ನಾಯಕ ಸತ್ಯ ಎಂಬುವವರು 'X' (ಹಿಂದಿನ ಟ್ವಿಟರ್) ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರ ಪ್ರಕಾರ, ಈ ಇಂಜಿನಿಯರ್ ಬಹಳ ಹಿಂದಿನಿಂದಲೇ ವ್ಯವಸ್ಥಿತವಾಗಿ ಉಳಿತಾಯ ಮಾಡುತ್ತಿದ್ದರು. ಅವರನ್ನು ಒರಾಕಲ್ ಕಂಪನಿಯು ಕಿಕೌಟ್ ಮಾಡುವ ಮುನ್ನ ಅವರ ಬಳಿ ಸುಮಾರು 60 ಲಕ್ಷ ರುಪಾಯಿ ಉಳಿತಾಯವಿತ್ತು. ಪೋಸ್ಟಲ್ ಸ್ಕೀಮ್‌ಗಳಲ್ಲಿ ತಲಾ 15 ಲಕ್ಷ ರೂಪಾಯಿಯಂತೆ ಎರಡು ಜಂಟಿ ಖಾತೆಗಳಲ್ಲಿ ಹೂಡಿಕೆ ಮಾಡಿದ್ದಾರೆ. ಒಂದು ಖಾತೆ ಪೋಷಕರೊಂದಿಗೆ ಮತ್ತು ಇನ್ನೊಂದು ಪತ್ನಿಯೊಂದಿಗೆ ಇದೆ. ಹೆಚ್ಚುವರಿಯಾಗಿ, ತಮ್ಮ ಮಕ್ಕಳ ಹೆಸರಿನಲ್ಲೂ ಸಣ್ಣ ಮೊತ್ತದ ಠೇವಣಿ ಇಟ್ಟಿದ್ದಾರೆ.
ಈ ಹೂಡಿಕೆಗಳಿಂದ ಅವರಿಗೆ ಪ್ರತಿ ತಿಂಗಳು ಸುಮಾರು 28,000 ರೂಪಾಯಿ ಬಡ್ಡಿ ಬರುತ್ತದೆ. ಇದರ ಜೊತೆಗೆ, ವಿವಿಧ ಬ್ಯಾಂಕ್‌ಗಳಲ್ಲಿ ಸುಮಾರು 30 ಲಕ್ಷ ರೂಪಾಯಿಗಳ ಫಿಕ್ಸೆಡ್ ಡೆಪಾಸಿಟ್ ಇಟ್ಟಿದ್ದಾರೆ. ಅವುಗಳಿಂದ ತಿಂಗಳಿಗೆ ಮತ್ತೊಂದು 15,000 ರೂಪಾಯಿ ಬಡ್ಡಿ ಬರುತ್ತದೆ. ಒಟ್ಟಾರೆಯಾಗಿ, ತಿಂಗಳಿಗೆ 40,000 ರೂಪಾಯಿಗಿಂತ ಹೆಚ್ಚು ನಿಶ್ಚಿತ ಆದಾಯ (passive income) ಬರುತ್ತಿದೆ. ಹೀಗಾಗಿ, ಕೆಲಸ ಹೋದರೂ ಅವರಿಗೆ ಆರ್ಥಿಕ ಒತ್ತಡವಿಲ್ಲ.
56
ಈಗ ಹೊಸ ವ್ಯಾಪಾರದತ್ತ ಚಿತ್ತ
ಈಗ ಅವರು ತಮ್ಮ ಪೋಷಕರೊಂದಿಗೆ ಸೇರಿ ಒಂದು ಸಣ್ಣ ವ್ಯಾಪಾರವನ್ನು ಪ್ರಾರಂಭಿಸುವ ಯೋಜನೆಯಲ್ಲಿದ್ದಾರೆ. ಈ ಹಂತವನ್ನು ಅವರು ಸಮಸ್ಯೆಯಾಗಿ ನೋಡದೆ, ಒಂದು ಬದಲಾವಣೆಯಾಗಿ ಸ್ವೀಕರಿಸಿದ್ದಾರೆ. ಮುಖ್ಯವಾಗಿ, ಅವರಿಗೆ ಯಾವುದೇ ಸಾಲ ಅಥವಾ ಇಎಂಐಗಳಿಲ್ಲ. ಅದಕ್ಕಾಗಿಯೇ ಅವರು ಪರಿಸ್ಥಿತಿಯನ್ನು ಶಾಂತವಾಗಿ ಎದುರಿಸುತ್ತಿದ್ದಾರೆ.
66
ಸರಿಯಾದ ಪ್ಲಾನ್ ಇದ್ದರೇ ಲೇ ಆಫ್‌ಗೆ ಹೆದರಬೇಕಿಲ್ಲ!
ಈ ಕಥೆಯನ್ನು ನೋಡಿದ ಸೋಶಿಯಲ್ ಮೀಡಿಯಾ ಬಳಕೆದಾರರು ಅವರ ಯೋಚನೆಯನ್ನು ಶ್ಲಾಘಿಸುತ್ತಿದ್ದಾರೆ. ಸರಿಯಾದ ಉಳಿತಾಯ ಮತ್ತು ಸರಳ ಜೀವನಶೈಲಿ ಇದ್ದರೆ ಯಾವುದೇ ಪರಿಸ್ಥಿತಿಯನ್ನು ಸುಲಭವಾಗಿ ಎದುರಿಸಬಹುದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.