ಅಯ್ಯೋ ದೇವ್ರೇ.. ಗೂಗಲ್ ಸರ್ಚ್‌ನಲ್ಲಿ ಅನುಷ್ಕಾ ಶರ್ಮಾ ಪತಿ ರಶೀದ್ ಖಾನ್ ಎಂದು ತೋರಿಸುತ್ತಿರುವುದೇಕೆ..?

Suvarna News   | Asianet News
Published : Oct 12, 2020, 08:09 PM IST

ಬೆಂಗಳೂರು: ಇದು ಕೇಳೋಕೆ ವಿಚಿತ್ರವಾದರೂ ಸತ್ಯ. ಗೂಗಲ್‌ನಲ್ಲಿ ನೀವು ಆಫ್ಘಾನಿಸ್ತಾನದ  ಲೆಗ್‌ ಸ್ಪಿನ್ನರ್ ರಶೀದ್ ಖಾನ್ ಪತ್ನಿ ಯಾರೆಂದು ಹುಡುಕಿದರೆ ಬಾಲಿವುಡ್ ನಟಿ ಹಾಗೂ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಎಂದು ತೋರಿಸುತ್ತಿದೆ. ಅರೇ ಇದೆಂತಾ ವಿಚಾರ ಅಂತೀರಾ..? ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಎನ್ನುವುದು ಇಡೀ ಜಗತ್ತಿಗೇ ಗೊತ್ತು. ಹೀಗಿದ್ದೂ ಗೂಗಲ್‌ನಲ್ಲಿ ರಶೀದ್ ಖಾನ್ ಪತ್ನಿ ಅನುಷ್ಕಾ ಶರ್ಮಾ ಎಂದು ಗೂಗಲ್ ಹೇಳುತ್ತಿರುವುದೇಕೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.  

PREV
115
ಅಯ್ಯೋ ದೇವ್ರೇ.. ಗೂಗಲ್ ಸರ್ಚ್‌ನಲ್ಲಿ ಅನುಷ್ಕಾ ಶರ್ಮಾ ಪತಿ ರಶೀದ್ ಖಾನ್ ಎಂದು ತೋರಿಸುತ್ತಿರುವುದೇಕೆ..?

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 2017ರ ಡಿಸೆಂಬರ್‌ನಲ್ಲಿ ಇಟಲಿಯಲ್ಲಿ ಅನುಷ್ಕಾ ಶರ್ಮಾ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. 

215

ತೀರಾ ಖಾಸಗಿಯಾಗಿ ನಡೆದ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಹಾಗೂ ಆಯ್ದ ಕೆಲವೇ ಕೆಲವು ಆಹ್ವಾನಿತರು ಈ ತಾರಾ ಜೋಡಿಯ ವಿವಾಹಕ್ಕೆ ಸಾಕ್ಷಿಯಾಗಿದ್ದರು.

315

ಇನ್ನು ಐಪಿಎಲ್ ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಇರುವಾಗಲೇ ವಿರುಷ್ಕಾ ಜೋಡಿ ತಾವು ಸದ್ಯದಲ್ಲೇ ತಂದೆ-ತಾಯಿಯಾಗುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದರು

415

2021ರ ಜನವರಿ ವೇಳೆಗೆ ನಾವು ಮೂರು ಮಂದಿಯಾಗಲಿದ್ದೇವೆ ಎಂದು ಇನ್‌ಸ್ಟಾಗ್ರಾಂ ಮೂಲಕ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು.

515

ಇದೆಲ್ಲದರ ನಡುವೆ ಗೂಗಲ್ ಸರ್ಚ್ ಮಾಡಿದ ಒಂದು ಎಡವಟ್ಟು ಇದೀಗ ಸಾಕಷ್ಟು ಚರ್ಷೆಗೆ ಗ್ರಾಸವಾಗಿದೆ.

615
715

ನಿಮಗೇನಾದರೂ ಡೌಟ್ ಇದ್ರೆ ಈ ಸ್ಕ್ರೀನ್‌ ಶಾಟ್ ನೋಡಿ, ಈಗ ನಿಮಗೂ ಅಚ್ಚರಿಯಾಗುತ್ತಿದೆ ಅಲ್ವಾ.?

815

ಅರೇ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಹೆಸರು ರಶೀದ್ ಖಾನ್ ಜತೆ ತಳುಕು ಹಾಕಿಕೊಂಡಿದ್ದು ಹೇಗೆ ಎಂದು ಹುಬ್ಬೇರಿಸಬೇಡಿ.

915

ರಶೀದ್ ಖಾನ್‌ಗೂ ಅನುಷ್ಕಾ ಶರ್ಮಾಗೂ ಎಲ್ಲಿಯಾದೆಲ್ಲಿಂದ ಸಂಬಂಧ? ಗೂಗಲ್ ಯಾಕೆ ಹೀಗೆ ತೋರಿಸುತ್ತಿದೆ ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

1015

2018ರಲ್ಲಿ ಇನ್‌ಸ್ಟಾಗ್ರಾಂ ಲೈವ್‌ ವೇಳೆ ರಶೀದ್ ಖಾನ್‌ಗೆ ಅಭಿಮಾನಿಯೊಬ್ಬ ನಿಮ್ಮ ನೆಚ್ಚಿನ ಬಾಲಿವುಡ್ ತಾರೆ ಯಾರು ಎಂದು ಕೇಳಿದ್ದರು.

1115

ಅಭಿಮಾನಿಯ ಈ ಪ್ರಶ್ನೆಗೆ ರಶೀದ್ ಖಾನ್, ಅನುಷ್ಕಾ ಶರ್ಮಾ ಮತ್ತು ಪ್ರೀತಿ ಜಿಂಟಾ ಎಂದು ಉತ್ತರಿಸಿದ್ದರು.

1215

ರಶೀದ್ ಖಾನ್ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೆಂಡ್ ಆಗಿತ್ತು.

1315

ಆಗಿದ್ದಿಷ್ಟೇ, ರಶೀದ್ ಖಾನ್‌ಗೆ  ನಟಿ ಅನುಷ್ಕಾ ಶರ್ಮಾ ಫೇವರೇಟ್ ಅಂತೆ ಎನ್ನುವ ಸುದ್ದಿ ವೈರಲ್ ಆಗಿದ್ದರಿಂದ ಗೂಗಲ್ ರಶೀದ್ ಖಾನ್ ಪತ್ನಿ ಅನುಷ್ಕಾ ಎಂದು ತೋರಿಸುತ್ತಿದೆ.

1415

ಇನ್ನೂ ಮಜಾ ಏನಪ್ಪಾ ಅಂದ್ರೆ ಆಫ್ಘಾನಿಸ್ತಾನ ಕ್ರಿಕೆಟ್ ತಂಡದ ಉಪನಾಯಕ ರಶೀದ್ ಖಾನ್ ಇನ್ನೂ ಮದುವೆಯೇ ಆಗಿಲ್ಲ.

1515

ರಶೀದ್ ಖಾನ್ ಕಳೆದ ಜುಲೈ ವೇಳೆ ಆಫ್ಘಾನಿಸ್ತಾನಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಬಳಿಕ ತಾವು ವಿವಾಹವಾಗುವುದಾಗಿ ರಶೀದ್ ಖಾನ್ ಹೇಳಿದ್ದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories