IPL 2020 : ದುಬೈಯಲ್ಲಿ ಕ್ರಿಕೆಟರ್ಸ್‌ ಏನು ತಿನ್ತಾರೆ ನೋಡಿ

First Published Oct 17, 2020, 7:31 PM IST

ದುಬೈನ ನೈಟ್‌ ಲೈಫ್‌  ಜೊತೆಗೆ,  ಆಹಾರವು ವಿಶ್ವ ಪ್ರಸಿದ್ಧವಾಗಿದೆ. ಅಲ್ಲಿನ ಸಾಂಪ್ರಾದಾಯಿಕ  ಆಹಾರದಲ್ಲಿ ಸಮೃದ್ಧವಾಗಿರುವ ಮಸಾಲೆ ಪದಾರ್ಥಗಳನ್ನು ಬಳಸುವುದರ ಮೂಲಕ ರುಚಿಯನ್ನು ಇನ್ನಷ್ಟು ಹೆಚ್ಚಿಸಲಾಗುತ್ತದೆ. ಐಪಿಎಲ್‌ ಟೂರ್ನಿಮೆಂಟ್‌ಗಾಗಿ ಅಲ್ಲಿರುವ ಆಟಗಾರರು ಫುಡ್‌ ಎಂಜಾಯ್‌ ಮಾಡುತ್ತಿದ್ದಾರೆ. ಈ ಆಟಗಾರರು ತಮ್ಮ ಹೋಟೆಲ್‌ಗಳ ರುಚಿಕರವಾದ ಆಹಾರದ ಫೋಟೋಗಳನ್ನು ಶೇರ್‌ ಮಾಡಿದ್ದಾರೆ. ದುಬೈನ ದುಬಾರಿ ಹೋಟೆಲ್‌ನಲ್ಲಿ  ಯಾವ ಕ್ರಿಕೆಟಿಗರು ಯಾವ ಡಿಶ್‌ ತಿನ್ನುತ್ತಿದ್ದಾರೆ ಇಲ್ಲಿದೆ ಫೋಟೋಗಳು.

ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ತಮ್ಮ ಫಿಟ್‌ನೆಸ್ ಮತ್ತು ಡಯಟ್ ಬಗ್ಗೆ ತುಂಬಾ ಸ್ಟ್ರಿಕ್ಟ್‌. Alkaline ವಾಟರ್‌ ಹಿಡಿದು ಗ್ರಿಲ್ದ್‌ ಅಥವಾ ಬಾಯಿಲ್ಡ್‌ ಆಹಾರ ತಿನ್ನಲು ಇಷ್ಟಪಡುತ್ತಾರೆ. ವಿರಾಟ್ ತನ್ನ ಪತ್ನಿ ಅನುಷ್ಕಾ ಜೊತೆ ದುಬೈನ ವಾಲ್ಡೋರ್ಫ್ ಆಸ್ಟೋರಿಯಾದಲ್ಲಿ ಉಳಿದುಕೊಂಡಿದ್ದಾರೆ.
undefined
ಕಿಂಗ್ಸ್ ಇಲೆವೆನ್ ಪಂಜಾಬ್‌ನ ಆಲ್‌ರೌಂಡರ್ ಕ್ರಿಸ್ ಗೇಲ್‌ಗೆಸ್ವಲ್ಪ ಸಮಯದ ಹಿಂದೆ ದುಬೈನಲ್ಲಿ ಫುಡ್‌ ಪಾಯಿಸನ್‌ ಆಗಿತ್ತು. ಈ ಸಮಯದಲ್ಲಿ, ಅವರು ಲೈಟ್‌ ಫುಡ್‌ ಮಾತ್ರ ತೆಗೆದುಕೊಳ್ಳುತ್ತಿದ್ದಾರೆ. ದುಬೈನ ಹೋಟೆಲ್ ಸೋಫಿಟೆಲ್‌ನಲ್ಲಿ ತಂಗಿರುವ ಅವರು ಇತ್ತೀಚೆಗೆ ತಮ್ಮ ಸ್ಟ್ರಾಬೆರಿ ತಿನ್ನುವ ಫೋಟೋ ಹಂಚಿಕೊಂಡಿದ್ದಾರೆ.
undefined
ಸಿಎಸ್‌ಕೆ ಸ್ಟಾರ್ ಪ್ಲೇಯರ್ ಶೇನ್ ವ್ಯಾಟ್ಸನ್ ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ (ಎಂಎಸ್ ಧೋನಿ) ಕೂಡ ದುಬೈನ ಹೋಟೆಲ್ ತಾಜ್‌ನಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಈ ಸಮಯದಲ್ಲಿ, ಇಬ್ಬರೂ ಹೋಟೆಲ್‌ನಲ್ಲಿ ಉಪಾಹಾರ ಸೇವಿಸುತ್ತಿದ್ದರು.
undefined
ಅಬುಧಾಬಿಯ ಸೇಂಟ್ ರೆಗಿಸ್ ಸಡಿಯಾಟ್ ಐಲ್ಯಾಂಡ್‌ ರೆಸಾರ್ಟ್‌ನಲ್ಲಿ ಉಳಿದುಕೊಂಡಿರುವ ಮುಂಬೈನ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತನ್ನ ನೆಚ್ಚಿನ ಎನರ್ಜಿ ಡ್ರಿಂಕ್ ಕುಡಿಯಲು ಎಂದಿಗೂ ಮರೆಯುವುದಿಲ್ಲ.
undefined
ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ತಮ್ಮ ಹೋಟೆಲ್‌ನ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಒನ್ ಅಂಡ್ ಓನ್ಲಿ ದಿ ಪಾಮ್ ದುಬೈನಲ್ಲಿ ಉಳಿದು ಕೊಂಡಿರುವ ಉತ್ತಪ್ಪ ಬಾರ್ಬೆಕ್ಯೂ ಎಂಜಾಯ್‌ ಮಾಡುತ್ತಿದ್ದಾರೆ.
undefined
ಕೋಲ್ಕತಾ ನೈಟ್ ರೈಡರ್ಸ್ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ತಮ್ಮ ಹೋಟೆಲ್ ಕೋಣೆಯ ಬಾಲ್ಕನಿಯಲ್ಲಿ ಚಿಲ್‌ ಮಾಡುತ್ತಿರುವ ಫೋಟೋ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಅವರು ಆರೋಗ್ಯಕರ ಆಹಾರ ಮತ್ತು ಜ್ಯೂಸ್‌ ಸೇವಿಸುವುದನ್ನು ಕಾಣಬಹುದು. ಅವರು ಅಬುಧಾಬಿಯ ದಿ ರಿಟ್ಜ್-ಕಾರ್ಲ್ಟನ್‌ನಲ್ಲಿ ತಂಗಿದ್ದಾರೆ.
undefined
ಹಾರ್ದಿಕ್ ಪಾಂಡ್ಯ ಸಹೋದರ ಮತ್ತು ಮುಂಬೈ ಇಂಡಿಯನ್ಸ್ ಆಲ್‌ರೌಂಡರ್ ಕ್ರುನಾಲ್ ಪಾಂಡ್ಯ ಅಬುಧಾಬಿಯ ಹೋಟೆಲ್ ಸೇಂಟ್ ರೆಗಿಸ್ ಸಾದಿಯಾತ್‌ನಲ್ಲಿರುವ ತಮ್ಮ ಅನೇಕ ಫೋಟೋಗಳನ್ನು ಶೇರ್‌ ಮಾಡಿದ್ದಾರೆ.
undefined
click me!