ಇತ್ತೀಚಿನ ದಿನಗಳಲ್ಲಿ ಮಹಿಳೆಯರು ತಮ್ಮ ಕಾಲ ಮೇಲೆ ನಿಲ್ಲುವುದು ತುಂಬಾ ಮುಖ್ಯ, ಆದರೆ ಪರಿಸ್ಥಿತಿಗಳಿಂದಾಗಿ ನೀವು ಇನ್ನೂ ಇತರರ ಮೇಲೆ ಅವಲಂಬಿತರಾಗಿದ್ದರೆ ಮತ್ತು ನಿಮ್ಮ ವಯಸ್ಸು ಹೊಸ ವೃತ್ತಿಜೀವನದ(Professional life) ಆರಂಭದಲ್ಲಿ ಅಡ್ಡಿಯಾಗುತ್ತಿದ್ದರೆ, ಅದು ಸಂಪೂರ್ಣವಾಗಿ ನಿಮ್ಮ ಇಚ್ಛಾಶಕ್ತಿಯ ಮೇಲೆ ಅವಲಂಬಿತವಾಗಿದೆ.
ವಾಸ್ತವವಾಗಿ, 50 ನೇ ವಯಸ್ಸಿನಲ್ಲಿ, ಮಹಿಳೆಯರು ತಮಗೆ ಯಾವುದೇ ರೀತಿಯ ಉದ್ಯೋಗ(Job) ಸಿಗೋದಿಲ್ಲ ಎಂದು ಯೋಚಿಸುತ್ತಾ ಕುಳಿತುಕೊಳ್ಳುತ್ತಾರೆ, ಅವರು ಉದ್ಯೋಗವನ್ನು ಹುಡುಕಲು ನಿರ್ಧರಿಸಿದರೂ, ಕುಟುಂಬವು ಅವರನ್ನು ಪ್ರೇರೇಪಿಸೋದಿಲ್ಲ. ಹಾಗಾಗಿ ನೀವು ನಿಮ್ಮನ್ನು ಪ್ರೊಫೆಷನಲ್ ಮಹಿಳೆಯಾಗಿ ನೋಡಲು ಬಯಸಿದರೆ ಮತ್ತು ಉದ್ಯೋಗಕ್ಕಾಗಿ ಹುಡುಕುತ್ತಿದ್ದರೆ, ನಿಮಗೆ ಸಹಾಯ ಮಾಡಲು ಇಲ್ಲಿ ಅತ್ಯುತ್ತಮ ವೃತ್ತಿಜೀವನದ (Career) ಆಯ್ಕೆಗಳನ್ನು ಹೇಳಲಾಗಿದೆ.
50 ರ ದಶಕದಲ್ಲಿ ಮಹಿಳೆಯರಿಗೆ ವೃತ್ತಿಜೀವನದ ಆಯ್ಕೆಗಳು
ಕೌನ್ಸಿಲರ್ (Counsellor)
ನೀವು ಕುಟುಂಬ (Family), ಮದುವೆ (Wedding), ಮಗು ಇತ್ಯಾದಿಗಳ ಬಗ್ಗೆ ಕೌನ್ಸೆಲಿಂಗ್ ಪದವಿಯನ್ನು ತೆಗೆದುಕೊಂಡರೆ, ಆಗ ನೀವು 50 ನೇ ವಯಸ್ಸಿನಲ್ಲಿ ಉತ್ತಮ ಸಲಹೆಗಾರರಾಗುವ ಮೂಲಕ ಉತ್ತಮ ಸಂಪಾದನೆ ಮಾಡಬಹುದು. ಅನೇಕ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಆಪ್ತಸಮಾಲೋಚಕರಿಗೆ ಬೇಡಿಕೆಯಿದೆ, ಅಲ್ಲಿ ವಯಸ್ಸಿನ ಅಡೆತಡೆಗಳಿಲ್ಲ.
ಟ್ಯೂಟರ್ (Tutor)
ನೀವು ಈ ಮೊದಲು ಶಾಲಾ ಕಾಲೇಜಿನಲ್ಲಿ ಕಲಿಸಿದ್ದರೆ, 50 ನೇ ವಯಸ್ಸಿನಲ್ಲಿಯೂ ಟ್ಯೂಷನ್ ಕಲಿಸುವ ಮೂಲಕ ವೃತ್ತಿಜೀವನವನ್ನು ಸುಲಭವಾಗಿ ಪ್ರಾರಂಭಿಸಬಹುದು. ಆನ್ಲೈನ್ ಮತ್ತು ಆಫ್ಲೈನ್ ಎರಡರಲ್ಲೂ ವಿದ್ಯಾರ್ಥಿಗಳಿಗೆ ಪಾಠ ಕಲಿಸುವ ಮೂಲಕ ಹಣ ಗಳಿಸಬಹುದು.
ಫ್ರೀಲಾನ್ಸ್ ರೈಟರ್(Freelance writer)
ನೀವು ಬರೆಯಲು ಬಯಸಿದರೆ ಮತ್ತು ನಿಮ್ಮ ಬರವಣಿಗೆ ಉತ್ತಮವಾಗಿದ್ದರೆ, 50 ವರ್ಷದ ನಂತರ ಬರವಣಿಗೆ ಕ್ಷೇತ್ರದಲ್ಲಿ ಹೊಸ ವೃತ್ತಿಜೀವನವನ್ನು ಪ್ರಾರಂಭಿಸಬಹುದು. ಪ್ರಯಾಣ (Travel), ಕುಟುಂಬ, ಮಹಿಳೆ, ಮದುವೆ, ಕಾನೂನು ಅಥವಾ ವೆಬ್ಸೈಟ್ ಇತ್ಯಾದಿಗಳಿಗಾಗಿ ನಿಮ್ಮ ಆಯ್ಕೆಯ ಯಾವುದೇ ವಿಷಯದ ಬಗ್ಗೆ ಬರೆಯಬಹುದು ಮತ್ತು ಉತ್ತಮವಾಗಿ ಸಂಪಾದಿಸಬಹುದು.
ಸ್ಟೋರಿ ಟೆಲ್ಲರ್(Story teller)
ನೀವು ನಿಮ್ಮನ್ನು ಪುಸ್ತಕದ ಹುಳು ಎಂದು ಪರಿಗಣಿಸಿದರೆ ಮತ್ತು ಓದುವುದನ್ನು ಇಷ್ಟಪಡುತ್ತಿದ್ದರೆ, ಆಗ ನೀವು ಮಕ್ಕಳಿಗೆ ಉತ್ತಮ ಕಥೆಗಾರರಾಗಬಹುದು. ಶಾಲೆಗಳು ಅಥವಾ ರೀಡಿಂಗ್ ಕ್ಲಬ್ ಗಳಲ್ಲಿ, ಕಥೆ ಹೇಳುವವರು ಉತ್ತಮ ಉದ್ಯೋಗ ಆಯ್ಕೆಯಾಗಿದ್ದು, ಅಲ್ಲಿ ಚಿಕ್ಕ ಮಕ್ಕಳಿಗೆ ಓದಿಸಲಾಗುತ್ತೆ ಮತ್ತು ಕಥೆಗಳನ್ನು ಹೇಳಲಾಗುತ್ತೆ. ಬ್ಲಾಗ್ ಅಥವಾ ಚಾನೆಲ್ ಸ್ಟಾರ್ಟ್ ಮಾಡೋ ಮೂಲಕ ನೀವು ಪ್ರಸಿದ್ಧ ಕಥೆ ಹೇಳುವವರಾಗಬಹುದು.
ರಿಯಲ್ ಎಸ್ಟೇಟ್ ಏಜೆಂಟ್(Real estate agent)
ರಿಯಲ್ ಎಸ್ಟೇಟ್ ಏಜೆಂಟರಾಗಿ, 50 ವರ್ಷಕ್ಕಿಂತ ಮೇಲ್ಪಟ್ಟ 60 ಪ್ರತಿಶತದಷ್ಟು ಮಹಿಳೆಯರು ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಉತ್ತಮ ಸಂಪಾದನೆ ಮಾಡುತ್ತಿದ್ದಾರೆ. ನೀವು ಈ ಕ್ಷೇತ್ರದಲ್ಲಿ ನಿಮ್ಮ ಏನಾದರೂ ಪ್ರಯತ್ನಿಸಲು ಬಯಸಿದರೆ, ನೀವು ಆನ್ ಲೈನ್ ಕೋರ್ಸ್ (Online Course) ಮಾಡುವ ಮೂಲಕ ನಿಮ್ಮನ್ನು ನೀವು ಅಪ್ಡೇಟ್ ಮಾಡಬಹುದು.
ಪರ್ಸನಲ್ ಚೆಫ್ (Personal chef)
50 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ, ಪರ್ಸನಲ್ ಚೆಫ್ ಆಗೋದು ಅವರನ್ನು ಆರ್ಥಿಕವಾಗಿ ಸದೃಢಗೊಳಿಸುವ ಒಂದು ಆಯ್ಕೆಯಾಗಿದೆ. ನೀವು ಅಡುಗೆ ಮಾಡಲು ಬಯಸಿದರೆ, ಈ ಕ್ಷೇತ್ರದಲ್ಲಿ ಮುಂದುವರಿಯಬಹುದು. ನೀವು ಬಯಸಿದರೆ, ಅಡುಗೆ ಪುಸ್ತಕವನ್ನು ಬರೆಯುವ ಮತ್ತು ಮಾರ್ಕೆಟಿಂಗ್ (Marketing) ಮಾಡುವ ಮೂಲಕ ಅಥವಾ ಅಡುಗೆ ತರಗತಿ (Chef Traning) ಮತ್ತು ಕ್ಯಾಟರಿಂಗ್ (Categoring) ಮಾಡುವ ಮೂಲಕ ಉತ್ತಮವಾಗಿ ಸಂಪಾದಿಸಬಹುದು.