ಈ ಮೂರು ತಂಡಗಳು ಖಚಿತವಾಗಿ ಪ್ಲೇ ಆಫ್ ಪ್ರವೇಶಿಸುತ್ತವೆ; ಭವಿಷ್ಯ ನುಡಿದ ಅಜಿತ್ ಅಗರ್‌ಕರ್

Suvarna News   | Asianet News
Published : Oct 17, 2020, 07:00 PM ISTUpdated : Oct 17, 2020, 07:43 PM IST

ಮುಂಬೈ: 13ನೇ ಆವೃತ್ತಿಯ ಐಪಿಎಲ್ ಟೂರ್ನಿ ದಿನದಿಂದ ದಿನಕ್ಕೆ ರೋಚಕ ಘಟ್ಟ ತಲುಪುತ್ತಿದೆ. ಹೀಗಿರುವಾಗಲೇ ಯಾವೆಲ್ಲಾ ತಂಡಗಳು ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಬಹುದು ಎನ್ನುವ ಲೆಕ್ಕಾಚಾರಗಳು ಜೋರಾಗಿದೆ. ಇದೀಗ ಟೀಂ ಇಂಡಿಯಾ ಮಾಜಿ ವೇಗಿ ಅಜಿತ್ ಅಗರ್‌ಕರ್ ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪ್ಲೇ ಆಫ್ ಪ್ರವೇಶಿಸಬಲ್ಲ ನಾಲ್ಕು ತಂಡಗಳ ಹೆಸರನ್ನು ಭವಿಷ್ಯ ನುಡಿದಿದ್ದಾರೆ. ಅಗರ್‌ಕರ್ ಪ್ರಕಾರ ಯಾವೆಲ್ಲಾ ತಂಡಗಳು ಪ್ಲೇ ಆಫ್ ಹಂತ ಪ್ರವೇಶಿಸಬಹುದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ.  

PREV
19
ಈ ಮೂರು ತಂಡಗಳು ಖಚಿತವಾಗಿ ಪ್ಲೇ ಆಫ್ ಪ್ರವೇಶಿಸುತ್ತವೆ; ಭವಿಷ್ಯ ನುಡಿದ ಅಜಿತ್ ಅಗರ್‌ಕರ್

ಅರಬ್ಬರ ನಾಡಿನಲ್ಲಿ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಕ್ರಿಕೆಟ್ ಕಲರವ ಜೋರಾಗಿದೆ.

29

ಇದೀಗ ಅರ್ಧ ಐಪಿಎಲ್ ಟೂರ್ನಿ ಮುಕ್ತಾಯವಾಗಿದ್ದು, ಯಾವೆಲ್ಲಾ ತಂಡಗಳು ಪ್ಲೇ ಆಫ್ ಹಂತ ಪ್ರವೇಶಿಸಬಹುದು ಎನ್ನುವ ಲೆಕ್ಕಾಚಾರ ಜೋರಾಗಿದೆ.

39

ಎಲ್ಲಾ 8 ತಂಡಗಳಿಗೂ ಈಗಲೂ ಪ್ಲೇ ಆಫ್ ಪ್ರವೇಶಿಸಲು ಸಮಾನ ಅವಕಾಶವಿದ್ದೂ, ಎಲ್ಲಾ 8 ತಂಡಗಳು ಪ್ಲೇ ಆಫ್‌ ಪ್ರವೇಶಿಸಲು ಜಿದ್ದಾಜಿದ್ದಿನ ಪೈಪೋಟಿ ನಡೆಸುತ್ತಿವೆ.

49

ಅಂಕಪಟ್ಟಿಯಲ್ಲಿ ಮೊದಲರೆಡು ಸ್ಥಾನದಲ್ಲಿರುವ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪ್ಲೇ ಆಫ್ ಪ್ರವೇಶಿಸಬಲ್ಲ ನೆಚ್ಚಿನ ತಂಡಗಳೆನಿಸಿವೆ.

59

ಹೀಗಿರುವಾಗಲೇ ಟೀಂ ಇಂಡಿಯಾ ಮಾಜಿ ವೇಗಿ ಅಜಿತ್ ಅಗರ್‌ಕರ್ ಪ್ಲೇ ಆಫ್ ಹಂತ ಪ್ರವೇಶಿಸಬಲ್ಲ ತಂಡಗಳನ್ನು ಹೆಸರಿಸಿದ್ದಾರೆ.

69

ಡೆಲ್ಲಿ ಕ್ಯಾಪಿಟಲ್ಸ್, ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತ ನೈಟ್‌ ರೈಡರ್ಸ್ ತಂಡಗಳು ಈ ಬಾರಿ ಪ್ಲೇ ಆಫ್ ಹಂತ ಪ್ರವೇಶಿಸಲಿದೆ ಎಂದು ಅಗರ್‌ಕರ್ ಭವಿಷ್ಯ ನುಡಿದಿದ್ದಾರೆ.

79

ಇನ್ನು ನಾಲ್ಕನೇ ಸ್ಥಾನಕ್ಕಾಗಿ ರಾಜಸ್ಥಾನ ರಾಯಲ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವೆ ಪೈಪೋಟಿ ಏರ್ಪಡಲಿದೆ ಎಂದು ಅಗರ್‌ಕರ್ ಅಭಿಪ್ರಾಯಪಟ್ಟಿದ್ದಾರೆ.

89

ಆದರೆ ಸದ್ಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರು ಹೇಳದಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.

99

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸದ್ಯ 9 ಪಂದ್ಯಗಳನ್ನಾಡಿ 6 ಗೆಲುವು ಹಾಗೂ 3 ಸೋಲುಗಳೊಂದಿಗೆ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

click me!

Recommended Stories